ನಿತ್ಯವಾಣಿ,ಚಿತ್ರದುರ್ಗ,(ಸೆ.26) : ಐತಿಹಾಸಿಕ ಚಿತ್ರದುರ್ಗದ ಕೋಟೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 8 ಕೋಟಿ ರೂ.ಗಳ ಅನುದಾನ ಬಂದಿದ್ದು, ಇದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು, ಕೋಟೆಯ ಅಭಿವೃದ್ಧಿ ಬಗ್ಗೆ ಹಲವಾರು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದಿಂದ 2019 ನೇ ಇಸವಿಯಲ್ಲಿ 100 ಕೋಟಿ ಅಂದಾಜು ಹಣ ಬೇಕು ಎಂದು ಐತಿಹಾಸಿಕ ಕೋಟೆಗೆ ಅನುದಾನ ಬೇಕು ಎಂದು ರಾಜ್ಯ ಸರ್ಕಾರ ಕೇಳಿತ್ತು. ಆದರೆ ಸುಮಾರು 8 ಕೋಟಿ ವೆಚ್ಚಕ್ಕೆ ಅರ್ಕಾಲಜಿ ಇಂಡಿಯಾಕ್ಕೆ 1 ಕೋಟಿ 43 ಲಕ್ಷ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಈಗ ಟೆಂಡರ್ ಕರೆಯಲಾಗಿದೆ. ಈ ಅನುದಾನದಲ್ಲಿ ಕೋಟೆಯ ಮೇಲ್ಬಾಗದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಒಂದು ಬಾರಿ ಟೆಂಡರ್ ಕರೆದಿದ್ದು, ಅವೆಲ್ಲಾ ತಾಂತ್ರಿಕಾ ಕಾರಣದಿಂದ ರದ್ದಾಗಿದ್ದವು. ಈಗ ಮತ್ತೊಮ್ಮೆ ಟೆಂಡರ್ ಕರೆಯುವ ಮೂಲಕ ಶೀಘ್ರವಾಗಿ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಆಧಿಕಾರಿಗಳಿಗೆ ಶಾಸಕ ತಿಪ್ಪಾರೆಡ್ಡಿ ಸೂಚನೆ ನೀಡಿ ಪಾತವೆ ವರ್ಕ್ ಮಾಡಲು ಟೆಂಡರ್ ಕರೆಯಲಾಗಿದೆ. 94 ವೆಚ್ಚದಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ 36.94 .640 ಹಣ ನೀಡಿದೆ. ಲ್ಯಾಂಟ್ ಸ್ಕಿಪ್ಪಿಂಗ್ ಅಲಾಂಗ್ ಮಾಟ್- 69.79.408 , ಸಿಗ್ನಲ್ಸ್ 35.27 663, ಪಾತವಾಸ್ 3.35.69.093 ,ಹಣ ಬಿಡುಗಡೆ ಮಾಡಿದೆ. ತ್ವರಿತಗತಿಯಲ್ಲಿ ಕೆಲಸ ಮಾಡಬೇಕಿದೆ. ಸುಮಾರು 15 ಕೋಟಿ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಮೊದಲೇ ಕಂತಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಇದರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲು ಇಲಾಖೆ ಮುಂದಾಗಿದೆ, ಕೋಟೆಯ ಕೆಳಗಡೆ ಈಗಾಗಲೇ ವಿವಿಧ ರೀತಿಯ ಕಾಮಗಾರಿ ನಡೆಯುತ್ತಿದೆ ಈಗ ಬಂದಿರುವ ಅನುದಾನದಲ್ಲಿ ಕೋಟೆಯ ಮೇಲ್ಬಾಗದಲ್ಲಿ ಮತ್ತು ನಗರದ ಕೆಲವಡೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ದಿನದಿಂದ ದಿನಕ್ಕೆ ಕೋಟೆಯನ್ನು ವೀಕ್ಷಣೆ ಮಾಡಲು ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಇವರಿಎಗ ಅಗತ್ಯವಾದ ಮೂಲ ಸೌಲಭ್ಯವನ್ನು ನೀಡುವ ಸಲುವಾಗಿ ಸಕಾರದವತಿಯಿಂದ ಕೋಟೆಯ ಮುಂಭಾಗದಲ್ಲಿ ಶೌಚಾಲಯ, ಲಗೇಜ್ ಇಡಲು ಜಾಗವನ್ನು ಮಾಡಲಾಗುತ್ತಿದೆ. ಈಗ ಕೋಟೆಯಲ್ಲಿ 50 ಬೆಂಚ್, ಕೋಟೆಯಲ್ಲಿ ವ್ಯಾಬ್ ಕೋರ್ಸ್, ಟಿಕೆಟ್ ಎರಿಯಾ, ಕ್ಲಾನ್ ರೂಂ, ಡ್ರಿಕಿಂಗ್ ವಾಟರ್, ಪಬ್ಲಿಕೇಷನ್ ಹೀಗೆ 5 ನೂತನ. ಕೊಠಡಿಗಳನ್ನು ಮಾಡಲಾಗುತ್ತದೆ. ಸಿ.ಸಿ.ರೋಡ್ ಮಾಡಲಾಗಿದೆ. ಪ್ರವಾಸಿಗರಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಕಲ್ಪಸಲಾಗಿದೆ ಎಂದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡವರಿಗೆ ಒಂದು ಪಂಚಾಯಿಗೆ 25 ಗ್ರಾಮ ಪಂಚಾಯತಿ ಸದಸ್ಯರು ಇರುವ ಪಂಚಾಯಿತಿಗೆ 50 ಮನೆ, 15 ರಿಂದ 25 ಸದಸ್ಯರ ಒಳಗೆ ಇರುವ ಪಂಚಾಯಿತಿಗೆ 40 ಮನೆ, 15 ಕ್ಕಿಂದ ಕಡಿಮೆ ಸದಸ್ಯರು ಇರುವ ಪಂಚಾಯತಿಗೆ 30 ಮನೆಗಳು ನೀಡಲಾಗುತ್ತದೆ ಎಂದ ಶಾಸಕರು ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಈ ಸಂಭಂದ ತಕಾರರು ಇದಲ್ಲಿ ನಾವುಗಳು ಇತ್ಯರ್ಥ ಮಾಡಿ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಏಕನಾಥೇಶ್ವರಿ ದೇವಿಗೆ ಅಮ್ಮನವರ ಬಂಗಾರದ ಮುಖಪದ್ಮ ಬಂಗಾರದ 80-90 ಲಕ್ಷ ಮಾಡಲಾಗಿದೆ. ಬೆಳ್ಳಿ ಆಭರಣದ ಸುಪರ್ದಿಗೆ ಮಾಡಲಾಗುತ್ತದೆ. ವಜ್ರದಲ್ಲಿ ದೇವಿಗೆ ಹಣೆಪಟ್ಟಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ. ಜಾತ್ರೆ ಸಮಯದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಶಶಿಧರ್, ನಗರಸಭೆ ಮಾಜಿ ಸದಸ್ಯ ಎಸ್‍ಬಿಲ್ ಮಲ್ಲಿಕಾರ್ಜುನ್, ರಾಮಜ್ಜ, ದೊರೆಸ್ವಾಮಿ, ಓಂಕಾರ್ ಸೇರಿದಂತೆ ಇತರರು ಹಾಜರಿದ್ದರು.