ರಾಜ್ಯದಲ್ಲಿ ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಸಚಿವ ಪ್ರಭು ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹ್ಹಾಣ್ ‘ ರಾಜ್ಯದಲ್ಲಿ ಇದುವರೆಗೆ ಹಕ್ಕಿ ಜ್ವರದ ಪ್ರಕರಣ ಕಂಡು ಬಂದಿಲ್ಲ, ಆದ್ದರಿಂದ ರಾಜ್ಯದಲ್ಲಿ ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧ ಇಲ್ಲ, ಗ್ರಾಹಕರು ಯಾವ ಭಯ ಇಲ್ಲದೇ ಮಾಂಸ, ಮೊಟ್ಟೆ ಸೇವಿಸಬಹುದು, ಕೋಳಿ ಉತ್ಪನ್ನ, ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಹವಾಳಿ ಕಮ್ಮಿಯಾಗ್ತಿದ್ದಂತೆ, ಹಕ್ಕಿ ಜ್ವರದ ಭೀತಿ ಆರಂಭವಾಗಿದೆ. ‘ಕೋಳಿ ಅಥವಾ ಕೋಳಿ ಉತ್ಪನ್ನಗಳ ಸುರಕ್ಷತೆ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ರಾಜ್ಯಗಳಿಗೆ ಮನವಿ ಮಾಡಲಾಗಿದೆ. ಇನ್ನು ಹಕ್ಕಿಜ್ವರ (AI) ನಿಂದ ಬಾಧಿತರಾಗದ ರಾಜ್ಯಗಳು ಹಕ್ಕಿಗಳಲ್ಲಿ ಅಸಹಜ ಸಾವಿನ ಬಗ್ಗೆ ನಿಗಾ ವಹಿಸಬೇಕು. ತಕ್ಷಣ ಕೇಂದ್ರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ.