ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತುರ್ತು ಬಳಕೆಗಾಗಿ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆ ಶುಕ್ರವಾರ ಅನುಮೋದನೆ ನೀಡಿದೆ.
ಲಸಿಕೆಯ ಪ್ರಸ್ತಾವನೆಗಳಿಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ.ಸೋಮಾನಿ ಅವರು ರಚಿಸಿದ ತಜ್ಞರ ಸಮಿತಿಯು ಈ ವಾರ ಎರಡನೇ ಬಾರಿಗೆ ಸಭೆ ಸೇರಿ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಗೆ ತುರ್ತು ಅನುಮೋದನೆಯನ್ನ ಶಿಫಾರಸ್ಸು ಮಾಡಿದೆ. ಅದ್ರಂತೆ, ಈ ಕುರಿತು 2 ದಿನದೊಳಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಇನ್ನು ಒಂದು ಬಾರೀ ಕೇಂದ್ರ ಹಸಿರು ನಿಶಾನೆ ತೋರಿಸಿದ್ರೆ, ಭಾರತದಲ್ಲಿ ಬಳಕೆಗೆ ಈ ಲಸಿಕೆ ಲಭ್ಯವಾಗಲಿದೆ.
ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಸಿದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯು 70.4% ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ. ಅಡ್ಡ ಪರಿಣಾಮಗಳನ್ನ ಬೀರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಕಳೆದ ತಿಂಗಳು ಭಾರತದಲ್ಲಿ ಬ್ರಿಟಿಷ್ ಔಷಧ ತಯಾರಕರ ಲಸಿಕೆಯ ಆವೃತ್ತಿಗೆ ತುರ್ತು ಬಳಕೆಯ ಪರವಾನಗಿಯನ್ನು ಸೀರಮ್ ಇನ್ ಸ್ಟಿಟ್ಯೂಟ್ ಕೇಳಲಾಗಿತ್ತು. ಯುನೈಟೆಡ್ ಕಿಂಗ್ ಡಮ್ ನಿಯಂತ್ರಕವು AstraZenecaನ ಮೂಲ ಆವೃತ್ತಿಗೆ ಅನುಮೋದನೆ ನೀಡಿದ ನಂತರ ಪರಿಷ್ಕೃತ ದತ್ತಾಂಶವನ್ನ ಸಲ್ಲಿಸುವಂತೆ ತಜ್ಞರ ಸಮಿತಿ ಈ ಹಿಂದೆ ಸೂಚಿಸಿತ್ತು.
ಪ್ರತಿಸ್ಪರ್ಧಿ ಲಸಿಕೆಗಳಿಗಿಂತ ಕಡಿಮೆ ಮತ್ತು ಸುಲಭವಾಗಿ ವಿತರಿಸಲು ಸುಲಭ, ಆಕ್ಸ್ ಫರ್ಡ್- ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯು ಕೊರೊನಾ ವೈರಸ್ʼನ ವಿರುದ್ಧದ ಜಾಗತಿಕ ಹೋರಾಟದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಯುಎಸ್ ಕಂಪನಿಗಳಾದ ಫೈಜರ್ ಮತ್ತು ಮಾಡರ್ನಾ ಎರಡು ಸಂದೇಶ ವಾಹಕ ಆರ್.ಎನ್.ಎ ಲಸಿಕೆಗಳಂತಲ್ಲದೆ, ಈ ಲಸಿಕೆಯನ್ನ ಸಾಮಾನ್ಯ ರೆಫ್ರಿಜರೇಟರ್ ತಾಪಮಾನದಲ್ಲಿ ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ʼವರೆಗೆ ಇರಿಸಬಹುದು. ಮಾಡರ್ನಾ ಲಸಿಕೆಯನ್ನ-20C ಯಲ್ಲಿ ದಾಸ್ತಾನು ಮಾಡಬೇಕು, ಹಾಗೆಯೇ ಫೈಜರ್/ಬಯೋಎನ್ ಟೆಕ್ ಉತ್ಪನ್ನವನ್ನು -70C ಯಲ್ಲಿ ಇರಿಸಬೇಕು. ಪ್ರತಿ ಡೋಸ್ ಗೆ 3 ಡಾಲರ್ ನಷ್ಟು ಕಡಿಮೆ ಬೆಲೆ ಇರಲಿದೆ.
ಎರಡು ಪೂರ್ಣ ಡೋಸ್ʼಗಳನ್ನು ನೀಡಿದವರಲ್ಲಿ 62% ರಷ್ಟು ಮತ್ತು ಆರಂಭದಲ್ಲಿ ಅರ್ಧ ಡೋಸ್ ನೀಡಿದವರಲ್ಲಿ 90% ರಷ್ಟು ಜನರಿಗೆ ರೋಗದಿಂದ ರಕ್ಷಿಸಲಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ವಿಶ್ವದ ಅತಿ ದೊಡ್ಡ ಲಸಿಕೆಗಳ ಉತ್ಪಾದಕ ಸಂಸ್ಥೆ, ಈಗಾಗಲೇ ಸುಮಾರು 50 ಮಿಲಿಯನ್ ಡೋಸ್ʼಗಳನ್ನ ದಾಸ್ತಾನು ಮಾಡಿದ್ದು, ಇದು 25 ಮಿಲಿಯನ್ ಜನರಿಗೆ ಸಾಕಾಗುವಷ್ಟಿದೆ. ಆಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ಲಸಿಕೆಯನ್ನು ಭಾರತಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಾಲಾ ತಿಳಿಸಿದ್ದಾರೆ. ‘ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಆರಂಭದಲ್ಲಿ ವಿತರಿಸಲಾಗುತ್ತದೆ, ನಂತರ ನಾವು ಮುಖ್ಯವಾಗಿ ಆಫ್ರಿಕಾದಲ್ಲಿರುವ ಕೋವಾಕ್ಸ್ ದೇಶಗಳನ್ನ ನೋಡುತ್ತೇವೆ. ನಮ್ಮ ಆದ್ಯತೆ ಭಾರತ ಮತ್ತು ಕೋವಾಕ್ಸ್ ದೇಶಗಳು’ ಎಂದು ಪೂನಾವಾಲಾ ಹೇಳಿದ್ದರು.
ಇನ್ನು ಭಾರತ್ ಬಯೋಟೆಕ್ ಸಂಸ್ಥೆ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಭಾರತದ ಕೇಂದ್ರೀಯ ಔಷಧಗಳ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್ ಸಿಒ) ಅನುಮೋದಿಸಬಹುದು ಎಂದು ರಾಯಿಟರ್ಸ್ ವರದಿ ಮಾಡಿದೆ.