ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‍ಪ್ರೆಸ್ ರೈಲು ಸಂಚಾರ

 

ಚಿತ್ರದುರ್ಗ,ನಿತ್ಯವಾಣಿ, ಏಪ್ರಿಲ್ 06 : ನೈಋತ್ಯ ರೈಲ್ವೆ ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‍ಪ್ರೆಸ್ ರೈಲನ್ನು ಓಡಿಸಲಿದೆ. ಚಿಕ್ಕಜಾಜೂರು ಮೂಲಕ ಸಾಗುವ ರೈಲು ಏಪ್ರಿಲ್ 10ರಿಂದ ಸಂಚಾರವನ್ನು ಆರಂಭಿಸಲಿದೆ.

ಪತ್ರಿಕಾ ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‍ಪ್ರೆಸ್ ರೈಲಿನ ಸಂಚಾರದ ಬಗ್ಗೆ ಮಾಹಿತಿ ನೀಡಿದೆ. ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಈ ರೈಲು ಸಂಚಾರ ನಡೆಸಲಿದ್ದು, ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ರೈಲು ನಂಬರ್ 07347/07348 ರೈಲಯಗಳು ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ವಯಾ ಚಿಕ್ಕಜಾಜೂರು ನಡುವೆ ಸಂಚಾರ ನಡೆಸಲಿವೆ. ಈ ರೈಲು 12 ಬೋಗಿಗಳನ್ನು ಒಳಗೊಂಡಿದೆ.

ರೈಲಿನ ವೇಳಾಪಟ್ಟಿ ; ರೈಲು ನಂಬರ್ 07347 ಹುಬ್ಬಳ್ಳಿ-ಚಿತ್ರುದುರ್ಗ ಪ್ರತಿದಿನ ಹುಬ್ಬಳ್ಳಿಯಿಂದ 7.15ಕ್ಕೆ ಹೊರಡಲಿದ್ದು, ಚಿತ್ರದುರ್ಗಕ್ಕೆ 13.35ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಸಂಚಾರ ನಡೆಸಲಿದೆ.

ರೈಲು ನಂಬರ್ 07348 ಚಿತ್ರದುರ್ಗ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ. ಚಿತ್ರದುರ್ಗದಿಂದ 14 ಗಂಟೆಗೆ ಹೊರಡಲಿರುವ ರೈಲು ಹುಬ್ಬಳ್ಳಿ ನಿಲ್ದಾಣವನ್ನು 21:30ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published.