covid-19 :: ಇಂದು ರಾತ್ರಿಯೇ 60 ರವಾನೆ ಕೇಂದ್ರಗಳಿಗೆ ಲಸಿಕೆ ಸಾಗಾಟ

ನವದೆಹಲಿ: ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಬರುವ ಶನಿವಾರದಿಂದ ಆರಂಭವಾಗಲಿದ್ದು ದೇಶದ ಜನರಲ್ಲಿ ಹೊಸ ಭರವಸೆ ಮೂಡಿದೆ.

ಒಂದು ಕೋವಿಡ್‌ ಲಸಿಕೆ ಡೋಸ್‌ಗೆ ಸರ್ಕಾರ ₹200 ನೀಡಿ ಖರೀದಿಸಿದೆ. ಸುಮಾರು 1.1ಕೋಟಿ ಡೋಸೆಜ್‌ಗಳು ಸೋಮವಾರ ರಾತ್ರಿ ದೇಶದ ಪ್ರಮುಖ ಕೋಲ್ಡ್‌ಸ್ಟೋರೆಜ್‌ಗೆ ರವಾನೆಯಾಗಲಿವೆ ಎನ್ನಲಾಗಿದೆ.

ಕೋಲ್ಕತ್ತ, ಮುಂಬೈ, ದೆಹಲಿ, ಚೆನ್ನೈ, ಭೋಪಾಲ್‌, ಬೆಂಗಳೂರು ಸೇರಿದಂತೆ ದೇಶದಾದ್ಯಂತ ಇರುವ 60 ರವಾನೆ ಕೇಂದ್ರಗಳಿಗೆ ಲಸಿಕೆ ರವಾನೆಯಾಗಲಿದೆ. ಮೊದಲಿಗೆ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಆದ್ಯತೆ ನೀಡಲಾಗಿದೆ. ನಂತರದಲ್ಲಿ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 16,311 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 161 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಈ ವರೆಗೆ ಒಟ್ಟು 1,04,66,595 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,51,160 ಮಂದಿ ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 19,299 ಸೋಂಕಿತರು ಚೇತರಿಸಿಕೊಂಡಿದ್ದು, ಈ ವರೆಗೆ ಗುಣಮುಖರಾದವರ ಸಂಖ್ಯೆ 1,00,92,909ಕ್ಕೆ ತಲುಪಿದೆ. 2,22,526 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರಮಾಣ ಕಡೆಮೆಯಾಗುತ್ತಿದ್ದು ಲಸಿಕೆ ಅಭಿಯಾನಕ್ಕೆ ದಿನಗಣನೇ ಆರಂಭವಾಗಿದೆ.

ದೇಶದಾದ್ಯಂತ ಕೋವಿಡ್‌ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ನಾಳೆ (ಜ.11) ಸಂಜೆ 4 ಗಂಟೆಗೆ ಚರ್ಚೆ ನಡೆಸಲಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದ್ದು, ಎಲ್ಲಾ ರಾಜ್ಯಗಳ ಮುಖ್ಯಮುಂತ್ರಿಗಳು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜ.16ರಂದು ದೇಶದಾದ್ಯಂತ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಲಿದೆ

Leave a Reply

Your email address will not be published.