FLASH NEWS : ಚಿತ್ರದುರ್ಗದಲ್ಲಿ  ಕೆಲವು ಖಾಸಗಿ ಕಾಲೇಜುಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ,,

ನಿತ್ಯ ವಾಣಿ , ಚಿತ್ರದುರ್ಗ, (ಮೇ. 26) :  ಚಿತ್ರದುರ್ಗ ನಗರದಲ್ಲಿ ಕೆಲವು ಖಾಸಗಿ ಕಾಲೇಜುಗಳ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ, ಕಾರಣ ಎಸ್ ಎಸ್ ಎಲ್ ಸಿ    ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಗೊಂದಲವಿದೆ, ಇನ್ನೂ  ಆನ್ಲೈನ್ ಕ್ಲಾಸಸ್ ನಡೆಯುತ್ತಿರುವಾಗಲೇ ಕೆಲವು ಕಾಲೇಜುಗಳಿಂದ ಪೋಷಕರಿಗೆ ದೂರವಾಣಿ ಕರೆ ಮಾಡಿ ಮೊದಲನೇ  ಪಿಯುಸಿ ಆನ್ಲೈನ್ ಕ್ಲಾಸ್ ಪ್ರಾರಂಭವಾಗಿದೆ ಬೇಗ ಅಡ್ಮಿಶನ್ ಮಾಡಿಸಿ ಎಂದು ಕರೆಗಳು ಬರುತ್ತಿವೆ ಎಂದು ವಿದ್ಯಾರ್ಥಿಗಳ ಪೋಷಕರು ನಮ್ಮ ನಿತ್ಯವಾಣಿ ಗೆ ಕರೆ ಮಾಡಿ ಅಳಲನ್ನು ತೋಡಿಕೊಂಡಿದ್ದಾರೆ,  ಇದನ್ನು ತಿಳಿದ ನಮ್ಮ ಪತ್ರಿಕೆ ದೂರವಾಣಿಯ ಮೂಲಕ ಚಿತ್ರದುರ್ಗ ಜಿಲ್ಲೆ ಡಿಡಿಪಿಯು ಉಪನಿರ್ದೇಶಕರನ್ನು ಸಂಪರ್ಕಿಸಿ ಇದರ ಮಾಹಿತಿಯನ್ನು ತಿಳಿಸಿದಾಗ ಈ ಸಮಯದಲ್ಲಿ ಕಾಲೇಜ್ ಯಾವುದೇ ಕಾರಣಕ್ಕೂ ಪ್ರಾರಂಭವಾಗುವುದು ಸರ್ಕಾರದ ಆದೇಶ ಇಲ್ಲ ಈ ತಕ್ಷಣವೇ ಎಲ್ಲಾ ಕಾಲೇಜುಗಳಿಗೆ ನೋಟಿಸನ್ನು ಕೊಟ್ಟು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಉತ್ತಮ ಪ್ರತಿಕ್ರಿಯೆ ನೀಡಿದರು,

ಕರ್ನಾಟಕ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ರವರೇ ನಿಮ್ಮ ಗಮನಕ್ಕೆ ನಮ್ಮ ಪತ್ರಿಕೆ ತರುತ್ತಿದೆ ಗೊಂದಲಕ್ಕೆ ಸೃಷ್ಟಿ ಮಾಡುತ್ತಿರುವ ಕಾಲೇಜುಗಳ ಲೈಸೆನ್ಸ್ ಗಳನ್ನು ತೆಗೆದುಹಾಕಿ ಇಲ್ಲದಿದ್ದರೆ ರಾಜ್ಯಾದ್ಯಂತ ಮುಂದೆ ನಡೆಯುವ ಎಸ್ ಎಸ್  ಎಲ್ ಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣರಾಗುತ್ತೀರಿ ಇದಕ್ಕೆ ತೆರೆ ಹೆಳೆಯಿರಿ ಎಂದು ನಮ್ಮ ನಿತ್ಯವಾಣಿ ಪತ್ರಿಕೆ ಎಚ್ಚರಿಸಿದೆ

Leave a Reply

Your email address will not be published.