ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿ ರಾಧಿಕಾ ರವರು ಸುಬಾಹು ಎಂಬ ಹೆಸರಿನ ಎಲೆಕ್ಟ್ರಾನಿಕ್ಸ್ ಇ- ಬೀಟ್ ಕಾರ್ಯಕ್ರಮವನ್ನುಉದ್ಘಾಟಿಸುತ್ತಾ ಇದರ ಉಪಯೋಗ ಪೂರ್ಣ ಸಾರಾಂಶವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತಾ ಪೊಲೀಸ್ ಇಲಾಖೆಯಲ್ಲಿ ಹಿಂದೆ ಪೊಲೀಸ್ ನೈಟ್ಇ- ಬಿಟ್ ವ್ಯವಸ್ಥೆ ಇದ್ದರು ಪರಿಣಾಮಕಾರಿಯಾಗಿಲ್ಲ ಇ- ಬೀಟ್ ನಲ್ಲಿರುವ ಪೊಲೀಸ್ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ವಾರಕ್ಕೊಮ್ಮೆ ಬಂದು ವಾರದ ಸಹಿ ಮಾಡುತ್ತಿದ್ದಾರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ಮುಂದಾಗಿದೆ ಎಂದು ಜಿಲ್ಲೆಯಲ್ಲಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸ್ಮಾರ್ಟ್ ಎಲೆಕ್ಟ್ರಾನಿಕ್ ಇ- ಬಿಟ್ ವ್ಯವಸ್ಥೆ ಮಾಡುವ ಮೂಲಕ ಇ- ಬಿಟ್ ಪದ್ಧತಿಗೆ ಹೈಟೆಕ್ ಸ್ಪರ್ಶ ನೀಡುತ್ತಿದೆ. ಈಗಾಗಲೇ ಜಾರಿಯಲ್ಲಿರುವ ನೈಟ್ ಬಿಟ್ನಾ ಕೆಲವು ಪೊಲೀಸರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಕೇಳಿಬರುತ್ತಿದೆ ಹೀಗಾಗಿ ಸಿಬ್ಬಂದಿ ಮೇಲೆ ನಿಗಾವಹಿಸಲು ಮತ್ತುಸಾರ್ವಜನಿಕರಿಗೆ ಸೂಕ್ತ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ವಿನೂತನ ಮಾದರಿಯಲ್ಲಿ ಈ ಬೀಟ್ ವ್ಯವಸ್ಥೆ ಜಾರಿ ಮಾಡುತ್ತಿದೆ. ಸದ್ಯ ಈ ವ್ಯವಸ್ಥೆಚಿತ್ರದುರ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಾರಂಭ ಮಾಡುತ್ತೇವೆ. ನಮ್ಮ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿನ ಒಟ್ಟು ಇಬಿಟ್ ಸಾವಿರ ಸಾವಿರ 1124 ಪಾಯಿಂಟ್ಸ್ ಇರುತ್ತದೆ ಚಿತ್ರದುರ್ಗ ಉಪವಿಭಾಗದಲ್ಲಿ ಈ ಬೀಟ್ ಪಾಯಿಂಟ್ಸ್ 551 ಚಳ್ಳಕೆರೆ ಉಪವಿಭಾಗದಲ್ಲಿ ಪಾಯಿಂಟ್ಸ್ 233 ಹಿರಿಯೂರು ಉಪವಿಭಾಗದಲ್ಲಿ ಬೀಟ್ ಪಾಯಿಂಟ್ಸ್ 340 ಈ ಬಿಟ್ನ ವ್ಯವಸ್ಥೆ ಏನೆಂದರೆ ಎಲೆಕ್ಟ್ರಾನಿಕ್ ಇ-ಬಿಟ್ ಅವಸ್ಥೆಯಲ್ಲಿ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಅಭಿವೃದ್ಧಿಪಡಿಸಿದ ಆಪನ್ನು ಸಿಬ್ಬಂದಿಯವರ ಫೋನುಗಳಿಗೆ ಅಳವಡಿಸಲಾಗುತ್ತದೆ ಅಲ್ಲಿಯೇ ಈ ಆಪ್ ಅನ್ನು ಕ್ಯೂಆರ್ ಕೋಡ್ ಅಭಿವೃದ್ಧಿಪಡಿಸಿದ್ದು ಇ- ಬಿಟ್ ನಿಗದಿತ ಪಾಯಿಂಟ್ ನ ಮನೆಗಳಲ್ಲಿ ಕೋಡ್ ಅಳವಡಿಸಲಾಗಿದೆ. ಪಾಯಿಂಟ್ ಗೆ ತೆರಳಿದ ನಂತರ ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಪ್ರದೇಶದಲ್ಲಿ ನಿಂತು ಆಪನ್ನು ಆನ್ ಮಾಡಬೇಕು ಒಂದುವೇಳೆ ಸಿಬ್ಬಂದಿ ಆಪ್ ಅನ್ನು ಆನ್ ಮಾಡದಿದ್ದರೆ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ತಿಳಿದುಬರುತ್ತದೆ. ಕೆಲವು ಜಿಲ್ಲೆಗಳಲ್ಲಿ ಅಳವಡಿಸಿದ ಕ್ಯೂಆರ್ ಕೋಡ್ ಅನ್ನು ಹಾಳು ಮಾಡಿರುವ ಪ್ರಕರಣಗಳು ಗೊತ್ತಾಗಿವೆ. ಹೀಗಾಗಿ ಇ- ಬಿಟ್ ನಿಗದಿತ ಪಾಯಿಂಟ್ ನ ಮನೆ ಒಳಗಡೆಯೇ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಕೋಡ್ ಇರುವ ಸುತ್ತಲಿನ ಕೆಲ ಅಂತರದ ಸ್ಥಳದಲ್ಲಿಯೇ ಆಪನ್ ಮಾಡಿದರೆ ಸಿಬ್ಬಂದಿ ಹಾಜರಾತಿ ನೊಂದಣಿ ಆಗುತ್ತದೆ. ಹೀಗಾಗಿ ಈ ವ್ಯವಸ್ಥೆ ಜಾರಿಯಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರ ಭದ್ರತೆಯ ಕಾರ್ಯ ಹೆಚ್ಚುತ್ತಿದೆ. ಅಪರಾಧ ಚಟುವಟಿಕೆ ಗಳಿಗೆ ಈ ಹಿಂದೆ ಇದ್ದ ರಾತ್ರಿ ಗಸ್ತಿನ ಸಿಬ್ಬಂದಿ ಹಾಗೂ ಉಸ್ತುವಾರಿ ಅಧಿಕಾರಿಗಳ ಕರ್ತವ್ಯಲೋಪ ಪತ್ತೆ ಹಚ್ಚುವುದುಅಷ್ಟು ಸುಲಭವಾಗಿರಲಿಲ್ಲ. ಒಂದು ವೇಳೆ ಪತ್ತೆಯಾದರೂ ಕೆಲವು ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈ ಬಿಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಮುಖ್ಯ ಅಂಶಗಳು ಏನೆಂದರೆ ಈ ವ್ಯವಸ್ಥೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡಾಗ ಫೋಟೋ ಅಥವ ವಿಡಿಯೋ ಮೂಲಕ ಆಪ್ನಲ್ಲಿ ತಕ್ಷಣಕ್ಕೆ ಮೇಲಾಧಿಕಾರಿಗಳಿಗೆ ಕಳಿಸಬಹುದು. ಆಫೀಸರ್ ಪೊಲೀಸ್ ಸಿಬ್ಬಂದಿಗಳ ಚಲನವಲನಗಳನ್ನು ಪತ್ತೆಹಚ್ಚಬಹುದು. ಪೋಲಿಸ್ನವರು ಕ್ಯೂಆರ್ ಕೋಡ್ ಸ್ಕ್ಯಾನ್ಮಾಡಿದಾಗ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ದ ಬಗ್ಗೆ ನೈಟ್ ಬೀಟ್ ಆಫೀಸರಿಗೆ ಮೆಸೇಜ್ ಹೋಗುತ್ತದೆ. ಇ- ಬೀಟ್ ವ್ಯವಸ್ಥೆ ಗೆ ಸುಬಾಹು ಎಂದು ಹೆಸರಿಟ್ಟಿದ್ದು, ಇದೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದೆ. ಇ ಬೀಟ್ ವ್ಯವಸ್ಥೆ ಯು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ಸೈಬರ್ ಕ್ರೈಂ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳಾದ ಪಿಸ್ ಐ ರಮಾಕಾಂತ.ವೈ. ಹುಲ್ಲಾರ ಮತ್ತು ಪಿ ಎಸ್ ಐ, ಸ್ವಾತಿ. ಡಿ.ಸಿ ಹಾಗೂ ಸಿಬ್ಬಂದಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹಾನಿಂಗ ನಂದಗಾoವಿ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಚಿತ್ರದುರ್ಗ ಜಿಲ್ಲೆಯಲ್ಲಿ ವ್ಯವಸ್ಥೆನ್ನು ಯಶಸ್ವಿಯಾಗಿ ಜಾರಿಗೊಳಿಸಲು ಕೈಗೊಂಡಿರುತ್ತಾರೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಿವೈಸ್ಪಿಗಳಾದ ಪಾಂಡುರಂಗ, ಶ್ರೀಧರ್, ತಿಪ್ಪೇಸ್ವಾಮಿ ಇದ್ದರು
Attachments area