ಚಿತ್ರದುರ್ಗ ಜಿಲ್ಲಾ ಪೋಲಿಸ್ ರಸ್ತೆ ಸುರಕ್ಷತಾ ಕ್ಯಾಲೆಂಡರ್ 2021 ಬಿಡುಗಡೆ

ಚಿತ್ರದುರ್ಗ, ನಿತ್ಯವಾಣಿ, ಮಾ 15- ಜಿಲ್ಲಾ ರಕ್ಷಣಾಧಿಕಾರಿಗಳಾದ ಜಿ ರಾಧಿಕಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಚಿತ್ರದುರ್ಗ ಜಿಲ್ಲೆ ರಸ್ತೆ ಸುರಕ್ಷತಾ ಕ್ಯಾಲೆಂಡರ್ ಮತ್ತು ಆಡಿಯೋ ವಿಡಿಯೋದಲ್ಲಿ  ಬರುವಂತಹ ನಿಯಮಗಳನ್ನು  ಪಾಲಿಸಿಕೊಂಡು ಹೋಗಬೇಕು ನಮ್ಮ ದೇಶದಲ್ಲಿ ವಾರ್ಷಿಕ ನಾಲ್ಕುವರೆ ಲಕ್ಷ  ಆಕ್ಸಿಡೆಂಟ್ ಆಗುತ್ತವೆ ಅದರಲ್ಲಿ ಒಂದುವರೆ ಲಕ್ಷ ಸಾವು ಅನುಭವಿಸುತ್ತವೆ, ಕರ್ನಾಟಕ ರಾಜ್ಯದಲ್ಲಿ 40000 ಸಾವಿರ ಆಕ್ಸಿಡೆಂಟ್ಗಳು ನಡೆಯುತ್ತಿದ್ದು  10000 ಸಾವಿರ ಸಾವುಗಳು ಆಗುತ್ತಿವೆ ಅದೇ ತರಹ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿದಿನ ಒಂದು ಸಾವು ಏಳು ಅಥವಾ ಎಂಟು ಜನರಿಗೆ ಗಾಯಗಳಾಗುತ್ತವೆ, ಆದ್ದರಿಂದ ಸೇಫ್ಟಿ ಮ್ಯಾನೇಜ್ ಮಾಡುವುದಕ್ಕೆ ನಾವು ಕೈಗೊಂಡಿರುವ ಪ್ರಯತ್ನದಿಂದ ಕಡಿಮೆಯಾಗುತ್ತದೆ, ಕ್ಯಾಲೆಂಡರ್ ಮತ್ತು ಆಡಿಯೋ ವಿಡಿಯೋ ತಯಾರಿಸಿದ ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ ಚಳ್ಳಕೆರೆ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಇವರಿಗೆ ಕೀರ್ತಿ ಸಲ್ಲಿಸುತ್ತದೆ,

 ಇನ್ನೂ ಹೆಚ್ಚಿನ ರೀತಿಯಲ್ಲಿ  ನಮ್ಮ ಜೊತೆಗೆ ಕೆಲವು ಇಲಾಖೆಗಳಾದ ಆರ್ ಟಿ ಓ,  ಕೆಎಸ್ಆರ್ಟಿಸಿ, ಪಿಡಬ್ಲ್ಯೂಡಿ, ಆರೋಗ್ಯ ಇಲಾಖೆ, ಫಾರೆಸ್ಟ್ ಇಲಾಖೆ, ಶಿಕ್ಷಣ ಇಲಾಖೆ ಗಳು ನಮ್ಮ ಪೊಲೀಸ್ ಇಲಾಖೆ ಜೊತೆಯಲ್ಲಿ ಕೈಜೋಡಿಸಬೇಕು, ಪೋಲೀಸ್ ಅವರಿಂದಲೇ ಅಲ್ಲಾ ಎಲ್ಲರೂ ನಮ್ಮ ಜೊತೆ ಗೂಡಿ ಜನತೆಗೆ ರಸ್ತೆ ಸುರಕ್ಷತಾ ಅಂಶಗಳನ್ನು ತಿಳಿಸಬೇಕು ಎಂದು ಮಾತನಾಡಿದರು, ಪೊಲೀಸ್ ಇಲಾಖೆಯ ದಿನೇಶ್ ಪ್ರಾರ್ಥನೆಯನ್ನು ಸಲ್ಲಿಸಿದರು, ಡಿವೈಎಸ್ಪಿ ಶ್ರೀಧರ್ ಸ್ವಾಗತವನ್ನು ಕೋರಿದರು, ಡಿವೈಎಸ್ಪಿ ತಿಪ್ಪೇಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಇದೇ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ನಂದಗಾವಿ, ಕೆಎಸ್ಆರ್ಟಿಸಿ ಡಿಸಿ ವಿಜಯ್ ಕುಮಾರ್, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತೀಶ್ ಬಾಬು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರವಿಶಂಕರ್ ರೆಡ್ಡಿ, ಡಿವೈಎಸ್ಪಿ ಪಾಂಡುರಂಗ ಹಾಗೂ ಜಮೀರ್ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಇಲಾಖೆಯ ಆಫೀಸರ್ಸ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published.