ಲೇಡಿಸ್ ಡ್ರೆಸ್ಸಿಂಗ್ ರೂಮಲ್ಲಿ ಕ್ಯಾಮೆರಾ ಇಟ್ಟ ಆಸ್ಪತ್ರೆ ಸಿಬ್ಬಂದಿ ; ಮಹಿಳೆಯರೇ ಹುಷಾರ್. ಹುಷಾರ್

ಬೆಂಗಳೂರು : ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾವಣೆ ಮಾಡುವುದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ನಂತರ ಅದನ್ನು ಮನೆಗೆ ಹೋಗಿ ನೋಡುತ್ತಿದ್ದ ಕಾಮುಕನೋರ್ವ ಕೊನೆಗೂ ಅಂದರ್ ಆಗಿದ್ದಾನೆ.

ಹೌದು, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿರುವ 29 ವರ್ಷದ ಮಾಲತೇಶ್ ಎಂಬುವವನೇ ಈ ಕೆಲಸ ಮಾಡಿದ್ದು..

ಮಾಲತೇಶ್ ಆಸ್ಪತ್ರೆಯ ಆಪರೇಷನ್ ರೂಂ ನಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ಸಮಯಕ್ಕಾಗಿ ಕಾಯುತ್ತಿರುತ್ತಿದ್ದನಂತೆ. ಆ ವೇಳೆಗೆ ಮೊಬೈಲ್ ನಲ್ಲಿ ಕ್ಯಾಮೆರಾ ಆನ್ ಮಾಡಿ ಮೊಬೈಲ್ ಚಾರ್ಜ್ ಗೆ ಹಾಕುವ ನೆಪದಲ್ಲಿ ಬಟ್ಟೆ ಬದಲಿಸುವ ಕೊಠಡಿಯಲ್ಲಿ ಮೊಬೈಲ್ ಇಡುತ್ತಿದ್ದನು. ಈ ಮೂಲಕ ಮಹಿಳೆಯರು ಬಟ್ಟೆ ಬದಲಿಸುವುದನ್ನು ರೆಕಾರ್ಡ್ ಮಾಡುತ್ತಿದ್ದನು. ನಂತರ ಮನೆಯಲ್ಲಿ ಈತ ಆ ರೆಕಾರ್ಡಿಂಗ್ ನ್ನು ವೀಕ್ಷಿಸುತ್ತಿದ್ದನು.

ಕಾಮುಕ ತಗಲಾಕೊಂಡಿದ್ದು ಹೇಗೆ ಗೊತ್ತಾ..?

ಹೀಗೆ ತನ್ನ ಚಾಳಿ ಮುಂದುವರೆಸಿದ ಈತ ಒಂದು ದಿನ ಮೊಬೈಲ್ ಚಾರ್ಜ್ ಗೆ ಹಾಕಿದ್ದನು. ಚಾರ್ಜ್ ಗೆ ಹಾಕಿದ್ದ ಆತನ ಮೊಬೈಲ್ ನ್ನು ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ನಂತರ ಅನುಮಾನ ಬಂದು ಮೊಬೈಲ್ ವೀಕ್ಷಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಕೂಡಲೇ ಸಿಬ್ಬಂದಿ ಸಂಜಯ್ ಗಾಂಧಿ ಆಸ್ಪತ್ರೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಆಸ್ಪತ್ರೆ ಆಡಳಿತ ಮಂದಿ ಮಾಲತೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತಿಲಕ ನಗರ ಪೊಲೀಸರು ಮಾಲತೇಶ್ ನನ್ನು ಬಂಧಿಸಿದ್ದಾರೆ.

Leave a Reply

Your email address will not be published.