ನವದೆಹಲಿ: ಈ ಸಭೆ ನನಗಂತೂ ಅತ್ಯಂತ ಸಂತೋಷ, ಸಮಾಧಾನ, ತೃಪ್ತಿ ತಂದಿದೆ. ರಾಷ್ಟ್ರ ನಾಯಕರ ಜೊತೆಗಿನ ಸಭೆ ಸಂತೋಷ ತಂದುಕೊಟ್ಟಿದೆ ಎಂದು ದಿಢೀರ್ ದೆಹಲಿ ಪ್ರವಾಸ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಆದಷ್ಟು ಬೇಗ ಗುಡ್ ನ್ಯೂಸ್ ಕೊಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಸಿಎಂ, ರಾಷ್ಟ್ರ ನಾಯಕರು ಶುಭ ಸುದ್ದಿ ಕೊಡುವ ವಿಶ್ವಾಸವಿದೆ ಎಂದರು. ಇನ್ನು ರಾಷ್ಟ್ರ ನಾಯಕರ ಭೇಟಿ ಬಳಿಕ ನಾನು ಅಕ್ಷರಶಃ ಸಹ ಸಂತೋಷವಾಗಿದ್ದೇನೆ ಎಂದು ಹೇಳಿದರು.
ಇನ್ನು ನಾನೀಗಾ ಅಮಿತ್ ಶಾ, ನಡ್ಡಾ, ಅರುಣ್ ಕುಮಾರ್ ಜೊತೆ ಚರ್ಚೆ ಮಾಡಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮಾಹಿತಿ ನೀಡಿದ್ದೇನೆ. ಚುನಾವಣೆ ಫಲಿತಾಂಶದ ಅಂಕಿ-ಅಂಶ ಅವರಿಗೆ ಖುಷಿ ನೀಡಿದೆ. ಉಪಚುನಾವಣೆ ಸಂಬಂಧವೂ ಚರ್ಚೆಯಾಗಿದ್ದು, 3 ಸ್ಥಾನಗಳಲ್ಲೂ ಗೆಲ್ಲಲೇಬೇಕೆಂದು ಸೂಚಿಸಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಕಳಿಸಿ, ಆದಷ್ಟು ಬೇಗ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ ಎಂದರು ಸಿಎಂ.