ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಹಿಳಾ ಪೊಲೀಸರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಹಮ್ಮಿಕೊಂಡ ಜಾಗೃತಿ ಕಾರ್ಯಾಗಾರವ ನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ರಾಧಿಕಾ ಐಪಿಎಸ್ ಇದರ ಅಧ್ಯಕ್ಷತೆ ವಹಿಸಿ ದಿನಾಂಕ 12 ಜನವರಿ 21 ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮತ್ತು ಮಿನಿಸ್ಟರ್ ಸ್ಟಾಪ್ ಹಾಗೂ ಹೋಂಗಾರ್ಡ್ ಮಹಿಳೆಯರಿಗೂ ಕೂಡ ಆರೋಗ್ಯ ಮಹಿಳೆಯರ ಕುಂದು ಕೊರತೆ ಹಾಗೂ ಒತ್ತಡ ನಿರ್ವಹಣೆ ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯದ ಮಾಹಿತಿ ಅದಲ್ಲದೆ ಕೋವಿಡ್ ಸಂಬಂಧ ಮೋಟಿವೇಶನ್ ಹಲವಾರು ವಿಷಯಗಳ ಬಗ್ಗೆ ಮಹಿಳೆಯರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಜಾಗೃತಿ ಮೂಡಿಸಿದರು. ಜಿಲ್ಲೆಯ ಪೊಲೀಸ್ ಮಹಿಳೆಯರು ಭಾಗವಹಿಸಿದ್ದರು,

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಮತಿ ಮನಗೂಳಿ ಹೇಮಾವತಿ ಮಲ್ಲಿಕಾರ್ಜುನ್ ಹಾಗೂ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಮಣ್ಣಿಕೇರಿ ರವರು ಹಾಗೂ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಡಾಕ್ಟರ್ ಕೆ ನಂದಿನಿ ಭಾಗವಹಿಸಿದ್ದರು