ತಂತ್ರಜ್ಞಾನ ಹೆಚ್ಚಾದತ್ತಲ್ಲಾ ಅಪರಾಧ ಪ್ರಕರಣಗಳು ಸಹಾ ಜಾಸ್ತಿಯಾಗುತ್ತಿದೆ ಈ ಹಿನ್ನಲೆಯಲ್ಲಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಪೋಲಿಸ್ ಇಲಾಖೆ ಮಾಡುತ್ತಿದೆ : ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ರಾಧಿಕಾ

ತಂತ್ರಜ್ಞಾನ ಹೆಚ್ಚಾದತ್ತಲ್ಲಾ ಅಪರಾಧ ಪ್ರಕರಣಗಳು ಸಹಾ ಜಾಸ್ತಿಯಾಗುತ್ತಿದೆ ಈ ಹಿನ್ನಲೆಯಲ್ಲಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಪೋಲಿಸ್ ಇಲಾಖೆ ಮಾಡುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ರಾಧಿಕಾ ತಿಳಿಸಿದರು.
ಚಿತ್ರದುರ್ಗ ನಗರದ ಪೋಲಿಸ್ ಇಲಾಖೆಯ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜನ ಜಾಗೃತಿಗಾಗಿ ನಿರ್ಮಾಣ ಮಾಡಲಾದ ಆಡಿಯೋವನ್ನು ಬಿಡುಗಡೆ ಮಾಡಿ ಮಾತನಾಡಿ, ಹಿಂದೆಲ್ಲಾ ಸಾಮಾನ್ಯವಾದ ಅಪರಾಧಗಳು ಮಾತ್ರ ಇದ್ದವು ಆದರೆ ಇಂದು ಸಮಾಜ ಬೆಳದಂತೆ ತಂತ್ರಜ್ಞಾನವು ಸಹಾ ಬೆಳೆದಿದೆ ಅದರಂತೆ ಅದರ ಬಳಕೆ ಹೆಚ್ಚಾಗಿದೆ ಜನತೆ ತಮ್ಮ ದೈನಂದಿನ ಎಲ್ಲಾ ವಹಿವಾಟನ್ನು ಅದರಲ್ಲಿಯೇ ನಡೆಸುತ್ತಾರೆ. ಇದರ ಲಾಭವನ್ನು ಪಡೆದೆ ಕೆಲವರು ಜನತೆ ಮೋಸವನ್ನು ಮಾಡುವುದರ ಮೂಲಕ ಅಪರಾಧಗಳನ್ನು ಎಸುಗುತ್ತಿದ್ದಾರೆ ಎಂದರು.
ಅಪರಾಧಿಗಳು ಚಾಣಾಕ್ಷರಾಗಿದ್ದು ಗ್ರಾಹಕರು ಬಳಕೆ ಮಾಡುವ ವಿವಿಧ ರೀತಿಯ ಮಾಹಿತಿಯನ್ನು ಸಂಗ್ರಹ ಮಾಡುವುದರ ಮೂಲಕ ಅವರಿಗೆ ವಿವಿಧ ರೀತಿಯ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿ ನಂಬಿಕೆ ಬರುವಂತೆ ಮಾಡಿ ಜನತೆಯಿಂದ ಅವರ ಬ್ಯಾಂಕ್ ದಾಖಲಾತಿಗಳ ಮಾಹಿತಿಯನ್ನು ಪಡೆಯುವುದರ ಮೂಲಕ ಹಣವನ್ನು ಲಪಟಾಯಿಸುತ್ತಿದ್ದಾರೆ. ಈಗಾಗಲೇ ಇಂತಹ ಹಲವಾರು ಪ್ರಕರಣಗಳು ದಾಖಲಾಗಿವೆ, ಇದರ ಬಗ್ಗೆ ಜತೆಯಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯ ಇದೆ. ಈ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆಯವತಿಯಿಂದ ಮೂರುವರೆ ನಿಮಿಷದ ಆಡಿಯೋವನ್ನು ತಯಾರು ಮಾಡಿದ್ದು ಅದನ್ನು ನಗರಸಭೆಯ ಸಹಾಯದಲ್ಲಿ ಕಸದ ಗಾಡಿಗಳಲ್ಲಿ ಆಡಿಯೋವನ್ನು ಪ್ರಸಾರ ಮಾಡುವ ಮೂಲಕ ಪ್ರತಿ ದಿನ ಜನತೆಗೆ ಮುಟ್ಟಿಸುವ ಕಾರ್ಯವನ್ನು ಮಾಡಲಾಗುತ್ತದೆÉಂದರು.
ಜನತೆ ಈ ರೀತಿಯಾದ ಸೈಬರ್ ಕ್ರೈಂಗೆ ಒಳಗಾದರೆ ನಗರದ ಜೆಸಿಆರ್ ಬಡಾವಣೆಯಲ್ಲಿನ ಸೈಬರ್ ಪೋಲಿಸ್ ಠಾಣೆಗೆ ದೂರನ್ನು ನೀಡಬಹುದಾಗಿದೆ. ಇದರ ಜೊತೆಗೆ ಬ್ಯಾಂಕ್ ಎಟಿಎಂ ಕಳೆದರೆ ಅಥವಾ ಎಟಿಎಂ ಪಿನ್‍ಯಾದರೂ ಪಡೆದು ಹಣ ಪಡೆಯುತ್ತಿದ್ದರೆ, ಶೀಘ್ರವಾಗಿ ಅದರ ವಹಿವಾಟು ನಿಲ್ಲಿಸುವಂತೆ ಬ್ಯಾಂಕ್‍ಗೆ ಮನವಿ ಮಾಡಿ ಎಂದು ಎಸ್.ಪಿ.ರಾಧಿಕಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ನಂದಗಾವಿ, ಡಾ.ರವೀಂದ್ರ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮಣ್ಣ ಭಾಗವಹಿಸಿದ್ದರು. ಸೈಬರ್ ಕ್ರೈಂನ ಇನ್ಸ್‍ಪೆಕ್ಟರ್ ರಮಾಕಾಂತ ಸ್ವಾಗತಿಸಿದರೆ ಶಿವರಾಂ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published.