ನಿತ್ಯವಾಣಿ, ಚಿತ್ರದುರ್ಗ, (ನ.01) :ಚಿತ್ರದುರ್ಗದಲ್ಲಿ ಮಾಜಿ ಕಾಂಗ್ರೆಸ್ಸಿನ ಮಾಜಿ ಸಚಿವರುಗಳಾದ ರಾಮಲಿಂಗ ರೆಡ್ಡಿ ಮತ್ತು ಟಿ ಬಿ ಜಯಚಂದ್ರ ಅವರು ಚಿತ್ರದುರ್ಗ ದಾವಣಗೆರೆ ಸ್ಥಳೀಯ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಬಿ ಸೋಮಶೇಖರ್ ಅವರ ಪರವಾಗಿ ಮತ ಯಾಚನೆಯನ್ನು ಪತ್ರಿಕಾಗೋಷ್ಠಿ ಮುಖಾಂತರ ಮತದಾರರಿಗೆ ಕೇಳಿಕೊಂಡರು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅವರ ಆಡಳಿತ ವೈಖರಿಯನ್ನು ವಿರೋಧಿಸಿ ವಾಗ್ದಾಳಿ ನಡೆಸಿದರು,
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಅಭ್ಯರ್ಥಿ ಬಿ ಸೋಮಶೇಖರ್ ಜಿಲ್ಲಾಧ್ಯಕ್ಷರಾದ ತಾಜ್ ಪೀರ್ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಸಂಪತ್ ಇನ್ನಿತರ ಮುಖಂಡರು ಭಾಗವಹಿಸಿದ್ದರು