ನಿತ್ಯವಾಣಿ, ಚಿತ್ರದುರ್ಗ, (ಜ.16) : ಜಲ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕ ಮೂಲಕ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ಆಲಗಟ್ಟ, ಓಬವ್ವನಾಗತೀಹಳ್ಳಿ ಮತ್ತು ಗೊಲ್ಲರಹಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮತ್ತು ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ನೀಡುವ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.
ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಜಲಜೀವನ್ ಮಿಷನ್ ಸಹ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗೆ ತುತ್ತಾಗುತ್ತಿದ್ದರು. ಸರ್ಕಾರ ಸಾಕಷ್ಟು ಕಡೆಗಳಲ್ಲಿ ಆರ್ಓ ಪ್ಲಾಂಟ್ ಮಾಡಿದರು ಸಹ ಇನ್ನು ಆನರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ನಾವು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಜಾತ್ಯತೀತವಾಗಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆ ಎಂದರು.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರು ಒದಗಿಸಲಾಗುವುದು. ಈ ಯೋಜನೆಯನ್ನು ಮುಂದಿನ ದೂರದೃಷ್ಟಿ ಕೋನದಿಂದ ಮಾಡಲಾಗಿದೆ. ಇಂದು ಅಲಗಟ್ಟ ಗ್ರಾಮದ 358 ಮನೆಗಳಿಗೆ 66.5 ಲಕ್ಷ, ಓಬವ್ವನಾಗತೀಹಳ್ಳಿ ಗ್ರಾಮದ 230 ಮನೆಗಳಿಗೆ 47.60 ಲಕ್ಷ , ಗೊಲ್ಲರಹಟ್ಟಿ ಗ್ರಾಮದ 30 ಮನೆಗಳಿಗೆ 25 ಲಕ್ಷ ವೆಚ್ಚದಲ್ಲಿ ಒಟ್ಟು 1 ಕೋಟಿ 40 ಲಕ್ಷ ವೆಚ್ಚದ
ಕಾಮಗಾರಿಯನ್ನು ಮಾಡಲಾಗುತ್ತಿದೆ. ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮತ್ತು ತಾಲೂಕಿನ 173 ಹಳ್ಳಿಗಳಿಗೆ ಜನ ಜೀವನ್ ಮಿಷನ್ ನೀರಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿಗೆ ಚಾಲನೆ: ದ್ಯಾಮನಹಳ್ಳಿಯಲ್ಲಿ ಪಿಡ್ಲ್ಯೂಡಿ ಇಲಾಖೆಯಿಂದ 5.68 ಕೋಟಿ. ವೆಚ್ಚದಲ್ಲಿ ಗ್ರಾಮೀಣ ಭಾಗದ ಮುಖ್ಯರಸ್ತೆ ಮೂಲಕ ಒಳರಸ್ತೆಗಳು ಮಾಡಲಾಗುತ್ತಿದೆ. ಚಿಕ್ಕೆನಹಳ್ಳಿ, ನೀಲಯ್ಯನಹಟ್ಟಿ, ಅಲಘಟ್ಟ, ಒಡ್ಡಾರಸಿದ್ದವ್ವನಹಳ್ಳಿ, ಒಬವ್ವನಾಗತಿಹಳ್ಳಿ, ಮೂಲಕ ಸಿರಿಗೆರೆ ತಲುಪುವ ರಸ್ತೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಅನುದಾನದಲ್ಲಿ 3.80ಕೋಟಿ ಲಕ್ಷ ವೆಚ್ಚದಲ್ಲಿ ಚಿಕ್ಕಲ್ಲಘಟ್ಟ, ತುರೇಬೆಲೆ, ಕೊಣನೂರು ರಸ್ತೆಯ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು ಒಟ್ಟಾರೆಯಾಗಿ ಇದರಿಂದ ರೈತ ಸಮುದಾಯಕ್ಕೆ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗುತ್ತದೆ ಎಂದರು. ಈ ಭಾಗದಲ್ಲಿ 50-60 ಕೋಟಿ ಅನುದಾನ ತಂದು ಉಳಿದ ಎಲ್ಲಾ ರಸ್ತೆಗಳನ್ನು ಸಿ.ಸಿ. ರಸ್ತೆ ಮತ್ತು ಡಾಂಬರಿಕರಣ ಮಾಡಿ ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಸಿರಿಗೆರೆ ಶ್ರೀ ನೆನೆದ ಶಾಸಕರು: ಸಿರಿಗೆರೆ ಶ್ರೀಗಳು ಕೆರೆ ಈ ಭಾಗದ ಅನೇಕ ಕೆರೆಗಳು ತುಂಬಿಸುವ ಮೂಲಕ ಅಂತರ್ಜಲ ವೃದ್ದಿಯಾಗಲು ಶ್ರಮಿಸಿದ್ದು ಅವರ ಕಾರ್ಯವನ್ನು ಸ್ಮರಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ನಿರ್ಮಲ, ಸದಸ್ಯರಾದ ರಾಮಪ್ಪ, ನಾಗರಾಜ್, ರತ್ನಮ್ಮ, ವಿಎಸ್ ಹಳ್ಳಿ ಕರಿಯಪ್ಪ ಮುಖಂಡರಾದ ಗೋವಿಂದ ರಾಜ್, ಲೋಹಿತ್, ಮಂಜುನಾಥ್, ಮಲ್ಲಿಕಾರ್ಜುನ್, ಈಶಣ್ಣ, ಕರಿಯಮ್ಮ, ಜಯಲಕ್ಷ್ಮಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಮಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಪುರೋಷತ್ತಮ್ಮ, ಇಂಜಿನಿಯರ್ ಅರುಣ್ ಮತ್ತು ಗ್ರಾಮಸ್ಥರು ಇದ್ದರು.