ನಿತ್ಯವಾಣಿ, ಚಿತ್ರದುರ್ಗ,(ಡಿ.23) : ಚಿತ್ರದುರ್ಗ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಬೆಳಗಾವಿ ಜಿಲ್ಲೆ ಖಾನಾಪುರ ಹಲಸಿ ಯಲ್ಲಿ ಎಂ ಇ ಎಸ್ ಹಾಗೂ ಶಿವ ಸೇನೆ ಪುಂಡರ ಗಳು ಸಮಾ ಸಮಾಜದ ನಿರ್ಮಾಣದ ಕನಸುಗಾರ, ಮಹಾ ಮಾನತ ವಾದಿ, ಸಮಾಜ ಸುಧಾರಕ,
ವಿಶ್ವಕ್ಕೆ ಜನತಂತ್ರ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿದ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳೆದ ಅವಮಾನಿಸಿದವರನ್ನು ಶಿಕ್ಷೆಯನ್ನು ವಿಧಿಸಿ ಗಡಿಪಾರು ಮಾಡಬೇಕೆಂದು ವೀರಶೈವ ಮಹಾಸಭೆಯ ಜಿಲ್ಲಾಘಟಕ, ಚಿತ್ರದುರ್ಗತಾಲೂಕು ಘಟಕ,
ಚಿತ್ರದುರ್ಗ ನಗರ ಘಟಕ ಇದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು, ಜಿಲ್ಲಾ ಮಹಾಸಭಾದ ಘಟಕದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ ಮಾತನಾಡುತ್ತಾ ಧಾರ್ಮಿಕ ಗುರುಗಳು, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕ ಹಾಗೂ ಇತರೆ ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಅವಮಾನಿಸುತ್ತಿರುವ ಘಟನೆಗಳು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿವೆ ಎಂದರೆ ತಪ್ಪಾಗಲಾರದು,
ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇವೆ. ಇಂತಹ ಹೀನ ಕೃತ್ಯ ಎಸಗಿದವರಿಗೆ ಒಂದು ವಾರದೊಳಗೆ ಬಂದಿಸಿ, ಕಾನೂನು ಶಿಕ್ಷೆಗೆ ಒಳಪಡಿಸಬೇಕು ಇಲ್ಲದಿದ್ದರೆ ಮಹಾ ಸಭೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು,
ಈ ಸಂದರ್ಭದಲ್ಲಿ ಹಿರಿಯ ವೀರಶೈವ ಮುಖಂಡರಾದ ಕೆಇಬಿ ಷಣ್ಮುಖಪ್ಪ,ಉಪಾಧ್ಯಕ್ಷ ಎಸ್ ವೀರೇಶ್,ಪ್ರಧಾನ ಕಾರ್ಯದರ್ಶಿ ಜಿ ಎನ್ ಮಹೇಶ್, ಕೋಶಾಧ್ಯಕ್ಷ ಪಿಎಂ ದಿವಾಕರ ಸಂಕೋಳ್, ನಿರ್ದೇಶಕರುಗಳಾದ ಬಿ ಎಸ್ ಮಂಜುನಾಥಸ್ವಾಮಿ, ಎಂ ಶಶಿಧರ್, ಚಿತ್ರದುರ್ಗ ತಾಲೂಕು ಘಟಕ ಅಧ್ಯಕ್ಷ ರುದ್ರೇಶ್ ಐಗಾಳ್, ಉಪಾಧ್ಯಕ್ಷ ಸಿದ್ದಪ್ಪ ಪಿಎಂ, ಸುರೇಶ್, ಚಿತ್ರದುರ್ಗ ನಗರ ಘಟಕದ ಅಧ್ಯಕ್ಷ ಆನಂದ್, ತಿಪ್ಪಣ್ಣ, ಶಂಕರ್, ವಿಶ್ವನಾಥ್, ಮುಖಂಡ ಜಿತೇಂದ್ರ ಹುಲಿಕುಂಟೆ,ಯುವ ಘಟಕದ ಅಧ್ಯಕ್ಷ ಕಾರ್ತಿಕ್,ಪ್ರಶಾಂತ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.