ಪುಣೆಯ ಸೆರಮ್ ಇನ್ಸಿಟಿಟ್ಯೂಟ್ ತಯಾರಿಸಿರುವ ಕೊರೋನಾ ನಿರೋಧಕ ಕೋವಿಶೀಲ್ಡ್ ಲಸಿಕೆ ಮೊದಲಿಗೆ ರಾಜಧಾನಿ ಬೆಂಗಳೂರು ಈಗ ತಲುಪಿದ್ದು, ಲಸಿಕೆ ಕಳ್ಳತನ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೇಶಾದ್ಯಂತ ಕೊರೋನಾವೈರಸ್ ವಿರುದ್ಧದ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ನಾಲ್ಕು ದಿನಗಳು ಬಾಕಿ ಇರುವಂತೆಯೇ, ಸ್ಪೈಸ್ ಜೆಟ್ ವಿಮಾನದಲ್ಲಿ ಲಸಿಕೆಯನ್ನು ರವಾನಿಸಲಾಯಿತು. ಪೊಲೀಸ್ ಎಸ್ಕಾರ್ಟ್ ನೊಂದಿಗೆ ಪಿಸಿಆರ್ ವಾಹನಗಳೊಂದಿಗೆ ಸಂಬಂಧಿತ ಪ್ರದೇಶಗಳಿಗೆ ಕೊರೋನಾ ಲಸಿಕೆ ರವಾನಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಉಪ ಪೊಲೀಸ್ ಕಮೀಷನರ್
ಲಸಿಕೆ ರವಾನಿಸುವ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದೆ. ಒಂದು ವೇಳೆ ಬೇರೆ ಕಡೆಗೆ ಲಸಿಕೆ ರವಾನೆ ಬಗ್ಗೆ ನಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಂಡರೆ ಅದನ್ನು ಒದಗಿಸುವುದಾಗಿ ಜಂಟಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಲಸಿಕೆ ಇರುವ ವಾಹನ ಸುಗುಮವಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಸಂಗ್ರಹ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪಿಸಿಆರ್ ವಾಹನಗಳು ಕೂಡಾ ಎಸ್ಕಾರ್ಟ್ ನೊಂದಿಗೆ ತೆರಳುತ್ತವೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ಕೋಲ್ಡ್ ಸ್ಟೋರೇಜ್ ಪ್ರದೇಶಗಳಿಂದ ಬರುವ ಕರೆಗಳಿಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುವಂತೆ ಪೊಲೀಸ್ ಕಂಟ್ರೋಲ್ ರೂಂಗೆ ನಿರ್ದೇಶನ ನೀಡಲಾಗಿದೆ. ಪಿಸಿಆರ್ ವಾಹನಗಳು, ಸ್ಥಳೀಯ ಪೊಲೀಸ್, ಟ್ರಾಫಿಕ್ ಪೊಲೀಸ್ ಮತ್ತಿತರ ಏಜೆನ್ಸಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.