ವೀರಶೈವ ಪಂಚಮಶಾಲಿಯಲ್ಲಿ ಈಗ ರಾಜಕೀಯ ನಾಯಕರು ಇಬ್ಬರೇ ಇರುವುದು : ಹಳ್ಳಿಹಕ್ಕಿ ಎಂಎಲ್ಸಿ ಹೆಚ್ ವಿಶ್ವನಾಥ್

ನಿತ್ಯವಾಣಿ, ಚಿತ್ರದುರ್ಗ,(ಜೂ. 6) : ಹಳ್ಳಿಹಕ್ಕಿ ಬಿಜೆಪಿಯ ಎಂಎಲ್ಸಿ ಹೆಚ್  ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪರವರನ್ನು ನಂಬಿ ಬಂದವನು ಪಕ್ಷ ನಂಬಿ ಬಂದವನಲ್ಲ, ಸಿಎಂ ರಾಜೀನಾಮೆ ವಿಚಾರ ಬಂದಾಗ  ಮುಖ್ಯಮಂತ್ರಿ ಸ್ಥಾನಕ್ಕೆ ಅಕಸ್ಮಾತ್ ಬದಲಾವಣೆ ಬಂದರೆ ವೀರಶೈವರಿಗೆ ಕೊಡುವುದು ಸೂಕ್ತ, ಪಂಚಮಶಾಲಿ ಯಲ್ಲಿ  ಈಗ ಬಿಜೆಪಿಯಲ್ಲಿ  ರಾಜಕೀಯ ನಾಯಕರುಗಳು ಇರುವುದು ಇಬ್ಬರೇ ಮಾತ್ರ ಅವರು ಬಸವನಗೌಡ ಪಾಟೀಲ ಯತ್ನಾಳ್, ಮುರುಗೇಶ್ ನಿರಾಣಿ, ಇದ್ದಾರೆ ಯತ್ನಾಳ್ ಅವರು ಬಹಳ ಅನುಭವವುಳ್ಳವರು ಹಾಗೂ ನಿರಾಣಿ ಸಾವಿರಾರು ಜನಗಳಿಗೆ ಕೆಲಸವನ್ನು ಕೊಟ್ಟಿದ್ದಾರೆ, ನೋಡೋಣ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ, ಆದರೆ ಈ ಸಮಯದಲ್ಲಿ ಬದಲಾವಣೆ ಸರಿಯಲ್ಲ ಎಂದು ಗೊಂದಲಕ್ಕೆಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು

Leave a Reply

Your email address will not be published.