ನಿತ್ಯವಾಣಿ,ಚಿತ್ರದುರ್ಗ, (ಮೇ.30) : ಚಿತ್ರದುರ್ಗ ನಗರದಲ್ಲಿ ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರ 7 ವರ್ಷಗಳ ಆಡಳಿತ ಪೂರ್ಣಗೊಳಿಸುತ್ತಿರುವ ಇನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬೆಳಗ್ಗೆ ಶಾಸಕರಾದ
ಜಿ ಹೆಚ್ ತಿಪ್ಪಾರೆಡ್ಡಿ ರವರ ನೇತೃತ್ವದಲ್ಲಿ ಬಾಲಭವನ ಮತ್ತು ಐ.ಯು.ಡಿ.ಪಿ ಬಡಾವಣೆ, ಹಾಗೂ ಗಾಂಧಿ ನಗರ, ಮಠದ ಕುರುಬರಹಟ್ಟಿಯಲ್ಲಿ
ಕೋವಿಡ್ -19ರ ರೋಗದ ವಿರುದ್ಧ ಜನಜಾಗೃತಿ ಮೂಡಿಸಿ ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,



ಈ ಸಮಯದಲ್ಲಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಭಾನುಮೂರ್ತಿ ಲಸಿಕೆ ಹಾಕಿಸಿ ಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯನೂಡಲ್ ಅಧಿಕಾರಿ ಕುಮಾರ್ ಸ್ವಾಮಿ, ಜಿಲ್ಲಾ ಅಧ್ಯಕ್ಷರಾದ ಮುರುಳಿ ಎ ಮತ್ತು ಜಿಲ್ಲಾ ಉಪಾಧ್ಯಷ ಸಂಪತ್ ಕುಮಾರ್ ಜಿ ಎಸ್, ನಗರ ಸಭೆ ಸದಸ್ಯ ಶ್ರೀನಿವಾಸ್ , ಮಾದ್ಯಮ ವಕ್ತಾರ ನಾಗರಾಜ ಬೇಂದ್ರೆ, ಮುಖಂಡ ಶಿವಣಚಾರ್, ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ ಶಶಿಧರ್ ಜೆ, ಕಾರ್ಯದರ್ಶಿ ಪ್ರದೀಪ್. ಪ್ರಸನ್ನ, ಉಪಾಧ್ಯಷ ಕಾರ್ತೀಕ್, ಒಬಿಸಿ ನಗರ ಅಧ್ಯಕ್ಷ ಕೃಷ್ನ ಎನ್, ನಗರ ಯುವಮೋರ್ಚಅಧ್ಯಕ್ಷ ರಾಮ್ , ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳು , ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು
ReplyForward
|