ನಿತ್ಯವಾಣಿ,ಹೊಳಲ್ಕೆರೆ,(ಏ.29 ); ಹೊಳಲ್ಕೆರೆ ಪಟ್ಟಣದಲ್ಲಿ ಮಾಸ್ಕ್ ಧರಿಸದೆ, ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿ ಅನುಸರಿಸದೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಲ್ಲದೆ ವಿನಾಕಾರಣ ತಿರುಗಾಡುತ್ತಿದ್ದ ಪಡ್ಡೆ ಹುಡುಗರಿಗೆ ಬಸ್ಕಿ ಹೊಡೆಯಿಸಿ ಚೆನ್ನಾಗಿ ಬೆವರಿಳಿಯುವಂತೆ ಮಾಡಿದರು. ಕೋವಿಡ್ ಸೋಂಕು ವಾಯುವೇಗದಲ್ಲಿ ಎಲ್ಲೆಡೆ ಹರಡುತ್ತಿದ್ದು ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರ ಜನಸಾಮಾನ್ಯರ ರಕ್ಷಣೆಗಾಗಿ ಎಷ್ಟೆಲ್ಲಾ ಯತ್ನಿಸುತ್ತಿದ್ದರೂ ಸಹ ಕೆಲ ಜನರು ತಮ್ಮ ಮತ್ತು ತಮ್ಮ ಕುಟುಂಬದವರ ಹಿತರಕ್ಷಣೆಯನ್ನೂ ಸಹ ಮರೆತು ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿ ಈ ರೀತಿ ಬೇಕಾಬಿಟ್ಟಿ ಓಡಾಡುತ್ತಿರುವುದು ನಿಜಕ್ಕೂ ಶೋಚನೀಯ, ದಯಮಾಡಿ ಎಲ್ಲರೂ ವಾಸ್ತವ ಸ್ಥಿತಿಯನ್ನು ಅರಿತು ತಮ್ಮ ಹಾಗೂ ತಮ್ಮನ್ನು ನಂಬಿದ ಕುಟುಂಬದ ಹಿತ ಕಾಯುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಸಾರ್ವಜನಿಕರಲ್ಲಿ ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೊಳಲ್ಕೆರೆ ಪುರಸಭೆ ಆರೋಗ್ಯ ನಿರೀಕ್ಷಕ ನಾಗಭೂಷಣ್ ಹಾಗೂ ಇತರೆ ಪುರಸಭಾ ಸಿಬ್ಬಂದಿಗಳು ಹಾಜರಿದ್ದರು.