ದಾವಣಗೆರೆ – ತುಮಕೂರು ನೇರ ರೈಲು ಮಾರ್ಗವನ್ನು ಅದಷ್ಟು ಬೇಗ ಪೂರ್ಣಗೊಳಿಸಲಾಗುವುದು: ಕೇಂದ್ರ ಸಚಿವ ಡಿ.ವಿ ಸದಾನಂದಗೌಡ

ಮೋದಿಯವರ ನೇತೃತ್ವದ ಸರ್ಕಾರ ರೈತಪರವಾದ ಸರ್ಕಾರ. ರೈತರ ಹಿತದೃಷ್ಠಿಯಿಂದ ಪ್ರಮುಖವಾದ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದ್ದೇವೆ. ಕೆಲ ರೈತಮುಖವಾಡ ಧರಿಸಿರುವವರು ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ ಸದಾನಂದಗೌಡ ದೂರಿದ್ದಾರೆ.ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ದಾರಿಮಧ್ಯೆದಲ್ಲಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ರವರ ನಿವಾಸಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಸ್ವಾಭಿಮಾನದ ಬದುಕುಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಎರಡನೇ ಬಾರಿಗೆ ಅತ್ಯಂತ ದೊಡ್ಡಮಟ್ಟದ ಬಹುಮತ ಪಡೆದು ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳದಿದೆ.ಜಮ್ಮು-ಕಾಶ್ಮೀರದ ಲೋಕಲ್ ಬಾಡಿ ಚುನಾವಣೆಯಲ್ಲಿಯೂ ಸಹ ಗೆಲುವು ಸಾಧಿಸಿದ್ದೇವೆ.ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯವರ ಅಧಿಕಾರದಿಂದ ಜನರು ಬೇಸತ್ತಿದ್ದಾರೆ.ಹೈದಾರಾಬಾದ್ ನಲ್ಲೂ ಬಿಜೆಪಿ ಪಕ್ಷದ ಅಸ್ತಿತ್ವ ಇಲ್ಲದೇ ಇರುವಲ್ಲಿಯೂ ಸಹ ಬಿಜೆಪಿ ಪಕ್ಷ ಗೆದ್ದಿದೆ. ಕೇರಳ ರಾಜ್ಯದಲ್ಲೂ ಸಹ ಸೊನ್ನೆಯಿಂದ ಪ್ರಾರಂಭ ಮಾಡಿದ್ದೇವೆ.ಈಡೀ ರಾಷ್ಟ್ರದಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ನೀಡಲಿದ್ದಾರೆ ಎಂದರು.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ.ಜಿಲ್ಲೆಯಲ್ಲಿ ಮೊದಲು ಪಕ್ಷದ ಅಷ್ಟೇನು ಇರಲಿಲ್ಲ ಆದರೆ ಜಿಲ್ಲೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದಿದ್ದೆವೆ. 65 ಸಾವಿರ ಕೋಟಿ ಹಣವನ್ನು ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ನೀಡಿದ್ದೇವೆ. ದಾವಣಗೆರೆ – ತುಮಕೂರು ನೇರ ರೈಲು ಮಾರ್ಗವನ್ನು ಅದಷ್ಟು ಬೇಗ ಪೂರ್ಣಗೊಳಿಸಲಾಗುವುದು ಉಳಿದ ಕಾಮಗಾರಿಗೆ ಮುಂದಿನ ಬಜೆಟ್ ನಲ್ಲಿ ಹಣವನ್ನು ಮೀಸಲಿಡಲಾಗುವುದು ಎಂದು ಸದಾನಂದ ಗೌಡ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಹೇಳಲ್ಲ,6 ಬಾರಿ ಶಾಸಕರಾದ ತಿಪ್ಪಾರೆಡ್ಡಿಯವರು ಪಕ್ಷದ ಶಿಸ್ತಿನ ಸಿಪಾಯಿ ಅವರಿಗೆ ಸಚಿವ ಸ್ಥಾನ ನೀಡಬೇಕು ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷದ ಅಂತರೀಕ ವಿಚಾರಗಳನ್ನು ಬಹಿರಂಗವಾಗಿ ಎಲ್ಲಿಯೂ ಚರ್ಚೆ ಮಾಡುವುದಿಲ್ಲ. ಅವುಗಳನ್ನು ಕೋರಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ ಎಂದ ಸಚಿವರು, ಸಂಕ್ರಾಂತಿ, ದೀಪಾವಳಿ, ಯುಗಾದಿ ಪ್ರತಿವರ್ಷ ಬರುತ್ತೆ ಆದರೆ ಬಸವನಗೌಡ ಯತ್ನಾಳ್ ಹೇಳಿರುವುದರಲ್ಲಿ ಹುರುಳಿಲ್ಲ ಎಂದು ಅವರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರು ಸುಮ್ಮನೆ ಏನಾದರೂ ಮಾತನಾಡುತ್ತಲೇ ಇರುತ್ತಾರೆ, ಅವರಿಗೆ ಎಲ್ಲಿ ಏನು ಮಾತನಾಡಬೇಕೆಂಬುದು ಗೊತ್ತಿಲ್ಲ, ಅವರು ಏಕೋಪಾಧ್ಯಾಯ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬಂದರೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ಪಕ್ಷದ ವಿಲೀನ ಕುರಿತು ಮಾತನಾಡಿ, ಕೆಲ ಶಾಸಕರ ರಾಜೀನಾಮೆಯಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ರಾಜೀನಾಮೆ ನೀಡಿದ ಶಾಸಕರಿಗೆ ಸಚಿವ ಸ್ಥಾನ ನೀಡುವುದು ನಮ್ಮ ಕರ್ತವ್ಯ ಅವರಿಗೆ ನೀಡುತ್ತೇವೆ ಎಂದ ಅವರು ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಸಚವ ಸ್ಥಾನ ಕೊಡಬೇಕಾಗಿದ್ದರಿಂದ ಹಲವಾರು ಭಾರಿ ಶಾಸಕರಾಗಿ ಆಯ್ಕೆಯಾದವರಿಗೂ ಸಚಿವ ಸ್ಥಾನ ನೀಡಲಾಗಿಲ್ಲ ಇದಕ್ಕೆ ವಿಷಾಧವಿದೆ ಎಂದು ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.

Leave a Reply

Your email address will not be published.