ನಿತ್ಯವಾಣಿ,ಚಿತ್ರದುರ್ಗ, ಮೇ.30 : ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ನಡೆದ ಕಾರುಗಳ ryali ನಡೆದಿದ್ದು, ಸುಮಾರು 60 ಕಿಲೋಮೀಟರ್ ವರಗೆ ಸ್ಪರ್ಧೆಯನ್ನು ಆಯೋಜಿಸಿತ್ತು, ಇದರಲ್ಲಿ 35 ಕಾರುಗಳು ಭಾಗವಹಿಸಿದ್ದವು ನಿನ್ನೆ ಭಾನುವಾರ ಬೆಳಗ್ಗೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಿ ರೋಟರಿ ಕ್ಲಬ್ ಅಫ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರಾದ ಸಿ ಎಸ್ ಶಿವಕುಮಾರ್ ಚಾಲನೆ ನೀಡಿದರು, ಇದರಲ್ಲಿ ಮೂರು ಪ್ರಶಸ್ತಿಗಳನ್ನು ಏರ್ಪಡಿಸಿದ್ದರು, ನಿನ್ನೆ ಸಂಜೆ ಪ್ರಶಸ್ತಿಯ ಕಾರ್ಯಕ್ರಮವನ್ನು ಮಹಡಿ ವಿಶ್ವನಾಥ್ ನಾಯಕತ್ವದ ಚಳ್ಳಕೆರೆ ರಸ್ತೆಯಲ್ಲಿರುವ ಟಯೋಟ ಶೋರೂಮ್ ನಲ್ಲಿ ಆಯೋಜಿಸಲಾಗಿತ್ತು, ಕ್ಲಬ್ ನ ಅಧ್ಯಕ್ಷರಾದ ಸಿಎಸ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ತೀರ್ಪುಗಾರರನ್ನು ನೇಮಿಸಿ ಸೂಕ್ಷ್ಮವಾಗಿ ಪರಿಗಣಿಸಿ ಮೂರು ಪ್ರಶಸ್ತಿಗಳನ್ನು ನೀಡಲಾಗಿತ್ತು, ಕಾರ್ಯಕ್ರಮದ ಆರಂಭದ ಜಾಹೀರಾತುಗಾಗಿ ಸಂಪರ್ಕಿಸಿ : 9901254020 ಮೊದಲನೆಯಾಗಿ ವೀಣಾ ಕೇದಾರ್, ಭೂಮಿಕಾ ಭಕ್ತಿಗೀತೆಯ ಮುಖಾಂತರ ಪ್ರಾರಂಭವಾಗಿ, ಪಿ ಎಲ್ ಸುರೇಶ್ ರಾಜ್ ಅವರು ನಿರೂಪಣೆ ಮಾಡಿದರು, ಮೂರು ಪ್ರಶಸ್ತಿಗಳನ್ನು ಎಲ್ ಆರ್ ವೆಂಕಟೇಶ್ ಕುಮಾರ್, ಆಶಾ ಶಾಂತಕುಮಾರ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಮರ್ಚೆಂಟ್ ಬ್ಯಾಂಕ್, ಕೊಡುಗೆಯಾಗಿ ನೀಡಿದ್ದರು, ತಡವಾಗಿ ಬಂದಂತಹ ತೀರ್ಪುಗಾರರ ರಿಸಲ್ಟ್ ಕೊನೆಗೂ ಅಚ್ಚರಿಯಂತೆ ಎಂ ಗಿರೀಶ್ ರವರು ಮೊದಲ ಪ್ರಶಸ್ತಿಯನ್ನು ಪಡೆದರು, ಎರಡನೇ ಪ್ರಶಸ್ತಿ ವಿಜೇತರು ಸಂತೋಷ್ ಕೋರ್, ಮೂರನೇ ಪ್ರಶಸ್ತಿ ವಿಜೇತರು ವೆಂಕಟೇಶ್ ಪ್ರಶಸ್ತಿ ಗಳನ್ನು ಪಡೆದರು, ಈ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಪ್ರತೀಕ್ ಜೋಷಿ, ಖಜಾಂಜಿ ಎಚ್ಕೆ ವಿಶ್ವನಾಥ್, ಎಂಕೆ ರವೀಂದ್ರ, ಎಲ್ ಕೆ ರವಿ, ಮಧುಸೂದನ್ ರೆಡ್ಡಿ, ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ, ದಿವಾಕರ್ ಸಂಕೋಳ್, ಆರ್ ಮಹಂತೇಶ್, ಆನಂದ್(ಆನೆ ), ಇನ್ನು ಮುಂತಾದ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು