ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ಕೃತಕ ಜಲಪಾತ ನಿರ್ಮಾಣ

ನಿತ್ಯವಾಣಿ, ಚಿತ್ರದುರ್ಗ,(ಡಿ.04) : ಕಳೆದ ಕೆಲ ದಿನಗಳಿಂದ ಚಿತ್ರದುರ್ಗದಲ್ಲಿ ಬಾರಿ ಮಳೆಯಾಗುತ್ತಿದ್ದು ಇದರಿಂದ ಚಿತ್ರದುರ್ಗ ಹೊರವಲಯ ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ಕೃತಕ ಜಲಪಾತ ನಿರ್ಮಾಣವಾಗಿದ್ದು ಕಂಡು ಬಂದಿತ್ತು.

ಇನ್ನೂ ಕಳೆದ ಒಂದು ವಾರದಿಂದಲೂ ಸಹ ಸುರಿದ ಮಳೆಯಿಂದಾಗಿ ಜೋಗಿಮಟ್ಟಿ ಅರಣ್ಯಧಾಮದ ಇಕ್ಕೆಲಗಳಲ್ಲಿ ಬಂಡೆಗಳ ನಡುವಲ್ಲಿ ನೀರು ಜಲಪಾತದ ರೀತಿಯಲ್ಲಿ ಹರಿದು ಬರುತ್ತಿದ್ದು ಪ್ರವಾಸಿಗರೊಬ್ಬರು ಈ ದೃಶ್ಯಗಳನ್ನು ತಮ್ಮ‌ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಈ ಪ್ರವಾಸಿ ತಾಣಕ್ಕೆ ಪ್ರತಿನಿತ್ಯ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಸೇರಿದಂತ ಹಲವು ಕಡೆಯಿಂದ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು ಈ ಕೃತಕ ಜಲಪಾತವು ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದ್ದು ಕಂಡು ಬಂದಿದೆ. ಇನ್ನೂ ಜೋಗಿಮಟ್ಟಿಯ ಹತ್ತಾರು ಕಡೆ ಇದೇ ರೀತಿ ಜಲಪಾತ ಸೃಷ್ಟಿಯಾಗಿದ್ದು ಇದೊಂದು ಪ್ರೇಕ್ಷಣೀಯ ಸ್ಥಳವಾಗಿ ಸೃಷ್ಟಿಯಾಗಿದೆ

Leave a Reply

Your email address will not be published.