ಚಿತ್ರದುರ್ಗ, ನಿತ್ಯವಾಣಿ,ಏ.3 : ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಕ್ಕೆ ಸೇರಿದ ಶಾಂತಿವನದ ತೋಟದ ಜಮೀನಿನಲ್ಲಿ ಐದು ಆರು ತಿಂಗಳ ಹಿಂದೆ ಗಂಧದ ಮರಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು.


ಈ ಬಗ್ಗೆ ಬರಮಸಾಗರ ಪೊಲೀಸ್ ಠಾಣೆಯಲ್ಲಿ ಮೊ. ನಂ. 187/2020 ಕ ಲಂ. 379 ಏ. ಪಿ. ಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ, ಸದರಿ ಪ್ರಕರಣದಲ್ಲಿ ಮಾಲು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಜಿ. ರಾಧಿಕಾ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಎಮ್. ಬಿ ನಂದಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಪಾಂಡುರಂಗ ಪೊಲೀಸ್ ಉಪಾಧೀಕ್ಷಕರು ಚಿತ್ರದುರ್ಗ ಉಪವಿಭಾಗ, ಎಸ್. ಬಾಲಚಂದ್ರ ನಾಯಕ್, ಗ್ರಾಮಾಂತರ ವೃತ್ತ ನಿರೀಕ್ಷಕರು, ಮಾರ್ಗದರ್ಶನದಂತೆ ಭರಮಸಾಗರ ಪೊಲೀಸ್ ಠಾಣೆಯ ಪಿಎಸ್ಐ, ಟಿ ರಾಜು ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದು, ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ 2.4. 2021 ರಂದು ಪ್ರಕರಣ ಆರೋಪಿಗಳಾದ ಚಮನ್ ಸಾಬ್ ತಂದೆ ಇಮಾಂಸಾಬ್ 42 ವರ್ಷ ಚದುರಗೊಳ್ಳ ಗ್ರಾಮ, ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಭರಮಸಾಗರ ಚಿತ್ರದುರ್ಗ ತಾಲ್ಲೂಕು , ನವೀದ್ ಅಹಮದ್ ಖಾನ್ ಮುನ್ನ ತಂದೆ ನಜೀರ್ ಅಹ್ಮದ್ ಖಾನ್ ಸುಮಾರು 55 ವರ್ಷ ಗೌರಮ್ಮನಹಳ್ಳಿ ಗ್ರಾಮ ಚಿತ್ರದುರ್ಗ ತಾಲ್ಲೂಕು ಇವರುಗಳನ್ನು ಪತ್ತೆಮಾಡಿ ವಶಕ್ಕೆ ಪಡೆದು ಸದರಿ ಆರೋಪಿತ ರಿಂದ 1, 25000/ ರೂಪಾಯಿ ಬೆಲೆಯ 25 ಕೆಜಿ ತೂಕದ ಗಂಧದ ತುಂಡುಗಳನ್ನು ಜಪ್ತಿಮಾಡಿಕೊಂಡಿರುತ್ತಾರೆ, ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಂಡ ಅಧಿಕಾರಿ ಮತ್ತು ಸಿಬ್ಬಂದಿ ಅವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಜಿ ರಾಧಿಕಾ ರವರು ಶ್ಲಾಘಿಸಿರುತ್ತಾರೆ