ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ

ಚಿತ್ರದುರ್ಗ,ನಿತ್ಯವಾಣಿ,(ಏ.14) :  ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಪುರಸಭೆ ಅಧ್ಯಕ್ಷರಾದ ಆರ್ ಎ ಅಶೋಕ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ . ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಕೆ ಸಿ ರಮೇಶ್, ಸದಸ್ಯರಾದ ಬಿ ಎಸ್ ರುದ್ರಪ್ಪನವರು, ಪಿ ಹೆಚ್ ಮುರುಗೇಶ್, ವಸಂತ ಆರ್ ರಾಜಪ್ಪ, ಪೂರ್ಣಿಮಾ ಬಸವರಾಜ್, ಹೆಚ್ ಆರ್ ನಾಗರತ್ನ ವೇದಮೂರ್ತಿ, ಮಾದ್ಯಮ ಪ್ರತಿನಿಧಿಗಳು, ಮುಖ್ಯಾಧಿಕಾರಿ ಎ ವಾಸಿಂ ಹಾಗೂ ಪುರಸಭಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಜೀವನಗಾಥೆ, ಸಾಧನೆಗಳನ್ನು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಮುಖ್ಯಾಧಿಕಾರಿಗಳು ಪುನರ್ ಮನನ ಮಾಡುವುದರ ಜೊತೆಗೆ ಶ್ರೀಯುತರು ಭಾರತ ದೇಶಕ್ಕೆ ಸಂವಿಧಾನವನ್ನು ಅತ್ಯಮೂಲ್ಯ ಕೊಡುಗೆಯಾಗಿ ನೀಡಿರುವುದನ್ನು ಶ್ಲಾಘಿಸಿದರು.

Leave a Reply

Your email address will not be published.