ನೈಸರ್ಗಿಕ, ಐತಿಹಾಸಿಕ ತಾಣ ಚಂದ್ರವಳ್ಳಿಯ ಲಾವಣಿ :
ದ್ವಾಪರದಲ್ಲಿ ಹಿಡಿಂಬ ಪಟ್ಟಣ ಎಂದುರ್ಗ || ಮತ್ತೆ ಕಲಿಯುಗದಿ ಮೊದಲ ಸಾಮ್ರಾಜ್ಯ ಚಂದ್ರವಳ್ಳಿ ಮೂಡಿತ್ತಾಗ ||| ಕತ್ತಿ ಹಿಡಿದು ಕಲಿ ಮಯೂರಶರ್ಮ ಅನ್ಯಾಯವ ಸವರಿದನಾಗ ||1|| ಎತ್ತಿ ಬಾವುಟ ಕದಂಬ ಕುಲ ಮಣಿ ದೀನರ ಸಲಹಿದ ಠಾವೀಗ | ಹೂತಿದೆ ನೆಲದಲಿ ಕೀರ್ತಿಯ ತ್ರೇತಾಯುಗದಲಿ ಚಿನ್ಮೂಲಾದ್ರಿ ಪ್ರೀತಿ ಹೆಸರು ಹೊಂದಿದ ದುರ್ಗ | ಕೀರ್ತಿಪೊಂದಿತು ಕಟ್ಕೊಂಡ್ ನೋಡಲೇಬೇಕು ನೀವೀಗ || ಮಾತಿದು ಶಾಸನದಲ್ಲಿ ಕೊರೆದಿದೆ ಭೈರವೇಶ್ವರನ ಬಂಡ್ಯಾಗ ||| ಬ್ರಹ್ಮಲಿಪಿಯಲಿ ಪ್ರತ್ಯಕ್ಷವಾಗಿದೆ ಜನ್ಮಾಂತರ ಪೇಳುತ ಈಗ ||2|| ಬ್ರಹ್ಮವಂಶಿಗ ಮಯೂರಶರ್ಮ ಕ್ಷತ್ರಿಯನಾದ ವಿವರ ಆಗ | ಅಂಕಲಿ ಮಠದ ಅಂಕಿತ ತೋರ್ತಿಹ ಬಿಲ್ವಪತ್ರೆವನ ಆಗೋಆಗ || ಶಂಕೆಪರಿಹರಿಸೆ ನಂಕರೆಯುತಿವೆ ನೋಡಲೇಬೇಕೋ ಕನ್ನಡಿಗ ||| ಭಾರತ ರಾಷ್ಟ್ರದ ತುಂಬಾ ಕದಂಬರಾಳ್ವಿಕೆ ಮೆರೆದಿತ್ತೋ ಆಗ ||3|| ಬೇರೆ ಯಾರು ಚಕ್ರವರ್ತಿಗಳಿಲ್ಲ ಕನ್ನಡ ಸಾಮ್ರಾಜ್ಯ ಒಂದೇ ಆಗ | ಭಾರತ ಸಂಸ್ಕøತಿ ನೀತಿ ವಿರೋಧಿಗಳೆಲ್ಲರ ಸವರಿದ ಮಯೂರಗ || ಹಿರಿಪಟ್ಟಣಕೆ ಚಂದ್ರವಳ್ಳಿ ಎಂದ ನಾಮಕರಣ ಮಾಡಿಟ್ಟಾಗ ||| ಭಾರೀಕಲೆ ಕೈಗಾರಿಕೆ ನ್ಯಾಯಾಡಳಿತದಿ ಜನರನುರಿಸಿ ಆಗ ||4|| ಹರಿಹರ ವಿಶ್ವರೂಪ ದೇವರ ಸರ್ವಪೂಜೆ ಸಮಗೊಳಿಸ್ಯಾಗ | ಊರಿನ ಮಧ್ಯೆ ನೀರಿನ ಕಾಲುವೆ ಹರಿಬಿಡಿಸಿದ ಬಹುಸಮರ್ಥಗ || ನೂರಲ್ಲ ಎರಡ್ಸಾವಿರ ವರುಷಗಳುರುಳಿದವು ಕತೆ ನಡೆದೀಗ ||| ಚಿತ್ತರದುರ್ಗಕೆ ಚಂದ್ರವಳ್ಳಿ ಎಂದ್ ಚಂದ ನಾಮಕರಣ ಇತ್ತಾಗ ||5|| ಕತೆಕಟ್ಟಿಲ್ಲ ಐತಿಹಾಸಿಕ ಸತ್ಯ ನಡೆದಿದ್ದ ಚಾರಿತ್ರಿಕ | ನಿತ್ಯವಾಗಿವೆ ಆ ವಸ್ತುಗಳು ಪ್ರಾಚ್ಯ ಪ್ರದರ್ಶನದಲ್ಲೀಗ || ಹೊತ್ತು ಹೋಗೋದ್ರೊಳು ಬಂದ್ ನೋಡೋಣ್ಣ ಕರೆಯುತಿವೆ ನಿನ್ನ ನಾಡೀಗ ||| ಹು.ಶ್ರೀ ಜೋಯ್ಸರ ಪರಿಶ್ರಮದಿಂದ ಪುನರ್ಜನ್ಮ ತಳೆದಿವೆ ಈಗ ||6|| ರಕ್ತಗತ ವಿರುವ ಸಂಸ್ಕøತಿ ನೆನಪಿಕೋನವಿರೇಳುವುದು ಮೈಯ್ಯಾಗ | ಹೆತ್ತಮ್ಮ ಕನ್ನಡತಿ ಎನ್ನುವುದ ಉಣ್ಣುವ ಮುಂಚೆ ನೆನೆದಾಗ || ಕತ್ತಲ ಮನದಲಿ ಬೆಳಕು ನುಗ್ಗುವುದು ನೋಡು ಪರಿಕಿಸುತ ನಿಷ್ಟ್ಯಾಗ ||| ಹೊತ್ತಿಗಷ್ಟುಂಡು ಮೆತ್ತಗೆ ಮಲಗದೆ ವಿಚಾರ ತುರುಕಿಕೊ ತಲೆಯಾಗ || ವಿತ್ತ ಆಸಿರಿ ಎಷ್ಟೇಇದ್ದರು ಮುಳುಗಿರಬೇಡಾ ಆವುವೊಳಗ | ಕತ್ತಲ ಕಳ್ತನ ಅವಿವೇಕಿಗಳು ಸಿರಿತನವನ್ನು ಮುಳುಗಿಸುವಾಗ || ಸತ್ಯವ ತೋರಿ ಅಸತ್ಯವ ದೂಡ್ವದು ವಿಚಾರ ಶಕ್ತಿ ಒಂದೇ ಆಗ ||7|| ಹೇಡಿಗಳಲ್ಲ ಕನ್ನಡ ಮಕ್ಕಳು ಎಚ್ಚರಿದ್ರು ಜಗಮಲಗ್‍ದಾಗ | ಮೂಡುವ ಸೂರ್ಯನ ಅಷ್ಟೇ ಪ್ರಾಚೀನತೆ ಮೌಲ್ಯಗಳಿಸಿದ್ರು ಪೂರ್ವದಾಗ || ಮಡಿಲ ದೇಶಗಳು ಬಾಳೆ ನೆರವಿತ್ತು ಪ್ರೀತಿ ಪ್ರೇಮದ ನೆರಳಿನಗ ||| ಹೇಡಿಗಳಲ್ಲ ಕನ್ನಡ ಮಕ್ಕಳು ಎಚ್ಚರಿದ್ರು ಜಗಮಲಗಿದಾಗ ||8|| ಹೊತ್ತು ಹೋಗೊದ್ರೊಳಗೊಂದಾವರ್ತಿ ನೋಡೋಕಂದ ತಾಯಿಮೊಗ | ಶ್ರೀ ಪಾತಾಳೇಶ್ವರ ಬರೆಸಿಟ್ಟಿದನು ಎಲ್ರೋದಲಿ ಎಂದು ಪ್ರಸಾರಿದ ||
(ಆಧಾರ:-ಸಿದ್ಧರದುರ್ಗ, 1972, ಕೆ.ವಿ. ಮಂಜುನಾಥರಾವ್ : ತಾನಿದ್ದ ಸ್ಥಳದಲ್ಲಿಯೇ ಲಾವಣಿಗಳನ್ನು ರಚಿಸಿ, ಮನರಂಜನೀಯವಾಗಿ ಹಾಡಬಲ್ಲವರಾಗಿದ್ದರು. ಇತಿಹಾಸ ಸಂಶೋಧನಾ ಪ್ರಸಕ್ತ ಐತಿಹ್ಯ ವಿಮರ್ಶನ ವಿಚಕ್ಷಣ ಹುಲ್ಲೂರು ಶ್ರೀನಿವಾಸ ಜೋಯಿಸರಿಂದ ತರಬೇತಿಗೊಂಡ ಲಾವಣಿ ಮಂಜಣ್ಣ ಚಿತ್ರದುರ್ಗ ಇತಿಹಾಸದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು. ಅನೇಕ ಸ್ಮಾರಕಗಳ ವಿವರಣೆ ನೀಡಬಲ್ಲವರಾಗಿದ್ದರು.) ಸಂಗ್ರಹ ಲೇಖಕರು : ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು, ಚಿತ್ರದುರ್ಗ, ಮೊ: 9448664878