ಚಿತ್ರದುರ್ಗ : ಪೊಲೀಸರ ಲಾಠಿ ಏಟಿಗೆ ಹೆದರಿ ಲಾಕ್‍ಡೌನ್ 2ನೇ ದಿನ ಮನೆ ಸೇರಿದ ಜನ

ನಿತ್ಯವಾಣಿ, ಚಿತ್ರದುರ್ಗ, ಮೇ. 11 : ಪೊಲೀಸರ ಲಾಠಿ ರುಚಿ ಹಾಗೂ ಸರ್ಕಾರದ ಬಿಗಿಯಾದ ನಿಯಮದಿಂದ ಎರಡನೆ ದಿನದ ಲಾಕ್‍ಡೌನ್‍ಗೆ ಇಂದು ನಿರೀಕ್ಷೆಗೆ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದಿಗ್ಬಂಧನ ಹಾಕಿಕೊಂಡಿದ್ದಾರೆ.ಮನೆಯಿಂದ ಆಚೆ ಬಂದರೆ ವಾಹನಗಳನ್ನು ಜಪ್ತಿ ಮಾಡಬಹುದೆಂಬ ಭೀತಿ , ಲಾಠಿ ರುಚಿ, ದಂಡ ಇತ್ಯಾದಿ ಕಾರಣಗಳಿಂದ ಬೆದರಿದ ಸಾರ್ವಜನಿಕರು ಇಂದು ಬಹುತೇಕ ಕಡೆ ಮನೆಯಿಂದ ಹೊರ ಬಾರದೆ ತಮಗೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್‍ಡೌನ್ ಜಾರಿಯಲ್ಲಿದ್ದರೂ ಅಷ್ಟಿಷ್ಟು ಸಂಖ್ಯೆಯಿಂದ ಗಿಜಿಗುಡುತ್ತಿದ್ದ ನಗರದ ವಿವಿಧ ರಸ್ತೆ ಸೇರಿದಂತೆ ಎಲ್ಲೆಡೆ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋವಿಡ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಜನರೇ ಬಹುತೇಕ ಕಡೆ ಸ್ವಯಂ ಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ವಿಧಿಸಿಕೊಂಡಿದ್ದರು. ಹೀಗಾಗಿ ಬಸ್ ನಿಲ್ದಾಣ, ಮಾರುಕಟ್ಟೆ , ಆಟೋ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಪಿಂಗ್ ಮಾಲ್‍ಗಳು ಸೇರಿದಂತೆ ಬಹುತೇಕ ಕಡೆ ಅಘೋಷಿತ ಬಂದ್ ನಿರ್ಮಾಣವಾಗಿತ್ತು.

ನಗರದ ವಿವಿಧೆಡೆ ಮಾರುಕಟ್ಟೆಯನ್ನು ಬೆಳ್ಳಂ ಬೆಳಗ್ಗೆ ಬಂದ್ ಮಾಡಿದ್ದರು. ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಪೆÇಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಯಾರೂ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದರು. ಪ್ರತಿ ದಿನ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ವಿವಿಧ ರಸ್ತೆ ಇಂದು ಖಾಲಿ ಖಾಲಿಯಾಗಿತ್ತು. ಸಣ್ಣ ಮಾರುಕಟ್ಟೆಯಲ್ಲಿ ಕೂಡ ಇಂದು ಜನಸಂಖ್ಯೆ ತೀರಾ ವಿರಳವಾಗಿತ್ತು.ಕೇವಲ ಅಗತ್ಯ ವಸ್ತುಗಳ ಸಾಗಣೆ ಮಾಡುತ್ತಿದ್ದ ವಾಹನಗಳಿಗೆ ಅನುಮತಿ ಕೊಡಲಾಗಿತ್ತು. ಹೀಗಾಗಿ ಈ ಹಿನ್ನೆಲೆಯಲ್ಲಿ ಪೊಲೀಸರು ಜನರು ಖರೀದಿ ಮುಗಿಯುತ್ತಿದ್ದಂತ ಮನೆಗೆ ಹೋಗುವಂತೆ ಸೂಚನೆ ಕೊಡುತ್ತಿದ್ದರು.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಹಿರಿಯೂರು ರಸ್ತೆ, ಚಳ್ಳಕೆರೆ ರಸ್ತೆ, ದಾವಣಗೆರೆ, ಹೊಳಲ್ಕೆರೆ ಸೇರಿದಂತೆ ನಗರಕ್ಕೆ ಅಷ್ಟ ದಿಗ್ಬಂಧನ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ನಿನ್ನೆಗೆ ಹೋಲಿಸಿದರೆ ಇಂದು ಎಲ್ಲಿಯೂ ಕೂಡ ದೊಡ್ಡ ಪ್ರಮಾಣದಲ್ಲಿ ಜನರು ಗುಂಪುಗೂಡುವ ದೃಶ್ಯಗಳು ಕಂಡು ಬರಲಿಲ್ಲ.

ತರಕಾರಿ, ಹೂವು, ಹಣ್ಣು, ಹಂಪಲು, ಮಾಂಸ ಇತ್ಯಾದಿ ವಸ್ತುಗಳನ್ನು ಖರೀದಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಬಳಸಬಾರದೆಂಬ ನಿಯಮವನ್ನು ಸಡಿಲಿಕೆ ಮಾಡಿದ್ದರಿಂದ ವಾಹನಗಳಲ್ಲಿ ಬೇಗ ಬೇಗನೇ ಖರೀದಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು

.ಬದಲಾದ ಪೆÇಲೀಸ್ ವ್ಯವಸ್ಥೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು , ಮಾಸ್ಕ್ ಧರಿಸದಿರುವುದು ಹಾಗೂ ಅನಗತ್ಯವಾಗಿ ರಸ್ತೆಗೆ ಬಂದವರು ಮತ್ತು ರೋಡ್ ರೋಮಿಯೋಗಳಿಗೆ ಲಾಠಿ ರುಚಿ ತೋರಿಸಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪೆÇಲೀಸರ ಶೈಲಿ ಇಂದು ಬದಲಾಗಿತ್ತು.

ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ನಡೆಸದಂತೆ ಬಸವರಾಜ್ ಬೊಮ್ಮಾಯಿ, ರಾಜ್ಯ ಪೆÇಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಇಂದು ಲಾಠಿ ಏಟು ನಡೆದಿರುವ ಪ್ರಕರಣಗಳು ವರದಿಯಾಗಿಲ್ಲ. ಪೆÇಲೀಸರು ಇಂದು ಸಾರ್ವಜನಿಕರ ಜತೆ ವರ್ತಿಸುತ್ತಿದ್ದ ದೃಶ್ಯ ಕಂಡು ಬಂತು. ಎಂದಿನಂತೆ ವಾಹನಗಳನ್ನು ಜಪ್ತಿ ಮಾಡುವುದು. ದಂಡ ವಿಧಿಸುವುದು, ಮಾಸ್‍ಕ್ ಹಾಕದವರಿಗೆ ಶಿಕ್ಷೆಗೆ ಹಾಗೂ ಕೆಲವರು ತಿಳಿ ಹೇಳುವ ಕೆಲಸ ಮಾಡುತ್ತಿದ್ದರು. ನಿನ್ನೆಗೆ ಹೋಲಿಸಿದರೆ ಇಂದು ಪರಿಸ್ಥಿತಿ ವಿಭಿನ್ನವಾಗಿತ್ತು.

 

Leave a Reply

Your email address will not be published.