ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿಗಳಿಂದ ಶ್ಲಾಘನೆ. ️

 ನಿತ್ಯವಾಣಿ, ಚಿತ್ರದುರ್ಗ,(ಜೂ.17) : ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ  ಹಗಲಿರುಳು ದುಡಿಯುತ್ತಿರುವ  ಚಿತ್ರದುರ್ಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ  ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ವಿಶೇಷವಾದ ಅಭಿನಂದನೆಗಳನ್ನು  ಜಿಲ್ಲಾಧಿಕಾರಿಗಳು ತಿಳಿಸಿ ಸರ್ಕಾರಿ ನೌಕರರ ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಕೆಲಸಗಳನ್ನು ಕಾರ್ಯಗಳನ್ನು ಶ್ಲಾಘಿಸಿದರು
ದಿನಾಂಕ 21.06.2021 ರಂದು ಬೆಳಗ್ಗೆ 6.30 ರಿಂದ 7:30ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಭಾಗವಹಿಸುವಂತೆ  ಮನವಿ ಮಾಡಿದರು.*
ಈ ವಿಚಾರವನ್ನು ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಅಧ್ಯಕ್ಷರಾದ  ಮಂಜುನಾಥ ಕೃಷ್ಣಮೂರ್ತಿ ಮಾತನಾಡುತ್ತ  ಭಾರತ ದೇಶದ ಕೊಡುಗೆಯಾಗಿರುವ ಯೋಗದ ಮಹತ್ವವನ್ನು ಸಾರುವ *7 ನೇ ಅಂತರಾಷ್ಟ್ರೀಯ ಯೋಗ* ದಿನಾಚರಣೆಯಲ್ಲಿ ರಾಜ್ಯದ ಜಿಲ್ಲೆಯ ಸಮಸ್ತ ಸರ್ಕಾರಿ ಅಧಿಕಾರಿ/ನೌಕರರು ಸಾರ್ವಜನಿಕರು ಭಾಗವಹಿಸುವಂತೆ  ಎಲ್ಲರಲ್ಲಿ ಮನವಿ ಮಾಡಿಕೊಂಡರು,.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com 

Leave a Reply

Your email address will not be published.