ಬೆಂಗಳೂರು:ರಮೇಶ್ ಜಾರಕಿಹೊಳಿಯ ಸಿಡಿ ವಿಚಾರದಲ್ಲಿ ಐದು ಕೋಟಿ ಡೀಲ್ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೇಳಿಕೆಯ ವಿರುದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ತಮ್ಮ ಆಪ್ತರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿರುವ ದಿನೇಶ್ ಕಲ್ಲಹಳ್ಳಿ ‘ಕುಮಾರ ಸ್ವಾಮಿಯವರ ಆರೋಪದಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ಅವಮಾನವಾಗಿದೆ.ವಿನಾ ಕಾರಣ ನನ್ನ ಗೌರವ ಹಾಳು ಮಾಡಿದ್ದಾರೆ.ಈ ಹಿಂದೆ ಹತ್ತಾರು ಹೋರಾಟ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ.ಕಬ್ಬನ್ ಪಾರ್ಕ್ ನ ಪೋಲಿಸ್ ಠಾಣೆಗೆ ವಿಚಾರಣೆಗೆ ಬಂದ ಸಮಯದಲ್ಲೂ ಕುಮಾರಸ್ವಾಮಿಯ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದಿನೇಶ್, ‘ ಕುಮಾರಸ್ವಾಮಿಯವರು ನನ್ನ ವಿರುದ್ಧ ದೂರು ದಾಖಲು ಮಾಡಲಿ. ಅವರು ಹೇಳುವಂತೆ ಮೂರು ತಿಂಗಳ ಹಿಂದೆಯೇ ಐದು ಕೋಟಿ ಡೀಲ್ ನಡೆದಿದ್ದರೆ ಆಗಲೇ ದೂರು ಕೊಡಬಹುದಿತ್ತು’ ಎಂದಿದ್ದರು.
ರಮೇಶ್ ಜಾರಕಿಹೊಳಿಯ ವಿರುದ್ಧ ನೀಡಿದ್ದ ದೂರನ್ನು ವಾಪಾಸ್ ಪಡೆಯಲು ಕುಮಾರಸ್ವಾಮಿಯವರು ನನ್ನ ವಿರುದ್ಧ ಮಾಡಿದ ಆರೋಪವೇ ಕಾರಣ ಎಂದಿದ್ದಾರೆ.
ಈಗ ಕುಮಾರಸ್ವಾಮಿಯವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.