ಶೋಷಿತರು ಅವರ ಮಾರ್ಗದರ್ಶನದಲ್ಲಿ ನಡೆದು ಸ್ವಾವಲಂಭಿಗಳಾಗಿ ಬದುಕಿದ್ದರೇ ಅದೇ ಡಾ. ಬಿ. ಆರ್. ಅಂಬೇಡ್ಕರ್ ರವರಿಗೆ ನಾವು ನೀಡುವ ಗೌರವ : ಸಂಸದ ಎ. ನಾರಾಯಣಸ್ವಾಮಿ

ಚಿತ್ರದುರ್ಗ, ನಿತ್ಯವಾಣಿ, (ಏ. 14) : ಡಾ. ಬಿ.ಆರ್. ಅಂಬೇಡ್ಕರ್ ರವರು ಭಾರತದಲ್ಲಿ ಹುಟ್ಟದೇ ಹೋಗಿದ್ದರೇ, ಬಹುಷಃ ಇಲ್ಲಿನ ಶೇ 80ರಷ್ಟು ಜನರ ಬದುಕಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಎ. ನಾರಾಯಣಸ್ವಾಮಿಯರವರು ತಿಳಿಸಿದರು.

ಶ್ರೀ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಮಾತನಾಡಿದರು ಸಾಮಾನ್ಯ ದಲಿತ ಕುಟುಂಬದಿಂದ ಬಂದು ಶಾಸಕ. ಸಚಿವ ಸಂಸದನಾಗಿದ್ದೇನೆಂದರೇ ಅದಕ್ಕೆ ಅಂಬೇಡ್ಕರ್ ರವರೇ ಕಾರಣರಾಗಿದ್ದಾರೆ ಎಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಸಮಸ್ತ ಶೋಷಿತರಿಗೆ ದ್ವನಿಯಾದವರು ಅಂತಹ ಮಹನಿಯರನ್ನು ಪಡೆದಿರುವ ನಮ್ಮ ದೇಶದ ಸೌಭಾಗ್ಯ ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಪ್ರತಿನಿತ್ಯ ನೆನಪಿಸಿಕೊಳ್ಳಬೇಕು, ಅಲ್ಲದೇ ಅವರು ಹೇಳಿದ ಶಿಕ್ಷಣ, ಸಂಘಟನೆ ಹೋರಾಟ ಎಂಬುದು ನಮ್ಮ ಧ್ಯೇಯವಾಗಬೇಕು ಎಂದರು.
ಶೋಷಿತರು ಅವರ ಮಾರ್ಗದರ್ಶನದಲ್ಲಿ ನಡೆದು ಸ್ವಾವಲಂಭಿಗಳಾಗಿ ಬದುಕಿದ್ದರೇ ಅದೇ ಅಂಬೇಡ್ಕರ್ ರವರಿಗೆ ನಾವು ನೀಡುವ ಗೌರವ. ಆದ್ದರಿಂದ ಪ್ರತಿಯೊಬ್ಬರಿಗೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
ಶಿಕ್ಷಣ ಆರ್ಥಿಕ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಿದ್ದು, ಸಾಮಾಜಿಕ ಸ್ಥಾನಮಾನಗಳು ಸಿಗುತ್ತದೆ. ಆಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ನಾರಾಯಣಸ್ವಾಮಿರವರು ತಿಳಿಸಿದರು.
ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಬಿ.ಜೆ.ಪಿ ಮುಖಂಡ ಜಿ ಎಚ್ ಮೋಹನ್ ಕುಮಾರ್, ಕುಂದಲವಾಡದ ಲಿಂಗರಾಜ್ ಹಾಗೂ ಶ್ರೀ ಮಠದ ಭಕ್ತರು ಹಾಜರಿದ್ದರು.

Leave a Reply

Your email address will not be published.