ಯಾವೊಬ್ಬ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರದಷ್ಟು ಬಾರಿ ನಾನು ಜಿಲ್ಲೆಗೆ ಬಂದಿದ್ದೇನೆ : ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು

ನಿತ್ಯವಾಣಿ,ಚಿತ್ರದುರ್ಗ, (ಏ. 29): ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸಿವಿರ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ರೆಮಿಡಿಸಿವಿರ್ ಕಾಳ ಸಂತೆ ಮಾರಾಟದ ಬಗ್ಗೆ ಎಚ್ಚರ ವಹಿಸಲಾಗುತ್ತಿದೆ ಜಿಲ್ಲೆಯಲ್ಲಿ ಆಕಿಜನ್ ಉತ್ಪಾದನಾ ಘಟಕ ತೆರೆಯಲು ಚಿಂತನೆ ನಡೆಸಲಾಗಿದೆ ಎಲ್ಲಾ ತಾಲೂಕುಗಳಲ್ಲೂ ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ.ಎಂದು ಕೂಡಾ ಕಂಡರಿಯದ ಪರಿಸ್ಥಿತಿ ಬಂದು ತಲುಪಿದೆ. ಸಂಕಷ್ಟದಲ್ಲಿರುವ ಜನರಿಗೆ ಜೀವನ, ಜೀವ ಉಳಿಸಬೇಕಾಗಿದೆ. ಜೀವದ ಜೊತೆ ಜೀವನ ಉಳಿಸಬೇಕಾದರೆ, ನಮ್ಮ ಸರ್ಕಾರ ಎಲ್ಲಾ ರೀತಿಯ ಆದ್ಯತೆ ನೀಡಬೇಕಿದೆ ಕೋವಿಡ್‍ನಿಂದಾಗಿ ಇಡೀ ದೇಶದ, ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಗತ್ಯ ಕ್ರಮ ಕೈಗೊಂಡಿದ್ದಾರೆ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಜನ ಸಂಕಷ್ಟದಲ್ಲಿದ್ದು ಎಂದೂ ಕಂಡರಿಯದ ಸ್ಥಿತಿಯಿದೆ. ಜನರ ಜೀವದ ಜತೆಗೆ ಜೀವನವನ್ನೂ ಉಳಿಸಬೇಕಾಗಿದೆ. ಮುಖ್ಯಮಂತ್ರಿಗಳು ಮತ್ತು ನಮ್ಮ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವೇಳೆ ರಾಜಕೀಯ ಮಾಡಿದರೆ ಮಾನವೀಯ ಮೌಲ್ಯ ಕಳೆದು ಕೊಳ್ಳಬೇಕಾಗುತ್ತದೆ ಜಿಲ್ಲೆಯಲ್ಲಿ ಸೋಂಕು ಬಹುತೇಕ ನಿಯಂತ್ರಣದಲ್ಲಿದೆ. ಕೋವಿಡ್ ಚೈನ್ ಬ್ರೇಕ್ ಮಾಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದರು.

ಮುಖ್ಯಮಂತ್ರಿಗಳು ಕೂಡಾ ವಿಡಿಯೋ ಕಾನ್ಪ್ರೇನ್ಸ್ ಮಾಡುವ ಮೂಲಕ ಎಲ್ಲಾ ಜಿಲ್ಲೆಗಳ ಸಮಸ್ಯೆ ಆಲಿಸಿದ್ದಾರೆ.
ನಾನು ವಿರೋಧ ಪಕ್ಷದವರನ್ನ ಕೇಳುತ್ತೇನೆ, ಇಂಥ ವೇಳೆ ರಾಜಕೀಯ ಮಾಡುವುದು ಬೇಡ. ಇಂಥ ಸಮಯದಲ್ಲಿ ರಾಜಕಾರಣ ಮಾಡಿದರೆ, ನಮ್ಮ ಮಾನವೀಯ ಮೌಲ್ಯ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬಾರದು. ನಾವೆಲ್ಲರೂ ಕೊವೀಡ್ ವಿಚಾರದಲ್ಲಿ ಚೈನ್ ಬ್ರೇಕ್ ಮಾಡಬೇಕು. ಚಿತ್ರದುರ್ಗ ಜಿಲ್ಲೆ ಕಂಟ್ರೂಲ್‍ನಲ್ಲಿ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಯಾಕೆ ತಡವಾಗಿ ಜಿಲ್ಲೆಗೆ ಬಂದಿದ್ದು ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಮುಲು ಪ್ರತಿಕ್ರಿಯಿಸಿದ ಸಚಿವರು, ಉಸ್ತುವಾರಿ ಮಂತ್ರಿಯಾಗಿ ನಾನು ಪ್ರತಿನಿತ್ಯವೂ ಡಿಸಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ.ಪ್ರತಿ ವಿಚಾರವನ್ನು ಜಿಲ್ಲಾಧಿಕಾರಿ ಜೊತೆ ಮಾಹಿತಿ ಪಡೆಯುತ್ತಿದ್ದೇನೆ. ಎಲೆಕ್ಷನ್ ನಡೆಯಬಾರದು ಎಂದು ಪ್ರಯತ್ನಿಸಿದ್ದೆ. ಎಲೆಕ್ಷನ್ ನಡೆದಿದ್ದರಿಂದ ನಾವು ಹೋಗಿ ಕೆಲಸ ಮಾಡಬೇಕಾಗಿತ್ತು.
ಚುನಾವಣೆ ಮುಂದೂಡುವ ಪ್ರಯತ್ನ ಮಾಡಿದ್ದೇವೆ ನಮ್ಮ ಕೈಯಲ್ಲಿ ಆಗಲಿಲ್ಲ ಎಂದು ತಿಳಿಸಿದರು.

ಚುನಾವಣೆ ಸಮಯದಲ್ಲಿ ಕೂಡಾ ಡಿಸಿ ಜೊತೆ ಮಾಹಿತಿ ಪಡೆಯುತ್ತಿದ್ದೆ. ಕೇವಲ ಚಿತ್ರದುರ್ಗ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆ ಟಚ್‍ನಲ್ಲಿ ಇದ್ದೇನೆ. ಸಿಎಂ ಯಡಿಯೂರಪ್ಪ ಅವರ ಜೊತೆಗೂ ಜಿಲ್ಲೆಯ ಕುರಿತು ಚರ್ಚೆ ಮಾಡುತ್ತೇನೆ. ಒಂದು ತಿಂಗಳು ಮಾತ್ರವಾಗಿದೆ ನಾನು ಬಂದಿಲ್ಲ.

ನಿತ್ಯವಾಣಿ,ಚಿತ್ರದುರ್ಗ, (ಏ. 29): ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸಿವಿರ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ರೆಮಿಡಿಸಿವಿರ್ ಕಾಳ ಸಂತೆ ಮಾರಾಟದ ಬಗ್ಗೆ ಎಚ್ಚರ ವಹಿಸಲಾಗುತ್ತಿದೆ ಜಿಲ್ಲೆಯಲ್ಲಿ ಆಕಿಜನ್ ಉತ್ಪಾದನಾ ಘಟಕ ತೆರೆಯಲು ಚಿಂತನೆ ನಡೆಸಲಾಗಿದೆ ಎಲ್ಲಾ ತಾಲೂಕುಗಳಲ್ಲೂ ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ.ಎಂದು ಕೂಡಾ ಕಂಡರಿಯದ ಪರಿಸ್ಥಿತಿ ಬಂದು ತಲುಪಿದೆ. ಸಂಕಷ್ಟದಲ್ಲಿರುವ ಜನರಿಗೆ ಜೀವನ, ಜೀವ ಉಳಿಸಬೇಕಾಗಿದೆ. ಜೀವದ ಜೊತೆ ಜೀವನ ಉಳಿಸಬೇಕಾದರೆ, ನಮ್ಮ ಸರ್ಕಾರ ಎಲ್ಲಾ ರೀತಿಯ ಆದ್ಯತೆ ನೀಡಬೇಕಿದೆ ಕೋವಿಡ್‍ನಿಂದಾಗಿ ಇಡೀ ದೇಶದ, ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಗತ್ಯ ಕ್ರಮ ಕೈಗೊಂಡಿದ್ದಾರೆ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಜನ ಸಂಕಷ್ಟದಲ್ಲಿದ್ದು ಎಂದೂ ಕಂಡರಿಯದ ಸ್ಥಿತಿಯಿದೆ. ಜನರ ಜೀವದ ಜತೆಗೆ ಜೀವನವನ್ನೂ ಉಳಿಸಬೇಕಾಗಿದೆ. ಮುಖ್ಯಮಂತ್ರಿಗಳು ಮತ್ತು ನಮ್ಮ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವೇಳೆ ರಾಜಕೀಯ ಮಾಡಿದರೆ ಮಾನವೀಯ ಮೌಲ್ಯ ಕಳೆದು ಕೊಳ್ಳಬೇಕಾಗುತ್ತದೆ ಜಿಲ್ಲೆಯಲ್ಲಿ ಸೋಂಕು ಬಹುತೇಕ ನಿಯಂತ್ರಣದಲ್ಲಿದೆ. ಕೋವಿಡ್ ಚೈನ್ ಬ್ರೇಕ್ ಮಾಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದರು.

ಮುಖ್ಯಮಂತ್ರಿಗಳು ಕೂಡಾ ವಿಡಿಯೋ ಕಾನ್ಪ್ರೇನ್ಸ್ ಮಾಡುವ ಮೂಲಕ ಎಲ್ಲಾ ಜಿಲ್ಲೆಗಳ ಸಮಸ್ಯೆ ಆಲಿಸಿದ್ದಾರೆ.
ನಾನು ವಿರೋಧ ಪಕ್ಷದವರನ್ನ ಕೇಳುತ್ತೇನೆ, ಇಂಥ ವೇಳೆ ರಾಜಕೀಯ ಮಾಡುವುದು ಬೇಡ. ಇಂಥ ಸಮಯದಲ್ಲಿ ರಾಜಕಾರಣ ಮಾಡಿದರೆ, ನಮ್ಮ ಮಾನವೀಯ ಮೌಲ್ಯ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬಾರದು. ನಾವೆಲ್ಲರೂ ಕೊವೀಡ್ ವಿಚಾರದಲ್ಲಿ ಚೈನ್ ಬ್ರೇಕ್ ಮಾಡಬೇಕು. ಚಿತ್ರದುರ್ಗ ಜಿಲ್ಲೆ ಕಂಟ್ರೂಲ್‍ನಲ್ಲಿ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಯಾಕೆ ತಡವಾಗಿ ಜಿಲ್ಲೆಗೆ ಬಂದಿದ್ದು ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಮುಲು ಪ್ರತಿಕ್ರಿಯಿಸಿದ ಸಚಿವರು, ಉಸ್ತುವಾರಿ ಮಂತ್ರಿಯಾಗಿ ನಾನು ಪ್ರತಿನಿತ್ಯವೂ ಡಿಸಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ.ಪ್ರತಿ ವಿಚಾರವನ್ನು ಜಿಲ್ಲಾಧಿಕಾರಿ ಜೊತೆ ಮಾಹಿತಿ ಪಡೆಯುತ್ತಿದ್ದೇನೆ. ಎಲೆಕ್ಷನ್ ನಡೆಯಬಾರದು ಎಂದು ಪ್ರಯತ್ನಿಸಿದ್ದೆ. ಎಲೆಕ್ಷನ್ ನಡೆದಿದ್ದರಿಂದ ನಾವು ಹೋಗಿ ಕೆಲಸ ಮಾಡಬೇಕಾಗಿತ್ತು.
ಚುನಾವಣೆ ಮುಂದೂಡುವ ಪ್ರಯತ್ನ ಮಾಡಿದ್ದೇವೆ ನಮ್ಮ ಕೈಯಲ್ಲಿ ಆಗಲಿಲ್ಲ ಎಂದು ತಿಳಿಸಿದರು.

ಚುನಾವಣೆ ಸಮಯದಲ್ಲಿ ಕೂಡಾ ಡಿಸಿ ಜೊತೆ ಮಾಹಿತಿ ಪಡೆಯುತ್ತಿದ್ದೆ. ಕೇವಲ ಚಿತ್ರದುರ್ಗ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆ ಟಚ್‍ನಲ್ಲಿ ಇದ್ದೇನೆ. ಸಿಎಂ ಯಡಿಯೂರಪ್ಪ ಅವರ ಜೊತೆಗೂ ಜಿಲ್ಲೆಯ ಕುರಿತು ಚರ್ಚೆ ಮಾಡುತ್ತೇನೆ. ಒಂದು ತಿಂಗಳು ಮಾತ್ರವಾಗಿದೆ ನಾನು ಬಂದಿಲ್ಲ. ಯಾವೊಬ್ಬ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರದಷ್ಟು ಬಾರಿ ನಾನು ಜಿಲ್ಲೆಗೆ ಬಂದಿದ್ದೇನೆ. ಎಲೆಕ್ಷನ್ ಇದಿದ್ದರಿಂದ ನಾನು ಒಂದು ತಿಂಗಳಿಂದ ಬಂದಿಲ್ಲ ಅದನ್ನು ನಾನು ಒಪ್ಪುತ್ತೇನೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕುರಿತು ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಎಲ್ಲವನ್ನು ಸರಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಚಿತ್ರದುರ್ಗಕ್ಕೆ ಕಳೆದ ಒಂದು ತಿಂಗಳಿನಿಂದ ಬರಲಾಗಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಕಾರಣ ಬರಲಾಗಿಲ್ಲ. ಜಿಲ್ಲಾ ಮಂತ್ರಿಯಾಗಿ ಜಿಲ್ಲಾಧಿಕಾರಿಗಳ ಜತೆ ನಿತ್ಯ ಸಂಪರ್ಕದಲ್ಲಿದ್ದು ಸಲಹೆ, ಸೂಚನೆ ನೀಡಿದ್ದೇನೆ ಎಂದು ಶ್ರೀರಾಮುಲು ಹೇಳಿದರು.

ಎಲೆಕ್ಷನ್ ಇದಿದ್ದರಿಂದ ನಾನು ಒಂದು ತಿಂಗಳಿಂದ ಬಂದಿಲ್ಲ ಅದನ್ನು ನಾನು ಒಪ್ಪುತ್ತೇನೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕುರಿತು ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಎಲ್ಲವನ್ನು ಸರಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಚಿತ್ರದುರ್ಗಕ್ಕೆ ಕಳೆದ ಒಂದು ತಿಂಗಳಿನಿಂದ ಬರಲಾಗಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಕಾರಣ ಬರಲಾಗಿಲ್ಲ. ಜಿಲ್ಲಾ ಮಂತ್ರಿಯಾಗಿ ಜಿಲ್ಲಾಧಿಕಾರಿಗಳ ಜತೆ ನಿತ್ಯ ಸಂಪರ್ಕದಲ್ಲಿದ್ದು ಸಲಹೆ, ಸೂಚನೆ ನೀಡಿದ್ದೇನೆ ಎಂದು ಶ್ರೀರಾಮುಲು ಹೇಳಿದರು.

Leave a Reply

Your email address will not be published.