ಆರ್.ಡಿ.ಪಿ.ಅರ್ ಇಲಾಖೆಯ ಸರ್ಕಾರಿ ನೌಕರರು ಆತ್ಮಸ್ಥೈರ್ಯದಿಂದ ಕರೋನಾ ನಿಯಂತ್ರಣ ಕರ್ತವ್ಯ ನಿರ್ವಹಿಸಲು ಸ್ಫೂರ್ತಿದಾಯಕವಾಗಿದೆ : ಕೆ ಮಂಜುನಾಥ್

 

ನಿತ್ಯವಾಣಿ, ಚಿತ್ರದುರ್ಗ, (ಆ.03) : ಸಾರ್ವಜನಿಕರಿಗೆ ಅಗತ್ಯವಾದ ಸೇವೆಗಳನ್ನು ನಿರಂತರವಾಗಿ ಗ್ರಾಮೀಣ ಮಟ್ಟದಲ್ಲಿ ನೀಡುತ್ತಾ ಸದಾ ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಗತ್ಯ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು *ಕರೋನಾ ವಾರಿಯರ್ಸ್* ಎಂದು ಸರ್ಕಾರ ಘೋಷಣೆ ಮಾಡಿ ( *01.04.2020ರಿಂದ ಪೂರ್ವಾನ್ವಯವಾಗುವಂತೆ*) ಸರ್ಕಾರದ ಆದೇಶ ಸಂಖ್ಯೆ ಆರ್.ಡಿ.ಪಿ.ಆರ್/9/GPA/ 2021 ಬೆಂಗಳೂರು ದಿನಾಂಕ 02.08.2021ರಂತೆ ಆದೇಶ ಹೊರಡಿಸಿ ಆರ್.ಡಿ.ಪಿ.ಅರ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಆತ್ಮಸ್ಥೈರ್ಯದಿಂದ ಕರೋನಾ ನಿಯಂತ್ರಣ ಕರ್ತವ್ಯ ನಿರ್ವಹಿಸಲು ಸ್ಫೂರ್ತಿದಾಯಕವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಈ ಆದೇಶ ಹೊರಡಿಸಲು ಕಾರಣೀಭೂತರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಷಡಕ್ಷರಿ ರವರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಈ ಮೂಲಕ ತಿಳಿಯಬಯಸುತ್ತೇನೆ.

Leave a Reply

Your email address will not be published.