ನಿತ್ಯವಾಣಿ ವಿಶೇಷ ವರದಿ : ಚಿತ್ರದುರ್ಗ ಚಿತಾಗಾರಲೊಂದು ಕಣ್ಣೀರಿನ ಕಥೆ…!

ನಿತ್ಯವಾಣಿ ವಿಶೇಷ ವರದಿ, ಚಿತ್ರದುರ್ಗ,(ಮೇ.31) :  ಚಿತಾಗಾರ ಲೊಂದು ಕಣ್ಣೀರಿನ ಕಥೆ,,, ನಿತ್ಯ ವಾಣಿ ಚಿತ್ರದುರ್ಗ,,, ಚಿತ್ರದುರ್ಗ ನಗರದ ಮುಕ್ತಿಧಾಮ ಚಿತಾಗಾರ ಕೆಂಚಪ್ಪನ ಗುಡಿ ಸ್ಮಶಾನದಲ್ಲಿ ಕಾವಲುಗಾರನ ಕಣ್ಣೀರಿನ ಕಥೆ, ಕೆ ಎಸ್ ಪುಟ್ಟಸ್ವಾಮಿ

ಇಲ್ಲಿ ಇತನೆ ಕಾವಲುಗಾರ ಮತ್ತು ಸಂಪೂರ್ಣ ನಿರ್ವಹಣೆ ಮಾಡುವ ವ್ಯಕ್ತಿ,  ಈ ಚಿತಗಾರ 1994 ನೇ ಇಸವಿಯಲ್ಲಿ  ಪ್ರಾರಂಭವಾಗಿದ್ದು ಇದು ನಗರಸಭೆ ಆಡಳಿತ  ಒಳಗೊಂಡಿದ್ದು,
ಪ್ರಾರಂಭದಿಂದ ಈತನನ್ನು ಚಿತಾಗಾರದಲ್ಲಿ ಕೆಲಸಕ್ಕೆ ತೆಗೆದುಕೊಂಡು ಪ್ರತಿ ತಿಂಗಳಂತೆ 300ರೂ ವೇತನವನ್ನು ಕೊಟ್ಟಿದ್ದು 2017 ನವೆಂಬರ್ ತಿಂಗಳ ರವರೆಗೆ 5000 ಸಾವಿರ ರೂಪಾಯಿಗಳವರೆಗೆ ಸಂಬಳವನ್ನು ಕೊಟ್ಟಿದ್ದು, ಅಲ್ಲಿಂದ ಸುಮಾರು 42 ತಿಂಗಳ ಕಾಲ ಸಂಬಳವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಈತನಿಗೆ ಸಂಸಾರವಿದ್ದು ಹೆಂಡತಿ ಮಗ ಸೊಸೆ ಜೊತೆಯಲ್ಲಿದ್ದು, ಮಗ ನಗರಸಭೆಯಲ್ಲಿ ಒಂದು ತಾತ್ಕಾಲಿಕ ಹುದ್ದೆಯನ್ನು ಮಾಡುತ್ತಿದ್ದು ಇದು ಜೀವನಕ್ಕೆ ಸಾಕಾಗದೆ ಈತ ಜೀವನ ಮಾಡುವುದಕ್ಕೆ ಒಂದು ಸಣ್ಣದಾದ ಮನೆಯನ್ನು ಕೊಟ್ಟಿರುತ್ತಾರೆ, ಇದೇನು ಸರಿ ಆದರೆ ಪ್ರತಿದಿನ ಕಷ್ಟಸುಖಗಳಿಗೆ ಜೀವನ ಮಾಡುವುದಕ್ಕೆ ಕಂಗಾಲಾಗಿರುವ ಸತ್ಯದ ಕಥೆ, ಈ ಒಂದು ಜಾಗದಲ್ಲಿ ಕೆಲಸ ಮಾಡುವುದಕ್ಕೆ ತುಂಬಾ ಕಷ್ಟಕರವಾಗಿದೆ, ಇಲ್ಲಿ ಯಾರೂ ಎಷ್ಟೇ ಹಣ ಕೊಟ್ಟರೂ ಕೂಡ ಮುಂದೆ ಬಂದು ಕೆಲಸ ಮಾಡುತ್ತೇನೆ ಎನ್ನುವರು ತುಂಬಾ ವಿರಳ,
 ಇಲ್ಲಿ ಇರುವುದಕ್ಕೆ ಉಳಿದುಕೊಳ್ಳುವುದು, ಕೆಲಸ ಮಾಡಲು ಭಯಭೀತರಾಗುತ್ತಾರೆ, ಆದರೆ ಈತನು ಕೆಲಸ ಮಾಡುತ್ತಿರುವುದು ಶ್ಲಾಘನೀಯ, ಈ ಚಿತಾಗಾರಕ್ಕೆ ಪ್ರಾರಂಭದಿಂದ ಮುಕ್ತಿದಾಮ ಚಿತಾಗಾರ ಸೇವಾ ಸಮಿತಿಯು ಇದ್ದು, ಒಬ್ಬ ಸಹಾಯಕನನ್ನು ಕೆಲಸಕ್ಕೆ ಇಟ್ಟು ಆತನಿಗೆ ಮಾತ್ರ ಸ್ವಲ್ಪ ಸಂಬಳ ಕೊಡುತ್ತಿರುವವರು, ಆದರೆ ಸರ್ವ ನಿರ್ವಹಣೆ ಮಾಡುತ್ತಿರುವ ಕೆಎಸ್ ಪುಟ್ಟಸ್ವಾಮಿ ಗೆ ಇತ್ತ ನಗರಸಭೆಯಿಂದ ಆಗಲಿ ಸೇವಾ ಸಮಿತಿಯಿಂದ ಆಗಲಿ ಯಾವುದೇ ಸಂಬಳ ಕೆಲವು  ತಿಂಗಳುಗಳು ನೀಡದೆ ನಗರಸಭೆ ಪೌರಾಯುಕ್ತರು, ಜಿಲ್ಲಾ ಯೋಜನಾಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹಾಕುತ್ತಿರುವುದು ಬೇಸರದ ಸಂಗತಿ, ಈತ   ನಗರಸಭೆ ಜಿಲ್ಲಾ ಅಧಿಕಾರಿಗಳ ಕಚೇರಿ ಸುಮಾರು ಬಾರಿ ಹೋಗಿ ಗೋಳನ್ನು ತೋಡಿಕೊಂಡಿದ್ದಾರೆ, ಆದರೆ ಇವರಿಗೆ ಆವಾಗ-ಈವಾಗ ಬಾ ಎಂದು ಸುಖಸುಮ್ಮನೆ ಓಡಾಡಿ ಸುತ್ತಿದ್ದಾರೆ.ಸುಮಾರು ಮೂರು ತಿಂಗಳ ಹಿಂದೆ ನಮ್ಮ ನಿತ್ಯ ವಾಣಿ ದಿನ ಪತ್ರಿಕೆಯ ಸಂಪಾದಕರು ಮಾಹಿತಿಯನ್ನು ತಿಳಿದು ಚಿತಾಗಾರಕ್ಕೆ ಭೇಟಿಕೊಟ್ಟಾಗ ಈತನು ಅಳಲನ್ನು ತೋಡಿಕೊಂಡರು, ಈತನನ್ನು ಕರೆದುಕೊಂಡು ಚಿತ್ರದುರ್ಗ ಜಿಲ್ಲಾಧಿಕಾರಿಗಳಾದ ಕವಿತಾ ಮನ್ನಿಕೆರಿ ಅವರ ಬಳಿ ಈತನ ಸಂಪೂರ್ಣ ಮಾಹಿತಿಯನ್ನು ತಿಳಿಸಿದಾಗ ಜಿಲ್ಲಾಧಿಕಾರಿಗಳು ತಕ್ಷಣವೇ ಪ್ರತಿಕ್ರಿಯಿಸಿ ನಗರಸಭೆ ಪೌರಾಯುಕ್ತರಿಗೆ ಹಾಗೂ ಜಿಲ್ಲಾ ನಗರ ಯೋಜನಾ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿಯನ್ನು ಕೊಟ್ಟರು, ಅಧಿಕಾರಿಗಳು ವೀಕ್ಷಿಸಿ ಇದನ್ನು ಸರಿಪಡಿಸುತ್ತೇವೆ ಎಂದು  ಉತ್ತರವನ್ನು ಕೊಟ್ಟರು ಆದರೆ ಅಲ್ಲಿಂದ ಇಲ್ಲಿಯವರೆಗೂ ಏನು ಕೆಲಸ ಆಗದೇ ಮಧ್ಯದಲ್ಲಿ ಮತ್ತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾದಾಗ ಇದೇ ತರ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತನಾಡಿದರೂ ಕೆಲಸ ಹಾಗದೆ ಅಧಿಕಾರಿಗಳು ಸುಳ್ಳು ಭರವಸೆಯನ್ನು ಕೊಟ್ಟು ಪ್ರತಿದಿನ ಈತನನ್ನು ಅಲೆದಾಡಿ ಸುತ್ತಿಸಿತಿರುವುದು ತುಂಬಾ ವಿಪರ್ಯಾಸ ವಾಗಿದೆ,
ಈ ವರ್ಷದ ಏಪ್ರಿಲ್ ದಿನಾಂಕ 27 ರಿಂದ ಕೋವಿಡ್ ನಿಂದ  ಮರಣ  ಹೊಂದಿರುವರು ಪ್ರತಿದಿನ 2ರಿಂದ 5ರವರೆಗೆ ಶವಗಳು ಬರುತ್ತಿವೆ, ಇದನ್ನು ಲೆಕ್ಕಿಸದೆ ಪ್ರಾಣವನ್ನು ಪಣಕ್ಕಿಟ್ಟು ಕರೋನಾ ಭೀತಿ ಇಲ್ಲದೆ ಶವಗಳ ಸಂಸ್ಕಾರ ಮಾಡುತ್ತಿದ್ದಾರೆ, ಇತ್ತೀಚಿಗೆ ಜಿಲ್ಲಾ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಅಧಿಕಾರಿಗಳು. ಜಿಲ್ಲಾ ಆರೋಗ್ಯ ಅಧಿಕಾರಿಗಳು,  ಜಿಲ್ಲಾಯೋಜನಾಧಿಕಾರಿಗಳು, ನಗರಸಭೆ ಪೌರಾಯುಕ್ತರು, ಭೇಟಿಕೊಟ್ಟಾಗ ಈತನನ್ನು ವಿಚಾರಿಸಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಇನ್ನು ಈತನ ಕೆಲಸ ಮಾಡಿಕೊಟ್ಟಿಲ್ಲ ಎಂದು  ಕೇಳಿದಾಗ ಇದಕ್ಕೆ ಏನಾದರೂ ಒಂದು ಪರಿಹಾರ ಮಾಡಿಕೊಡುತ್ತೇವೆ ಎಂದು ಸಬೂಬು ಉತ್ತರ ನೀಡಿ ಹೋಗಿರುತ್ತಾರೆ, ಆದರೆ ಇನ್ನೂ ಈತನಿಗೆ ನ್ಯಾಯ ಸಿಗದೇ ಇರುವುದು ತುಂಬಾ ದುಃಖಕರ ಸಂಗತಿಯಾಗಿದೆ, ಇನ್ನು ಮುಂದಾದರೂ ಈತನನ್ನು ಓಡಾಡಿಸದೆ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯತೆಯಿಂದ ನ್ಯಾಯ ದೊರಕಿಸ ಕೊಡಲು ನಮ್ಮ ನಿತ್ಯವಾಣಿ ದಿನಪತ್ರಿಕೆ ಮನವಿ ಮಾಡಿದೆ

Leave a Reply

Your email address will not be published.