​ಸಿಎಂ ಅಧಿಕೃತ ನಿವಾಸಕ್ಕೆ ಸಚಿವಾಕಾಂಕ್ಷಿಗಳ ಭೇಟಿ

ಬೆಂಗಳೂರು : ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು , 7 ರಿಂದ 8 ಜನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ನಾಳೆ ಮಧ್ಯಾಹ್ನ 3.50ಕ್ಕೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯ ನಡೆಯಲಿದೆ. ನಾಳೆ ಬೆಳಗ್ಗೆ ಅಥವಾ ಇಂದು ರಾತ್ರಿ ಅವರು ನೂತನ ಸಚಿವ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನಲೆ ನೂತನ ಸಚಿವರಾಗಲಿರುವ ಶಾಸಕರಿಗೆ ಮುಖ್ಯಮಂತ್ರಿಗಳೇ ಕರೆ ಮಾಡಿ ಆಹ್ವಾನ ನೀಡುತ್ತಿದ್ದಾರೆ.

ಸದ್ಯ ಸಿಎಂ ಬಿಎಸ್​ ಯಡಿಯೂರಪ್ಪ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವಾಕಾಂಕ್ಷಿಗಳಾದ ಸಿಪಿ ಯೋಗೇಶ್ವರ್​, ಮುನಿರತ್ನ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಮಧ್ಯಾಹ್ನ ಸಿಎಂ ಅವರನ್ನು ಭೇಟಿಯಾಗಿದ್ದ ಮುನಿರತ್ನ, ಸಿಪಿಯೋಗೇಶ್ವರ್​ ಬಂದು ಹೋದ ಬಳಿಕ ಮತ್ತೊಮ್ಮೆ ಭೇಟಿ ಯಾಗಿ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಸಿಪಿ ಯೋಗೇಶ್ವರ್​ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಈ ಹಿನ್ನಲೆ ಮುನಿರತ್ನ ಕೊನೆ ಕ್ಷಣದ ಲಾಬಿಗೆ ಮುಂದಾಗಿದ್ದಾರೆ. ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಸುಳ್ಯ ಶಾಸಕ ಅಂಗಾರ, ಉಮೇಶ್ ಕತ್ತಿ ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಒಂದು ಸ್ಥಾನಕ್ಕಾಗಿ ಮುನಿರತ್ನ ಮತ್ತು ಸಿ ಪಿ ಯೋಗಿಶ್ವರ್ ನಡುವೆ ಪೈಪೋಟಿ ನಡೆಸಿದ್ದಾರೆ.

Leave a Reply

Your email address will not be published.