ಸಿಡಿ ಪ್ರಕರಣ: ದೂರು ಹಿಂಪಡೆಯಲು ಅವಕಾಶವಿಲ್ಲ ಪೊಲೀಸರು
ಬೆಂಗಳೂರು: ದೂರು ಹಿಂಪಡೆಯುವ ಬಗ್ಗೆ ದಿನೇಶ್ ಕಲ್ಲಹಳ್ಲಿ ಅವರ ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ದೂರು ಹಿಂಪಡೆಯಲು ಠಾಣಾ ಮಟ್ಟದಲ್ಲಿ ಅವಕಾಶವಿಲ್ಲವೆಂದು ಹೇಳಿದ್ದಾರೆ.
ತಾವು ನೀಡಿದ ದೂರು ಆಧರಿಸಿ ಸಂಬಂದ ಪಟ್ಟ ಕೇಸಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಫ್ಐಆರ್ ದಾಖಲಿಸುವ ಮಟ್ಟಕ್ಕೆ ತಲುಪಿದ್ದೇವೆ. ಯುವತಿಯನ್ನೂ ಪತ್ತೆ ಹಚ್ಚಲಾಗಿದ್ದು ಯುವತಿಯಿಂದ ಹೇಳಿಕೆ ಪಡೆಯಲು ಬಾಕಿ ಇದೆ ಎಂದು ಸಂಬಂದ ಪಟ್ಟ ಅಧಿಕಾರಿಗಳು ತಿಳಿಸಿರುತ್ತಾರೆಂದು ತಿಳಿದು ಬಂದಿದೆ.
ಕಲ್ಲಹಳ್ಳಿ ಪರವಾಗಿ ಅವರ ವಕೀಲರು ಠಾಣೆಗೆ ತೆರಳಿ ಪತ್ರ ನೀಡಿದ್ದಾರೆ. ಅದನ್ನು ಪೊಲೀಸರು ಸ್ವೀಕರಿಸಿದ್ದು, ಮೌಖಿಕವಾಗಿಯೇ ಉತ್ತರಿಸಿದ್ದಾರೆ ಎಂಬ ಮಾಹಿತಿ ಲಭ್ಯ ಮೂಲಗಳಿಂದ ತಿಳಿದು ಬಂದಿದೆ.