ಚಿತ್ರದುರ್ಗ , ನಿತ್ಯವಾಣಿ, ( ಏ. 25) : ಕೊರೊನಾ ಚೈನ್ ಲಿಂಕ್ ತಪ್ಪಿಸುವ ಏಕೈಕ ಕಾರಣಕ್ಕಾಗಿ ಜಾರಿ ಮಾಡಿರುವ ವೀಕ್ ಎಂಡ್ ಲಾಕ್ ಡೌನ್ ಗೆ ಎರಡನೇ ದಿನವಾದ ಇಂದು ಕೂಡ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿನ್ನೆಯಂತೆ ಭಾನುವಾರ ದಿನವಾದ ಇಂದು ಎಲ್ಲೆಡೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು.
ಹಾಲು, ತರಕಾರಿ, ಹಣ್ಣು ಹಂಪಲು, ದಿನಸಿ ಅಂಗಡಿಗಳಿಗೆ ಅವಕಾಶ ನೀಡಲಾಗಿತ್ತು. ಜನರು ಬೆಳ್ಳಂಬೆಳಗ್ಗೆ ಖರೀದಿಗೆ ಮುಗಿಬಿದ್ದ ದೃಶ್ಯ ಹಲವೆಡೆ ಕಂಡುಬಂತು. ಉಳಿದಂತೆ ಮೆಡಿಕಲ್ ಶಾಪ್‍ಗಳಿಗೆ ಮಾತ್ರ ದಿನವಿಡೀ ತೆರೆಯಲು ಅವಕಾಶ ನೀಡಲಾಗಿತ್ತು. ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಹುತೇಕ ಎಲ್ಲಾ ಕಡೆ ನೀರವ ಮೌನ ಆವರಿಸಿತ್ತು.ನಗರದ ಮುಖ್ಯರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು ಜನ, ವಾಹನ ಸಂಚಾರವನ್ನು ನಿಯಂತ್ರಿಸಿದರು.ನಗರದಲ್ಲಿ ಕೊರೋನ ಹಿನ್ನಲೆಯಲ್ಲಿ ವಿಕೇಂಡ್ ಕರ್ಫ್ಯೂ ವಿಧಿಸಿದ ಹಿನ್ನಲೆಯಲ್ಲಿ ನಗರದ ಬೀದಿಗಳೆಲ್ಲಾ ಜನ ಹಾಗೂ ವಾಹನಗಳ ಸಂಚಾರ ಇಲ್ಲದೆ ಬೀಕೋ ಎನ್ನುತ್ತಿವೆ.ಅನಗತ್ಯ ಓಡಾಟ ನಡೆಸಿದರೆ ಲಾಠಿ ಮೂಲಕ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದರು. ಈಗಾಗಲೇ ಬೈಕ್‍ನಲ್ಲಿ ಓಡಾಡುವರಿಗೆ ಕಾರಣ ಕೇಳಿ ಎಚ್ಚರಿಕೆ ನೀಡಲಾಗುತ್ತಿತ್ತು.
ಆಟದ ಮೈದಾನವಾದ ರಸ್ತೆ ; ನಗರದ ಬಹುತೇಕ ರಸ್ತೆಗಳು ವಿಕೇಂಡ್ ಕರ್ಫ್ಯೂ ನಿಂದಾಗಿ ವಾಹನ ಜನ ಸಂಚಾರ ಇಲ್ಲದೆ ಬೀಕೋ ಎನ್ನುತ್ತಿದೆ ಇದರ ಲಾಭವನ್ನು ಪಡೆದ ಯುವ ಜನೆತ ತಮ್ಮ ಮನೆಯ ಮುಂದೆ ಕ್ರಿಕೆಟ್, ಗೋಲಿಯಂತಹ ಆಟವನ್ನು ಆಡುವುದರ ಮೂಲಕ ತಮ್ಮ ಬೇಸರವನ್ನು ಕೆಳೆದು ಕೊಂಡಿದ್ದಾರೆ.