ನಿತ್ಯವಾಣಿ,ಚಿತ್ರದುರ್ಗ, (ಏ.29 ) : ಚಿತ್ರದುರ್ಗ ಜಿಲ್ಲೆಯಲ್ಲಿ ಈ ಕೊರೊನಾ ಸಂಕ್ಷಷ್ಠ ಪರಿಸ್ಥಿತಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ರಾಧಿಕಾ ರವರು ಒಂದು ವಿನೂತನ ರೀತಿಯ ಹೊಸ ಐಡಿಯಾ ಮಾಡಿದ್ದಾರೆ ಏನ್ನಲಾಗಿದೆ.
ಚಿತ್ರದುರ್ಗ ಜಿಲ್ಲಾ ಪೆÇಲೀಸ್ ವತಿಯಿಂದ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ದಿನ ದಿನಪೂರ್ತಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಗಳಿಗಾಗಿ ಕೊರೊನಾ ಮಹಾಮಾರಿಯು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಡಿಮೆ ವೆಚ್ಚದಲ್ಲಿ ಸಿಬ್ಬಂದಿಗಳ ಅನುಕೂಲಕ್ಕಾಗಿ ಸ್ಟೀಮ್ ತೆಗೆದುಕೊಳ್ಳುವ ಉಪಕರಣವನ್ನು ನಗರದ ಡಿಎಆರ್ ಪೆÇಲೀಸ್ ಮೈದಾನದಲ್ಲಿ ಅಳವಡಿಸಲಾಗಿದೆ.
ಪ್ರತಿ ದಿನ ಪೊಲೀಸರು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳುವ ಮುಂಚಿತವಾಗಿ ನಗರದ ಡಿಎಆರ್ ಪೆÇಲೀಸ್ ಮೈದಾನದಲ್ಲಿ ಅಳವಡಿಸಲಾಗಿರುವ ಸ್ಟೀಮ್ ಯಂತ್ರದಿಂದ ಹೊರ ಬರುವ ಹಬೆಯನ್ನು ಸಲ್ಪಕಾಲ ತೆಗೆದುಕೊಂಡು ಆನಂತರ ಕರ್ತವ್ಯಕ್ಕೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸ್ ರಕ್ಷಣಾ ಧಿಕಾರಿಯ ಈ ವಿನೂತನ ಪ್ರಯೋಗ ಜಿಲ್ಲೆಯ ಜನರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.