ಚಿತ್ರದುರ್ಗ ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡುವಂತೆ ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಕರೆ

ಸರ್ಕಾರ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಾಗೂ ಅಗದಂತೆ ತಡೆಯುವ ಸಲುವಾಗು ವಿವಿಧ ರೀತಿಯ ಸೌಲಭ್ಯ ಹಾಗೂ ಸಲಕರಣೆಗಳನ್ನು ನೀಡಿದೆ ಅದರ ಉಪಯೋಗದಿಂದ ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡುವಂತೆ ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಕರೆ ನೀಡಿದ್ದಾರೆ.

ನಗರದ ಪೋಲೀಸ್ ಕವಾಯತ್ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೋಲೀಸ್ ಇಲಾಖೆವತಿಯಿಂದ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ಹಾಗೂ ಮಾನವ ಕಳ್ಳ ಸಾಗಾಣಿಕೆ ನಿಷೇಧಕ್ಕಾಗಿ ನಿರ್ಭಯ ಪಡೆಗಾಗಿ ಸರ್ಕಾರದಿಂದ ನೀಡಲಾಗಿರುವ ಬೈಕ್‍ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋಟೆನಾಡಿನಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ನಿರ್ಭಯ ಪಡೆ ಸಜ್ಜಾಗಿದ್ದು, ಸರಗಳ್ಳತನ ಸೇರಿದಂತೆ ಇತರೆ ಪ್ರಕರಣಗಳನ್ನು ತಗ್ಗಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಚಿತ್ರದುರ್ಗ ವಿಶೇಷ ನಿರ್ಭಯ ದ್ವಿಚಕ್ರ ವಾಹನಗಳು ಇಡೀ ನಗರದ್ಯಾಂತ ಗಸ್ತು ತಿರುಗಲಿವೆ. ನಿರ್ಭಯ ಪಡೆಯ ಗಸ್ತು ವಾಹನಗಳುಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ನಿಂತಿವೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ನಿರ್ಭಯ ಯೋಜನೆ ಅಡಿಯಲ್ಲಿ ಜಿಲ್ಲೆಗೆ 23 ಹೊಸ ಬೈಕ್‍ಗಳನ್ನು ನೀಡಲಾಗಿದೆ ಎಂದರು.

ಠಾಣೆಗಳ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಈ ನಿರ್ಭಯ ಪಡೆ ರಚಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಘಟನಾ ಸ್ಥಳಕ್ಕೆ ಹೋಗಲು, ತನಿಖೆ ನಡೆಸಲು ಈ ಬೈಕ್‍ಗÀಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ನಗರದಲ್ಲಿ ಒಟ್ಟು 21 ಠಾಣೆಗಳಿದ್ದು ಮಹಿಳಾ ಠಾಣೆಗೆ 2 ಹಾಗೂ ಉಳಿದ ಠಾಣೆಗಳಿಗೆ ಒಂದೊಂದು ಬೈಕ್ ಗಳನ್ನು ನೀಡಲಾಗಿದೆ. ಈ ವಾಹನಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಿದ್ದು, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ನಿಂತಿವೆ. ಪ್ರಸ್ತುತ ದಿನಗಳಲ್ಲಿ ರಾತ್ರಿ ವೇಳೆ ಸಂಚರಿಸಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಇದೀಗ ಮಹಿಳೆಯರ ರಕ್ಷಣೆಗೆ ನಿಂತಿರುವ ನಿರ್ಭಯ ವಾಹನಗಳು ರಸ್ತೆಗಿಳಿದಿದ್ದು, ನಿರ್ಭಯವಾಗಿ ಮಹಿಳೆಯರು ರಾತ್ರಿ ವೇಳೆ ಸಂಚರಿಸಬಹುದಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಎಸ್.ಪಿ. ಮಹಾಲಿಂಗ ನಂದಗಾವಿ, ಡಿವೈ.ಎಸ್.ಪಿ. ಪಾಂಡುರಂಗಪ್ಪ ಚಳ್ಳಕೆರೆಯ ಶ್ರೀಧರ್, ಬಾಲಚಂದ್ರನಾಯಕ್, ರುದ್ರೇಶ್, ಲಕ್ಷ್ಮೀಕಾಂತ್, ಪ್ರಕಾಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published.