ಗಾಳಿಯ ಮೂಲಕವೇ ಹೆಚ್ಚಾಗಿ ಹರಡಲಿದೆ ಕೊರೊನಾ ಸೋಂಕು, ವಿಜ್ಞಾನಿಗಳ ಎಚ್ಚರಿಕೆ

ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆತಂಕಕಾರಿ ಸಂಶೋಧನಾ ವರದಿಯೊಂದು ಹೊರಬಿದ್ದಿದೆ.

ಅಮೆರಿಕ, ಕೆನಡಾ, ಲಂಡನ್ ಹಾಗೂ ಇತರೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಲ್ಯಾನ್ಸೆಟ್ ಜರ್ನಲ್‌ನಲ್ಲಿ ನೀಡಿರುವ ಸಂಶೋಧನಾ ವರದಿ ಪ್ರಕಾರ ಕೋವಿಡ್ 19 ವೈರಸ್ ಗಾಳಿಯಲ್ಲಿಯೂ ಹರಡಲಿದೆ ಎಂದು ತಿಳಿದುಬಂದಿದೆ.

ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಎಲ್ಲಾ ಸರ್ಕಾರಗಳು ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟಲು ಹೊಸದಾದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ವರದಿಯಲ್ಲಿ ತಜ್ಞರು ಎಚ್ಚರಿಸಿದ್ದಾರೆ.

ಸಧ್ಯಕ್ಕೆ ಕೊರೊನಾವೈರಸ್ ಗಾಳಿಯಿಂದ ಹರಡುವುದಿಲ್ಲ, ಬದಲಾಗಿ ವ್ಯಕ್ತಿಯಿಂದ ವ್ಯಕ್ತಿಗೆ, ಕೊರೊನಾ ಸೋಂಕಿತರ ಸ್ಪರ್ಶ, ಕೊರೊನಾ ಸೋಂಕಿತರು ಸ್ಪರ್ಶಿಸಿದ ವಸ್ತುಗಳಿಂದ ಇನ್ನೊಬ್ಬರಿಗೆ ಹರಡಲಿದೆ ಎಂದು ಹೇಳಲಾಗಿತ್ತು.

ಈ ಪ್ರಕಾರವೇ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಎಲ್ಲಾ ಸರ್ಕಾರಗಳು ಮಾರ್ಗಸೂಚಿಗಳನ್ನು ರೂಪಿಸಿಕೊಂಡಿದ್ದವು. ಆದರೆ ಈ ಸಂಶೋಧನಾ ವರದಿಯ ಪ್ರಕಾರ ಗಾಲಿಯಲ್ಲೇ ಇದು ಹೆಚ್ಚಾಗಿ ಹಬ್ಬುತ್ತಿದ್ದು, ಈ ಕಾರಣದಿಂದಲೇ ಕೊರೊನಾ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಸಂಶೋಧನಾ ವರದಿಯಲ್ಲಿ ಒಟ್ಟು ಹತ್ತು ವಿವಿಧ ಆಯಾಮ ಜತೆಗೆ ಉದಾಹರಣೆಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ನೀಡಲಾಗಿದೆ.

ವಿಜ್ಞಾನಿಗಳು ಹೇಳಿರುವಂತೆ

  • ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು, ಆ ವ್ಯಕ್ತಿಯು ಯಾವುದೇ ರೀತಿಯಲ್ಲಿ ಸಂಪರ್ಕಿಸದಿದ್ದರೂ ಕೇವಲ ಗಾಳಿಯಿಂದ 53 ಮಂದಿಗೆ ರೋಗ ಹರಡಿರುವುದು ತಿಳಿದುಬಂದಿದೆ.
  • ಹೋಟೆಲ್‌ ಒಂದರ ಅಕ್ಕಪಕ್ಕದ ರೂಂಗಳಲ್ಲಿ ತಂಗಿದ್ದು, ಇಬ್ಬರು ದೈಹಿಕವಾಗಿ ಅಥವಾ ಭೌತಿಕವಾಗಿ ಯಾವುದೇ ರೀತಿಯ ಸಂಬಂಧವಿಲ್ಲದೇ ಇದ್ದರೂ ಇನ್ನೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
  • ಈ ಹಿನ್ನೆಲೆಯಲ್ಲಿ ಈ ಹಿಂದೆ ನಂಬಿದಂತೆ ಹೊರಾಂಗಣದಲ್ಲಿ ಕೊರೊನಾ ಸೋಂಕು ಅಷ್ಟಾಗಿ ಹಬ್ಬುವುದಿಲ್ಲ ಒಳಾಂಗಣದಲ್ಲಿ ಹೆಚ್ಚಾಗಿ ಹಬ್ಬಲಿದೆ ಎನ್ನುವುದು ಈ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ. ಒಳಾಂಗಣಕ್ಕಿಂತ ಹೊರಾಂಗಣದಲ್ಲಿಯೇ ಹೆಚ್ಚು ವೇಗವಾಗಿ ಕೊರೊನಾ ಸೋಂಕು ಹರಡಲಿದೆ ಎನ್ನುವುದು ಈ ವರದಿಯ ಸಾರಾಂಶವಾಗಿದೆ.
  • ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಗಳು ಗಾಳಿ ಮೂಲಕ ಕೊರೊನಾ ತಡೆಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದಕ್ಕಾಗಿ ಸಾರ್ವಜನಿಕರು ಕಡ್ಡಾಯವಾಗಿ, ಮಾಸ್ಕ್‌ಗಳನ್ನು ಧರಿಸಬೇಕು, ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ತಯಾರಿಸಬೇಕಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಈ ನಿಟ್ಟಿನಲ್ಲಿ ತನ್ನ ಹೊಸ ಆರೋಗ್ಯ ಸೂಚಿಯನ್ನು ಕೂಡಲೇ ಪ್ರಕಟಿಸಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
  • 2020ರ ಮಾರ್ಚ್ 17 ರಂದು ವಾಷಿಂಗ್ಟನ್‌ನ ಸಾಮೂಹಿಕ ಗಾಯನ ಅಭ್ಯಾಸ ನಡೆದಿತ್ತು, ಈ ಕಾರ್ಯಕ್ರಮದಲ್ಲಿ 220 ಮಂದಿಗೆ ಅನಾರೋಗ್ಯ ಕಂಡುಬಂದಿತ್ತು, ಆದರೆ ಕೊರೊನಾ ಹಬ್ಬಿದ್ದು ಪರಸ್ಪರ ಸಂಪರ್ಕದಿಂದಲ್ಲ ಬದಲಾಗಿ ಗಾಳಿಯ ಮೂಲಕ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ.

Leave a Reply

Your email address will not be published.