ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕವಿ ನಮನ ಕಾರ್ಯಕ್ರಮ ಜರಗಿತು,,

ನಿತ್ಯವಾಣಿ,ಚಿತ್ರದುರ್ಗ,(ಜೂ.21) : ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ತಳ ಸಮುದಾಯದ ಚೇತನ ನಾಡೋಜ ಡಾಕ್ಟರ್ ಸಿದ್ದಲಿಂಗಯ್ಯ ನವರ ಸ್ಮರಣೆಯ ಕವಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು, ಬಿಜೆಪಿಯ ವಿಭಾಗ ಪ್ರಭಾರಿ ಜಿ ಎಂ ಸುರೇಶ್  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸಾಹಿತ್ಯಕ್ಷೇತ್ರದಲ್ಲಿ ಸಮಾಜಸೇವೆಯಲ್ಲಿ ರಾಜಕೀಯ ಸಮುದಾಯದ ಪರ ಹೋರಾಟದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಕನ್ನಡದ ಸೇವೆ ಮಾಡುತ್ತಲೇ ರಾಷ್ಟ್ರೀಯ ಹಿತಚಿಂತನೆ ಮಾಡುತ್ತಿದ್ದ ನಾಡು ಮೆಚ್ಚಿದ ಕವಿ ಡಾಕ್ಟರ್ ಸಿದ್ದಲಿಂಗಯ್ಯನವರು, ಇವರಿಗೆ ಕರೋನಾ ಪಾಸಿಟಿವ್ ಅವರು ಮೊದಲು ಸಂಘದ ಪ್ರಮುಖರಿಗೆ ಕರೆ ಮಾಡಿ ಈ ಬಗ್ಗೆ ವಿಷಾದ ತಿಳಿಸಿರುತ್ತಾರೆ, ಮನೆಯಲ್ಲಿ ಚಿಕ್ಕ ಮಕ್ಕಳಿರುವ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅದರಂತೆ ಅವರನ್ನು ಶಂಕರಪುರದ ಲಿಂಗ ದೊರೆ ಆಸ್ಪತ್ರೆಗೆ ದಾಖಲು ಮಾಡುವ ವ್ಯವಸ್ಥೆ ಮಾಡಲಾಗುತ್ತದೆ, ನಂತರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಉತ್ತಮ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರ ಗಮನಕ್ಕೆ ತರಲಾಗುತ್ತದೆ, ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿಗಳಾದ  ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು ಆದರೂ ದುರದೃಷ್ಟವಶಾತ್ ಭಗವಂತನಲ್ಲಿ ಅವರು ಲೀನಾರಾಗಿದ್ದು ನಾಡಿಗೆ ಮತ್ತು ನಮಗೆಲ್ಲಾ ತುಂಬಲಾರದ ನಷ್ಟವಾಗಿದೆ, ಎಂದು ಭಾವುಕರಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಭಾರ್ಗವಿ ದ್ರಾವಿಡ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಜಿಲ್ಲಾ ಎಸ್ ಸಿ ಮೋರ್ಚಾ ಹಾಲಪ್ಪ, ಉಪಾಧ್ಯಕ್ಷ ನಾಗರಾಜ್ ಕೆ ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಇನ್ನಿತರ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com

Leave a Reply

Your email address will not be published.