ನಿತ್ಯವಾಣಿ,ಚಿತ್ರದುರ್ಗ,(ಜ.6) : ರುಡ್‍ಸೆಟ್ ಸಂಸ್ಥೆಯು ಉದ್ಯಮಶೀಲತಾಭಿವೃದ್ಧಿ (ಇ.ಡಿ.ಪಿ.) – ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 23.11.2021 ರಿಂದ 06.01.2022 ರವರೆಗೆ 45 ದಿನಗಳ ಕಾಲ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮ ವನ್ನು ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಧಿಕಾ.ಜಿ, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಆಧುನಿಕತೆಯ ಹೆಸರಿನಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಕಂಪ್ಯೂಟರ್ ಹಾರ್ಡ್‍ವೇರ್ ಕ್ಷೇತ್ರವು ವಿಪುಲವಾದ ಉದ್ಯೋಗದ ಅವಕಾಶಗಳನ್ನು ಸೃಷ್ಠಿ ಮಾಡುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಹಾರ್ಡ್‍ವೇರ್ ಸರ್ವಿಸಿಂಗ್ ವೃತ್ತಿಯಲ್ಲಿ ನೈಪುಣೈಯುಳ್ಳ/ ಕೌಶಲ್ಯವುಳ್ಳವರಿಗೆ ಹೆಚ್ಚು ಬೇಡಿಕೆ ಇದೆ, ಆಗಾಗಿ ವೃತ್ತಿ ಬದುಕಿನಲ್ಲಿ ನೈಪುಣ್ಯತೆಯೊಂದಿಗೆ ಬದಲಾಗುತ್ತಿರುವ ತಾಂತ್ರಿಕತೆಯ ಅರಿವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಉದ್ಯಮವನ್ನು ನಡೆಸುವಾಗ ವ್ಯವಹಾರದಲ್ಲಿ ಏಳು-ಬೀಳುಗಳು ಕಾಣುವುದು ಸಹಜ, ಆದರೆ ಉದ್ಯಮಕ್ಕೆ ತೊಡಗಿಸಿರುವ ಮೂಲಬಂಡವಾಳಕ್ಕೆ ದಕ್ಕೆ ಬಾರದಂತೆ ಜಾಗ್ರತೆವಹಿಬೇಕು, ಲಾಭ/ ನಷ್ಟಗಳ ಬಗ್ಗೆಯೋಚಿಸಬೇಕು, ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಿಕೊಂಡು ಸಾಮಥ್ರ್ಯಕ್ಕೆ ತಕ್ಕ ಕೆಲಸದ ಒಪ್ಪಂದಗಳನ್ನು ಮಾಡಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಂದ್ರಯ್ಯ ಬಿ. ಹಿರೇಮಠ್ ಮಾತನಾಡಿ ತರಬೇತಿ ಅವಧಿಯಲ್ಲಿ ಕಲಿತ ಜ್ಞಾನ/ತಿಳುವಳಿಕೆ ಕೌಶಲ್ಯವನ್ನು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ, ಅಂತೆಯೇ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನ ಸಾಧಿಸಿ ಸಮೃದ್ಧ ಜೀವನ ನಡೆಸುವಂತವರಾಗಿರಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಮಂಜುಳಾ ಜಿ.ರವರು ಚಿತ್ರದುರ್ಗ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಂದಿರುವ ಅತಿಥಿಗಳನ್ನ & ಎಲ್ಲರನ್ನೂ ರುಡ್‍ಸೆಟ್ ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಗಾಣಿಗೇರ ರವರು ಸ್ವಾಗತ ಕೋರಿದರು.
ಸಂಸ್ಥೆಯ ಉಪನ್ಯಾಸಕರಾದ ಲತಾಮಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು & ಕೊನೆಯಲ್ಲಿ ವಂದಿಸಿದರು. ಮತ್ತು ಪ್ರಾರ್ಥನೆಯನ್ನು ಕಮಾರಿ. ಹಾಸಿನಿ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ 32 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.