ವಿಶ್ವಗುರು ಬಸವಣ್ಣನವರ 888ನೇ ಜಯಂತೋತ್ಸವದ ಸರಳ ಆಚರಣೆ

ನಿತ್ಯವಾಣಿ,ಚಿತ್ರದುರ್ಗ, ಮೇ 14 : ಚಿತ್ರದುರ್ಗ ನಗರದಲ್ಲಿ 888ನೇ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿಯ ಆಚರಣೆ ಕೋವಿಡ್ ಕಫ್ರ್ಯೂ ಹಿನ್ನೆಲೆಯಲ್ಲಿ, ಸರ್ಕಾರದ ನಿಯಮವನ್ನು ಪಾಲಿಸಿ, ಬಸವ ಮಂಟಪದಲ್ಲಿ ಆಚರಿಸದೆ, ಸರಳ ರೀತಿಯಲ್ಲಿ ರಾಷ್ಟ್ರೀಯ ಬಸವ ದಳದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಶರಣರಾದ ಕಲ್ಮೇಶ್ ಅವರ ಮನೆಯಲ್ಲಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಬಸವಣ್ಣನವರ ಪೂಜೆಯನ್ನು ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಶರಣ ಎಸ್. ಶ್ರೀನಿವಾಸ್‍ರವರು ನೆರವೇರಿಸಿದರು. ನಂತರ ಧರ್ಮದ ಧ್ವಜಾರೋಹಣವನ್ನು ಚಿತ್ರದುರ್ಗ ಜಿಲ್ಲಾ ಲಿಂಗಾಯತ ಧರ್ಮದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ಶರಣ ಎಸ್.ಟಿ. ನವೀನ್ ಕುಮಾರ್ವರು ನೆರವೇರಿಸಿದರು. ಜನಸಾಗರ ಪತ್ರಿಕೆಯ ಸಹ ಸಂಪಾದಕರಾದ ಶರಣ ಸಿ.ಎಂ. ಅಗಜಾನನರವರು ಪುಷ್ಪನಮನ ಸಲ್ಲಿಸಿದರು. ಚಿತ್ರದುರ್ಗ ರಾಷ್ಟ್ರೀಯ ಬಸವದಳದ ಸಂಘಟಕರಾದ ಶರಣೆ ಬಿ.ಎನ್. ಈರಮ್ಮನವರು ಗುರು ಬಸವಣ್ಣನವರ ಮಂತ್ರಪಠಣವನ್ನು ನೆರವೇರಿಸಿದರು. ಶರಣ ಕಲ್ಮೇಶ್ ಲಿಂಗಾಯತರವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಇದೇ ಸಂದರ್ಭದಲ್ಲಿ ಚಿತ್ರದುರ್ಗ ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣ ಶಂಕರಪ್ಪನವರು ಮತ್ತು ಉಪನ್ಯಾಸಕರಾದ ಶರಣ ಎಲ್.ವಿ.ಸೋಮಶೇಖರ್ ಹಾಗೂ ತರಂಗಿಣಿ ಕಂಪ್ಯೂಟರ್ಸ್ ಮಾಲೀಕರಾದ ಶರಣ ಬಿ.ಎನ್.ಬಸವರಾಜರವರು ಉಪಸ್ಥಿತರಿದ್ದರು.

Leave a Reply

Your email address will not be published.