ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರವರ 130 ನೇ ಜಯಂತಿ ಆಚರಣೆ

ಚಿತ್ರದುರ್ಗ,ನಿತ್ಯವಾಣಿ,(ಏ.14) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಡಾ ಬಿ.ಆರ್ ಅಂಬೇಡ್ಕರ್ ಅವರ 130 ನೇ ಜಯಂತಿಯನ್ನು *ವಿಶ್ವ ಜ್ಞಾನ ದಿನಾಚರಣೆ* (world knowledge day) ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ  ಕೆ. ಮಂಜುನಾಥ ಇವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಶುಭಸಂದರ್ಭದಲ್ಲಿ  ಸಂಘದ ಪ್ರಧಾನ ಕಾರ್ಯದರ್ಶಿ  ಪ್ರದೀಪ್ ಕುಮಾರ್ ಜಿ ಆರ್, ರಾಜ್ಯ ಪರಿಷತ್ ಸದಸ್ಯ ಕೆ.ಟಿ.ತಿಮ್ಮಾರೆಡ್ಡಿ, ಖಜಾಂಚಿ  ವೀರೇಶ್, ಉಪಾಧ್ಯಕ್ಷ ರಾಘವೇಂದ್ರ. ಜೆ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರುಗಳು, ನೌಕರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಮಾತನಾಡಿ ಅಂಬೇಡ್ಕರ್ರವರು ಒಂದು ಸಮುದಾಯ ಅಥವಾ ಒಂದು ಜನಾಂಗಕ್ಕೆ ಸೀಮಿತ ಅಲ್ಲ ಅಂಬೇಡ್ಕರ್ ಅವರು ಎಲ್ಲಾ ಸಮಾಜಗಳ ಎಲ್ಲಾ ಸಮುದಾಯಗಳ ನಾಯಕ.  ಸಮಾನತೆಯ ಬಗ್ಗೆ ಮಾತನಾಡುತ್ತಾ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು, ಹಿಂದಿನ ದಿನಗಳಲ್ಲಿ ಶೋಷಿತರು, ದೀನದಲಿತರ, ದಮನಿತರು,  ತಳಸಮುದಾಯಗಳಿಗೆ ತೊಂದರೆ ಆದಲ್ಲಿ  ತಮ್ಮ ಹಕ್ಕಿನ ಬಗ್ಗೆ ಪ್ರತಿಭಟನೆ ಮಾಡಲು ಹೆದರುವ ಸಂಧರ್ಭವಿತ್ತು. ಆದರೆ ಇಂದು  ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ದಿಂದ  ಮಾತನಾಡುವ, ಹೊರಡುವ, ಪ್ರಶ್ನೆ ಮಾಡುವ ಹಕ್ಕು ಸಿಕ್ಕಿದೆ.  ಇಂದು ಸಮಾಜದಲ್ಲಿ ಎಲ್ಲಾ ಸಮುದಾಯಗಳು  ಇಂದು ಭ್ರಾತೃತ್ವದಿಂದ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಕಾರಣ.   ಅಂಬೇಡ್ಕರ್ ಅವರು ಜನಿಸಿದ  ಏಪ್ರಿಲ್ 14 ದಿನವನ್ನು ವಿಶ್ವದ ಎಲ್ಲಾ ದೇಶಗಳು  ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published.