FLASH NEWS : ಹೆಸರಾಂತ  ಉದ್ಯಮಿ ವಿಜಿಎಸ್  ರಾಜಣ್ಣ ಇನ್ನಿಲ್ಲ

ನಿತ್ಯವಾಣಿ,ಚಿತ್ರದುರ್ಗ,(ಏ.28) : ನಗರದ ಹೆಸರಾಂತ ಉದ್ಯಮಿ ವಿಜಿಎಸ್  ರಾಜಣ್ಣ (71) ಇಂದು ಸಂಜೆ 7.30 ಕ್ಕೆ ಕೊವಿಡ್  ನಿಂದ  ಸಾವನ್ನಪ್ಪಿದ್ದಾರೆ,  ತುರುವನೂರು ರಸ್ತೆಯ ಚಿತ್ರದುರ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ  ಶುಕ್ರವಾರ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ,  ಇವರುಸೂರ್ಯಪುತ್ರ ನಗರದ ಶ್ರೀಶನೇಶ್ವರಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ನ   ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದರು ಮತ್ತು ಅನೇಕ ಧರ್ಮಕಾರ್ಯಗಳಲ್ಲಿ ಪಾಲ್ಗೊಂಡಿದ್ದರು,  ಇವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ, ಇವರ ಮರಣದ ಸುದ್ದಿ ಕೇಳಿ ದಿಗ್ಬ್ರಮೆ ಒಳಗಾಗಿ ಶ್ರೀ ಶನೇಶ್ವರಸ್ವಾಮಿ ಲೋಕಕಲ್ಯಾಣ ಟ್ರಸ್ಟಿನ  ಧರ್ಮದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿಯವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥಿಸಿದ್ದಾರೆ

Leave a Reply

Your email address will not be published.