ನಿತ್ಯವಾಣಿ,ಚಿತ್ರದುರ್ಗ: ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಚಿತ್ರದುರ್ಗ ರೈಫಲ್ ಕ್ಲಬ್, ಹಾಗೂ ರೆಡ್ ಕ್ರಾಸ್, ಸಹಯೋಗದೊಂದಿಗೆ ನಾಗರಿಕ ಬಂದೂಕು ತರಬೇತಿ ಶಿಬಿರದ ಅಂಗವಾಗಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.23 ರ ಬುಧವಾರ ಬೆಳಗ್ಗೆ 7.30ಕ್ಕೆ ಹಮ್ಮಿಕೊಳ್ಳಲಾಗಿದೆ.
ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಶಿಬಿರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರಶುರಾಮ ಅವರು ಉದ್ಘಾಟನೆ ಮಾಡುವರು.
ಜಿಲ್ಲಾ ಹೆಚ್ಚುವರಿ ಅಧೀಕ್ಷಕರಾದ ಎಸ್.ಜೆ. ಕುಮಾರಸ್ವಾಮಿ ಮತ್ತು ಡಿವೈಎಸ್ ಪಿ ಜಿ.ಎಂ.ತಿಪ್ಪೇಸ್ವಾಮಿ, ರೈಫಲ್ ಕ್ಲಬ್ ಅಧ್ಯಕ್ಷರಾದ ಎಂ.ಕೆ. ಅನಂತ ರೆಡ್ಡಿ, ರೆಡ್ ಕ್ರಾಸ್ ಛೇರ್ಮನ್ ಮಹೆಂದರ್ ನಾಥ್ ಆರೋಗ್ಯ ಇಲಾಖೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
150 ಜನ CRTC ಶಿಬಿರಾರ್ಥಿಗಳಿಗೆ ಹತ್ತು ದಿನಗಳ ಶಿಬಿರ ನಡೆಯುತ್ತಿದ್ದು ವಿವಿಧ ಕಾರ್ಯಕ್ರಮ ಗಳು ನಡೆಯಲಿವೆ.