ನಿತ್ಯವಾಣಿ,ಚಿತ್ರದುರ್ಗ,( ಜೂ.4) :ಜನರಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಕೇಂದ್ರ ಸರ್ಕಾರದ ಅಸಂಗತ ನೀತಿಗಳನ್ನು ವಿರೋಧಿಸಿ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಿದ್ದು, ಇದರ ಭಾಗವಾಗಿ ಚಿತ್ರದುರ್ಗ ನಗರ ಡಿಸಿಸಿ ಕಚೇರಿಯಲ್ಲಿ ಶುಕ್ರವಾರ ಶಾಸಕ ಟಿ ರಘುಮೂರ್ತಿ ನೇತೃತ್ವದಲ್ಲಿ ದೇಶದ ಜನತೆಗೆ ಉಚಿತ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಡುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜಪೀರ್, ಮಾಜಿ ಸಚಿವರಾದ ಡಿ ಸುಧಾಕರ್, ಡಿಸಿಸಿ ಕಾರ್ಯಾಧ್ಯಕ್ಷ ಹಾಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಬಾಬು, ಅಸಂಘಟಿತ ಕಾರ್ಮಿಕ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಭೀಮಸಮುದ್ರ ಜಿಎಸ್ ಮಂಜುನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್ ಡಿ ಕುಮಾರ್ ಮತ್ತು ಪಕ್ಷದ ಮುಖಂಡರು ಹಾಜರಿದ್ದರು.