ರಮೇಶ್ ಜಾರಕಿಹೊಳೆ ಸಿಡಿ ಕೇಸ್ ನಲ್ಲಿ ಹಣದ ಆಮಿಷಕ್ಕೆ ಒಳಗಾದವನಲ್ಲ : ವಕೀಲ ಜಗದೀಶ್

 ನಿತ್ಯವಾಣಿ, ಚಿತ್ರದುರ್ಗ, (ಅ,28) : ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಸಲುವಾಗಿ ಪತ್ರಿಕಾಭವನದಲ್ಲಿ ಬೆಂಗಳೂರಿನ ವಕೀಲ ಜಗದೀಶ್ ಮಾತನಾಡುತ್ತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ನಾನು ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಒಳಗಾದವನಲ್ಲ,ನಾನು ಶ್ರೀಮಂತ ಕುಟುಂಬದಿಂದ ಬಂದವನು ನನಗೆ ಯಾವುದೇ ರೀತಿ ಹಣ ಕೊರತೆ ಇಲ್ಲ ನಾನು ನನಗೆ ಯಾರು ಹಣವನ್ನು ಕೊಡುತ್ತೇನೆ ಎಂದು ಹೇಳುವರು ಅವರನ್ನೇ ನಾನು ಹಣದಿಂದ ಕೊಂಡುಕೊಳ್ಳುತ್ತೇನೆ.ನಾನೇನಾದರೂ ಹಣವನ್ನು ಕೊಂಡಿದ್ದೇನೆ ಎಂದು ಸಾಬೀತಾದರೆ ನನ್ನ ವಕೀಲ ವೃತ್ತಿಯನ್ನು ಬಿಟ್ಟು ಕೋಟ್ ನ್ನು ತ್ಯಜಿಸುತ್ತೇನೆ ಎಂದರು, ಸಿಡಿ ಕೇಸ್ ನಲ್ಲಿ ಸಿಕ್ಕಿಕೊಂಡರವರು ಅಧಿಕಾರವಿಲ್ಲದೆ ಮನೆಯಲ್ಲೇ ಉಳಿಯುವ ಸ್ಥಿತಿಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು, ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಮುಂದೆ ಜಡ್ಜ್ಮೆಂಟ್ ಒಂದೆ ಬಾಕಿ ಇದೆ ಎಂದರು,ನಾನು ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಮುಂದಿನ ದಿನದಲ್ಲಿ ಬರುವಂತಹ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಹತ್ತಿರ ಇರುವುದರಿಂದ ಪಕ್ಷವನ್ನು ಸಂಘಟಿಸಿ ರಾಜ್ಯಾದ್ಯಂತ ಓಡಾಡಲು ಸಿದ್ದನಿದ್ದೇನೆ ಹಾಗೂ ಈ ಪಕ್ಷದಲ್ಲಿ ಮಹಿಳೆಯರಿಗೆ ಕೂಡ ಮುಖ್ಯ ಸ್ಥಾನವನ್ನು ಕೊಟ್ಟು ಪಕ್ಷಕ್ಕೆ ದುಡಿಯಲು ಶ್ರಮಿಸುತ್ತೇನೆ, ನಮ್ಮ ಪಕ್ಷ ಏನಾದರೂ ಅಧಿಕಾರಕ್ಕೆ ಬಂದರೆ ಶೈಕ್ಷಣಿಕವಾಗಿ ಒತ್ತುಕೊಟ್ಟು ಸುಮಾರು ರಾಜ್ಯದಲ್ಲಿ 35 ಸಾವಿರ ಶಾಲೆಗಳನ್ನು ಪ್ರಾರಂಭ ಮಾಡುತ್ತೇವೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಾವು ಜನತೆಗೆ ಹೊಸ ರೀತಿಯಾಗಿ ಏನಾದರೂ ಕೊಡಲು ಪ್ರಯತ್ನಿಸುತ್ತೇವೆ ಎಂದು ಮಾತನಾಡಿದರು, ಈ ಸಂದರ್ಭದಲ್ಲಿಚಿತ್ರದುರ್ಗದ ಉಸ್ತುವಾರಿ ಗುರುಮೂರ್ತಿಭಾಸ್ಕರ ಆಚಾರ್, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸಮ್, ಜಗದೀಶ್ ಕೆಎನ್ ಮಹದೇವ್, ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಎಸ್ ಶೇಖರಪ್ಪ ಇನ್ನು ಮುಂತಾದ ಮುಖಂಡರುಗಳು ಭಾಗವಹಿಸಿದ್ದರು

Leave a Reply

Your email address will not be published.