ನಿತ್ಯವಾಣಿ,ಚಿತ್ರದುರ್ಗ,(ಆ.18) : ನಗರದಲ್ಲಿಂದು ನಡೆಯುತ್ತಿರುವ ಜನಾಶಿರ್ವಾದ ಯಾತ್ರೆಯ ನಡುವೆಯೂ ಸಹ ಕೊವೀಡ್ ಲಸಿಕಾ ಕೇಂದ್ರಕ್ಕೆ ಕೇಂದ್ರ ಸಚಿವ ನಾರಾಯಣ ಸ್ವಾಮಿ ಭೇಟಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಲಸಿಕೆ ಕೇಂದ್ರಕ್ಕೆ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಖುದ್ದು ತಾವೆ ನಿಂತು ಜನರಿಗೆ ಲಸಿಕೆಯನ್ನವಸಚಿವರು ಹಾಕಿಸಿದ್ದಾರೆ.ಇನ್ನೂ ಮೋದಿ ನೇತೃತ್ವದ ಸಂಪುಟದಲ್ಲಿ ನೂತನವಾಗಿ ಆಯ್ಕೆಯಾದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಇಂದು ಚಿತ್ರದುರ್ಗಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸಚಿವರು
ಲಸಿಕಾ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಸಚಿವರ ಜೊತೆ ಜಿಲ್ಲಾದಿಕಾರಿ ಕವಿತ ಎಸ್ ಮನ್ನಿಕೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಎ..ಮುರಳಿ ಜಿಲ್ಲಾ ಪಂಚಾಯತ್ ನ ಸಿಇಒ ನಂದಿನಿ ದೇವಿ, ಡಿ ಹೆಚ್ ಓ ರಂಗನಾಥ್, ಡಿ ಎಸ್ ಬಸವರಾಜ್, ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.