ನಿತ್ಯವಾಣಿ, ಚಿತ್ರದುರ್ಗ,(ಡಿ.22) : ವಿಮುಕ್ತಿ ವಿದ್ಯಾಸಂಸ್ಥೆ ಚಿತ್ರದುರ್ಗ, ಶ್ರೀ ಬಸವೇಶ್ವರ ಸಂಸ್ಥೆ ಚಿತ್ರದುರ್ಗ, ವಿಸ್ತಾರ್ ಸಂಸ್ಥೆ* ಚಿತ್ರದುರ್ಗ, ಇವರ ಸಹಯೋಗದಲ್ಲಿ, ಮಕ್ಕಳ ಹಕ್ಕುಗಳ ತರಬೇತಿ, ಮತ್ತು ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರವನ್ನು ಚಿತ್ರದುರ್ಗ ಹೊರವಲಯದಲ್ಲಿರುವ ಧಮ್ಮ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮ ಉದ್ಘಾಟನೆಯನ್ನು ಡಾಕ್ಟರ್ ಶಿವಕುಮಾರ್ ವೈದ್ಯಾಧಿಕಾರಿಗಳು ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ನಾವು ನಿಮಗೆ ಮಾಡುತ್ತಿರುವ ಸೇವೆಯಲ್ಲ, ಇಂಥ ಮಕ್ಕಳಿಗೆ ಸೇವೆ ಮಾಡಲು ನಮಗೆ ಕೊಟ್ಟ ಸುವರ್ಣಾವಕಾಶ ಎಂದು ಭಾವಿಸುತ್ತೇನೆ, ಇವರನ್ನು ಅಂಗವಿಕಲರು, ವಿಕಲಚೇತನರು, ಎನ್ನುವ ಪದಗಳ ಬದಲಾಗಿ, ದಿವ್ಯ ಚೇತನರು ಎಂದು ಕರಿಯೋಣ ಎಂದು ತಿಳಿಸಿದರು,ವಿಡಿಯೋ
ನಿಮ್ಮ ಸೇವೆ ಮಾಡಿದರೆ, ದೇವರ ಸೇವೆ ಮಾಡಿದಂತೆ ಎಂದು ತಿಳಿಸಿದರು. ವೇದಿಕೆ ಮೇಲೆ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ, ಮಾತನಾಡಿದ, ಶಂಕ್ರಪ್ಪV, ಕಾರ್ಯದರ್ಶಿಗಳು ಬಸವೇಶ್ವರ ಸಂಸ್ಥೆ ಚಿತ್ರದುರ್ಗ ಇವರು ಇಂಥ ಮಕ್ಕಳ ಸೇವೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯ, ಸದಾ ಒಳ್ಳೆದನ್ನು ಬಯಸಿದರೆ, ದೇವರು ನಮಗೆ ಒಳ್ಳೇದನ್ನೇ ಮಾಡುತ್ತೇನೆ ಎಂದು ತಿಳಿಸಿದರು. ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದ, ಮಾನ್ಯ ವಿಶ್ವ ಸಾಗರ ಅವರು ಪ್ರಾಸ್ತಾವಿಕ ನುಡಿ ಮಾತನಾಡುತ್ತಾ, ಸರ್ಕಾರ ಉಪಯೋಗವಿಲ್ಲದ ಕೆಲಸಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ, ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 40000 ವಿಕಲಚೇತನರಿದ್ದು ಇದರಲ್ಲಿ ಪ್ರಸ್ತುತ 11000 ವಿಕಲಚೇತನ ಮಕ್ಕಳಿದ್ದಾರೆ, ಇದರಲ್ಲಿ ಕಿವುಡ, ಮೂಕ, ಕುರುಡ, ಸೇರಿ, 2600 ಮಕ್ಕಳಿದ್ದಾರೆ, – 3000 ಬುದ್ದಿಮಾಂದ್ಯ ಮಕ್ಕಳಿದ್ದಾರೆ, ಈ ಮಕ್ಕಳಿಗೆ ನಮ್ಮ ಜಿಲ್ಲೆಯಲ್ಲಿ ಒಂದು ಮಾತ್ರ ಪುನರ್ವಸತಿ ಶಾಲೆ ಇದೆ, ಇನ್ನುಳಿದ ಕಿವುಡ, ಮೂಕ, ಕುರುಡ ಇಂಥ ಅಂದ ಮಕ್ಕಳಿಗೆ ಒಂದು ಶಾಲೆಯೂ ಇಲ್ಲ, ಸರ್ಕಾರ ಕಲೆ-ಸಾಹಿತ್ಯ ರಂಗಕರ್ಮಿ ಸಂಗೀತ, ಇನ್ನಿತರೆ ರಾಜಕೀಯ ಸಾಧಕರಿಗೆ ಸನ್ಮಾನ ಮಾಡುತ್ತಾರೆ, ಪ್ರಾಮಾಣಿಕವಾಗಿ ಪ್ರತಿದಿನ ನಿಮ್ಮ ಮಕ್ಕಳ ಸೇವೆ ಮಾಡುತ್ತಿರುವ ಪೋಷಕರಿಗೆ, ತಂದೆ-ತಾಯಿಗಳಿಗೆ ಸನ್ಮಾನ ಮಾಡುವುದು ಸರ್ಕಾರದ ಜವಾಬ್ದಾರಿ ಕೆಲಸವಾಗಿದೆ, ಮುಂದಿನ ತಿಂಗಳಲ್ಲಿ, ಇಂಥ ಸೇವೆ ಮಾಡುತ್ತಿರುವ, ತಂದೆ-ತಾಯಿಗಳಿಗೆ ಪೋಷಕರಿಗೆ ನಮ್ಮ ವಿಮುಕ್ತಿ ವಿದ್ಯಾಸಂಸ್ಥೆ ಸಂಸ್ಥೆ ವತಿಯಿಂದ, 20 ಕುಟುಂಬಗಳಿಗೆ ಆರ್ಥಿಕ ನೆರವು, ಗೌರವಿತವಾಗಿ ಸನ್ಮಾನ ಮಾಡಲಾಗುವುದೆಂದು ತಿಳಿಸಿದರು. ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಇವರು ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮ ಸಂಸ್ಥೆಯಡಿಯಲ್ಲಿ ಇಂಥ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಕಳೆದ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು, ಬಹಳಷ್ಟು ಇಂಪ್ರುಮೆಂಟ್ ಆಗಿದೆ ಎಂದು ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ, ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು. ವೇದಿಕೆ ಮೇಲೆ ಅಕ್ಷಯ್ ಕರೆಂಡಿ, ಪಿಜಿಯೋತೆರಪಿ, ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷರಾದ, ಶ್ರೀ ಅರುಣ್ ಕುಮಾರ್, ವಿಸ್ತಾರ್ ಸಂಸ್ಥೆಯ ಸಂಯೋಜಕರಾದ, ಅರಣ್ಯ ಸಾಗರ್, ಉಪಸ್ಥಿತರಿದ್ದರು. ವಿವಿಧ ಹಳ್ಳಿ, ಕೊಳಚೆ ಪ್ರದೇಶದಿಂದ, ಇಪ್ಪತ್ತಕ್ಕೂ ಹೆಚ್ಚು ಮಕ್ಕಳು, 40ಕ್ಕಿಂತ ಹೆಚ್ಚು ಪೋಷಕರು ಈ ಶಿಬಿರದಲ್ಲಿ ಭಾಗವಹಿಸಿದರು, ಈ ಎಲ್ಲ ಮಕ್ಕಳಿಗೆ ಉಚಿತವಾಗಿ ಡಾಕ್ಟರ ಶಿವಕುಮಾರ್, ವೈದ್ಯಾಧಿಕಾರಿಗಳು ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರು ತಪಾಸಣೆ ಮಾಡಿ, ಮುಂದಿನ ಆರೋಗ್ಯದ ಬಗ್ಗೆ ಸಲಹೆ ನೀಡಿ, ಉಚಿತವಾಗಿ ಔಷದಿ, ಟಾನಿಕ್ಕುಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮ ನಿರೂಪಣೆ: ಕುಮಾರ H, ಸ್ವಾಗತ: ಗುರುರಾಜ್ ಸಂಯೋಜಕರು, ವಂದನಾರ್ಪಣೆ: ಕುಮಾರ್ ಟಿ, ಕಾರ್ಯಕ್ರಮ ಸಂಘಟಕರು: ಕುಮಾರಿ ಅರ್ಪಿತ, ಭೂಮಿಕ.