ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೋವಿಡ್ ಕೇರ್ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದ್ದು, ಸದರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ ಅಭ್ಯಥಿರ್ಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 1061
ಜಿಲ್ಲಾ ಸದರಿ ಆಸ್ಪತ್ರೆಗಳಲ್ಲಿ
ಹುದ್ದೆ — ಸಂಖ್ಯೆ — ವೇತನ
* ಫಿಜಿಷಿಯನ್ — 21 — 2,50,000
* ಅನಸ್ತೇಷಿಯಸ್ಟ್ — 16 — 2,50,000
* ಒಬಿಜಿ — 1 2,50,000
* ಸ್ಪೆಷಲಿಸ್ಟ್ (ಮೆಡಿಸನ್/ ಅನಸ್ತೇಷಿಯಾ/ ರೆಸ್ಪಿರೇಟರಿ ಮೆಡಿಸನ್/ ಇಎನ್ಟಿ) — 20 — 2,50,000
* ಫಿಜಿಕ್ಸ್ ಥೆರಫಿಸ್ಟ್ — 6 — 30,000
* ಸ್ಟಾಫ್ ನರ್ಸ್ — 146 — 25,000
* ಲ್ಯಾಬ್ ಟೆಕ್ನಿಷಿಯನ್ಸ್ — 30 — 20,000
* ಫಾರ್ಮಸಿಸ್ಟ್ — 12 — 20,000
* ಎಕ್ಸ್ರೇ ಟೆಕ್ನಿಷಿಯನ್ಸ್ — 13 — 20,000
* ಗ್ರೂಪ್ ಡಿ — 141 — 15,000
* ಡ್ರೈವರ್ — 4 — 15,000
ಜಿಂದಾಲ್ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ
* ಫಿಜಿಷಿಯನ್/ಅನಸ್ತೇಷಿಯಾಲಾಜಿಸ್ಟ್/ ಇನ್ಟೆನ್ಸಿವಿಸಿಟ್ಸ್ (ಸ್ಪೆಷಲಿಸ್ಟ್) — 31 — 2,50,000
* ಡಾಕ್ಟರ್ಸ್ — 75 — 50,000 —
* ನರ್ಸ್ — 155 — 20,000+5,000 ಇನ್ಸೆಂಟೀವ್ಸ್
* ನಸಿರ್ಂಗ್ ಸೂಪರ್ವೈಸರ್ — 19 — 25,000
* ರೇಡಿಯಾಲಜಿ ಟೆಕ್ನಿಷಿಯನ್ — 12 — 25,000
* ಫಿಜಿಯೋಥೆರಪಿಸ್ಟ್ — 12 — 25,000+5000 ಇನ್ಸೆಂಟೀವ್ಸ್
* ಲ್ಯಾಬ್ ಟೆಕ್ನಿಷಿಯನ್ — 12 — 22,000
* ಗ್ರೂಪ್ ಡಿ — 300 — 15,000+3,000 ಇನ್ಸೆಂಟೀವ್ಸ್
* ಫಾರ್ಮಸಿಸ್ಟ್ — 6 — 22,000
* ಸ್ಟೋರ್ ಕೀಪರ್ಸ್ — 4 — 20,000
* ಸೈಕಾಲಜಿಕಲ್ ಕೌನ್ಸಿಲರ್ — 6 — 25,000
* ಬಯೋಮೆಡಿಕಲ್ ಇಂಜಿನಿಯರ್ಸ್ — 5 — 22,000
* ಡಯೆಟೀಷಿಯನ್ — 5 — 20,000
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯಥಿರ್ಗಳು ಸಂದರ್ಶನಕ್ಕೆ ಹಾಜರಾಗಬಹುದು.
ಎಲ್ಲೆಲ್ಲಿ ಉದ್ಯೋಗಾವಕಾಶ?
ಬಳ್ಳಾರಿ, ಹಡಗಲಿ, ಹೊಸಪೇಟೆ, ಎಚ್ಪಿ ಹಳ್ಳಿ, ಕೂಡ್ಲಿಗಿ, ಸಿರಗುಪ್ಪ, ಸಂಡೂರು, ಎಚ್ಬಿ ಹಳ್ಳಿ, ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಗುತ್ತಿಗೆ ಅವಧಿಯು 3 ತಿಂಗಳದ್ದಾಗಿದ್ದು, ಇನ್ನೂ 3 ತಿಂಗಳು ವಿಸ್ತರಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಬಳ್ಳಾರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಊಟ, ವಸತಿ ವ್ಯವಸ್ಥೆ: ಜಿಂದಾಲ್ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಊಟ ಮತ್ತು ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪರಿಗಣಿಸಲಾಗುವುದು.
ಸಂದರ್ಶನ ನಡೆಯುವ ದಿನಾಂಕ: 4.5.2021ರಿಂದ ಆರಂಭವಾಗಿದ್ದು, 11.5.2021ರ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳ: ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ನಡೆಸಲಾಗುವುದು.
ಅಧಿಸೂಚನೆಗೆ: https://bit.ly/3nOyeHb ಮಾಹಿತಿಗೆ: (080) 392277100