ನಿತ್ಯವಾಣಿ,ಚಿತ್ರದುರ್ಗ, (ಜೂನ್.12) :ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಮುದಾಯಗಳನ್ನು ಬೆಂಬಲಿಸಲು ತನ್ನ ಬದ್ಧತೆಯನ್ನು ಈಡೇರಿಸಿದ ವೇದಾಂತ ಇಂದು ಹುಬ್ಬಳ್ಳಿಯಲ್ಲಿ ರಾಜ್ಯದ ತನ್ನ ಎರಡನೇ ಅತ್ಯಾಧುನಿಕ 100 ಹಾಸಿಗೆಗಳ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಕಾರ್ಯಾರಂಭ ಮಾಡಿದೆ. ವೇದಾಂತದ ರಾಜ್ಯದ ಮೊದಲ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಇತ್ತೀಚೆಗೆ ಚಿತ್ರದುರ್ಗದಲ್ಲಿ ಉದ್ಘಾಟಿಸಲಾಯಿತು.
ಹುಬ್ಬಳ್ಳಿಯ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಇಂದು ಪ್ರಲ್ಹಾದ್ ಜೋಶಿ, ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಭಾರತ ಸರ್ಕಾರ ಅವರು ವೇದಾಂತ ಚೇರ್‍ಮನ್ ಅನಿಲ್ ಅಗರ್‍ವಾಲ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಇತರ ಗಣ್ಯರು- ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹುಬ್ಬಳ್ಳಿ- ಧಾರವಾಡ, ಕರ್ನಾಟಕ ಸರ್ಕಾರ, ಬಸವರಾಜ್ ಹೊರಟ್ಟಿ, ಸಭಾಪತಿ ಕರ್ನಾಟಕ ವಿಧಾನ ಪರಿಷತ್ತು, ಅರವಿಂದ್ ಬೆಲ್ಲದ್, ಶಾಸಕರು- ಧಾರವಾಡ ಪಶ್ಚಿಮ, ಪ್ರಸಾದ್ ಅಬ್ಬಯ್ಯ, ಶಾಸಕರು, ಹುಬ್ಬಳ್ಳಿ- ಧಾರವಾಡ ಪೂರ್ವ, ಅಮೃತ್ ದೇಸಾಯಿ, ಶಾಸಕರು, ಧಾರವಾಡ, ಪ್ರದೀಪ್ ಶೆಟ್ಟರ್, ಎಂಎಲ್ಸಿ, ಹುಬ್ಬಳ್ಳಿ- ಧಾರವಾಡ, ನೀತೇಶ್ ಪಾಟೀಲ್, ಜಿಲ್ಲಾಧಿಕಾರಿ, ಧಾರವಾಡ-ಹುಬ್ಬಳ್ಳಿ, ಸಾವಿಕ್ ಮಜುಂದಾರ್, ಸಿಇಒ- ಐರನ್ & ಸ್ಟೀಲ್ ಬಿಸಿನೆಸ್, ವೇದಾಂತ ಲಿಮಿಟೆಡ್, ಸುಜಲ್ ಷಾ, ಡೆಪ್ಯೂಟಿ ಸಿಇಒ, ಐರನ್ & ಸ್ಟೀಲ್ ಬಿಸಿನೆಸ್, ವೇದಾಂತ ಲಿಮಿಟೆಡ್ ಮತ್ತು ರಾಜ್ಯ ಮತ್ತು ಜಿಲ್ಲಾಡಳಿತ ಮತ್ತು ವೇದಾಂತದ ಇತರ ಅಧಿಕಾರಿಗಳು.
ಹುಬ್ಬಳ್ಳಿಯ ಕೋವಿಡ್ ಫೀಲ್ಡ್ ಆಸ್ಪತ್ರೆಯು ನಿರ್ಣಾಯಕ ರೋಗಿಗಳಿಗೆ ಆಮ್ಲಜನಕ ಮತ್ತು ವೆಂಟಿಲೇಟರ್‍ಗಳು ಸೇರಿದಂತೆ ಅತ್ಯುತ್ತಮವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿದೆ. ಒಟ್ಟು 200 ಕೋವಿಡ್ ಕೇರ್ ಹಾಸಿಗೆಗಳನ್ನು ಹೊಂದಿರುವ ಕರ್ನಾಟಕದ ಎರಡು ವೇದಾಂತ ಕೇರ್ಸ್ ಆಸ್ಪತ್ರೆಗಳು ಕೋವಿಡ್ -19 ಅನ್ನು ಎದುರಿಸಲು ಸರ್ಕಾರವನ್ನು ಬೆಂಬಲಿಸಲು ಭಾರತದಾದ್ಯಂತ 1,000 ಕೋವಿಡ್ ಕೇರ್ ಹಾಸಿಗೆಗಳನ್ನು ಸ್ಥಾಪಿಸುವ ವೇದಾಂತದ ಬದ್ಧತೆಗೆ ಅನುಗುಣವಾಗಿರುತ್ತವೆ.
ಕೋವಿಡ್ -19 ಎರಡನೇ ಅಲೆಯನ್ನು ಎದುರಿಸಲು ಸರ್ಕಾರದೊಂದಿಗೆ ಪಾಲುದಾರರಾದ ವೇದಾಂತದ ಪ್ರಯತ್ನವನ್ನು ಶ್ಲಾಘಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ, ಭಾರತ ಸರಕಾರ ಪ್ರಲ್ಹಾದ್ ಜೋಶಿ, ಅವರು ಹೇಳಿದರು, “ನನ್ನ ಕೋರಿಕೆಯ ಮೇರೆಗೆ ತಕ್ಷಣವೇ ಮುಂದೆ ಬಂದು ಹುಬ್ಬಳ್ಳಿ-ಧಾರವಾಡದಲ್ಲಿ ಕೋವಿಡ್ ಕೇರ್ ಆಸ್ಪತ್ರೆಯನ್ನು ಸ್ಥಾಪಿಸಿದ್ದಕ್ಕಾಗಿ ಅನಿಲ್ ಅಗರ್‍ವಾಲ್‍ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕೋವಿಡ್ ಎರಡನೇ ಅಲೆಯು ಅಪ್ಪಳಿಸಿದಾಗ ನಮ್ಮ ಗೌರವಾನ್ವಿತ ಪ್ರಧಾನಿಯವರು ಕೈಗಾರಿಕೋದ್ಯಮಿಗಳಿಗೆ ದೇಶವನ್ನು ಬೆಂಬಲಿಸುವಂತೆ ಕೇಳಿಕೊಂಡರು. ಅನಿಲ್ ಅಗರ್‍ವಾಲ್‍ಜಿ ಮತ್ತು ವೇದಾಂತ ಗ್ರೂಪ್ ಬಹಳ ಪರಿಣಾಮಕಾರಿ ಮತ್ತು ಆಕ್ರಮಣಕಾರಿ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ದಾಖಲೆಯ ಸಮಯದಲ್ಲಿ ಎರಡು ಕೋವಿಡ್ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಮೊದಲ ಅಲೆಯ ಸಮಯದಲ್ಲಿಯೂ ಸಹ ವೇದಾಂತ ವೈದ್ಯಕೀಯ ಸಲಕರಣೆಗಳು, ಮೂಲಸೌಕರ್ಯ ಬೆಂಬಲ, ಕೋವಿಡ್ ಔಷಧಿಗಳು ಇತ್ಯಾದಿಗಳನ್ನು ಒದಗಿಸಿದೆ. ಭಾರತ ಸರ್ಕಾರ ಮತ್ತು ಧಾರವಾಡದ ಜನರ ಪರವಾಗಿ, ಅನಿಲ್ ಅಗರ್‍ವಾಲ್ ಅವರಿಗೆ ಮತ್ತೊಮ್ಮೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.’’
ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹುಬ್ಬಳ್ಳಿ–ಧಾರವಾಡ ಅವರು ಹೇಳಿದರು, “ನಾನು ಪ್ರಲ್ಹಾದ್ ಜೋಶಿಜಿ ಅವರಿಗೆ ಕೋವಿಡ್ ಆಸ್ಪತ್ರೆಯ ಅಗತ್ಯತೆಯ ಬಗ್ಗೆ ಮನವಿ ಮಾಡಿದ್ದೆ ಮತ್ತು ಅವರ ಕೋರಿಕೆಯ ಮೇರೆಗೆ ಅನಿಲ್ ಅಗರ್‍ವಾಲ್‍ಜಿ ಈ ಆಸ್ಪತ್ರೆಯನ್ನು ಮಂಜೂರು ಮಾಡಿದರು ಮತ್ತು ಅಲ್ಪಾವಧಿಯಲ್ಲಿಯೇ ಅವರ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ ಈ ಪ್ರಮುಖ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದರು. ಈ ಬಿಕ್ಕಟ್ಟಿನ ಅವಧಿಯಲ್ಲಿ ಅವರು ಸಮಾಜಕ್ಕೆ ಮಾಡಿದ ಬಹಳ ಮುಖ್ಯವಾದ ಸೇವೆಗಾಗಿ ಅನಿಲ್ ಅಗರ್‍ವಾಲ್ ಜಿ ಅವರಿಗೆ ನಾನು ಆಭಾರಿಯಾಗಿದ್ದೆನೆ.’’
ಅನಿಲ್ ಅಗರ್ ವಾಲ್, ಚೇರ್‍ಮನ್, ವೇದಾಂತ ಅವರು ಹೇಳಿದರು, “ಸಮಾಜಕ್ಕೆ ಮರಳಿ ನೀಡುವ ನಮ್ಮ ಸಿದ್ಧಾಂತಕ್ಕೆ ನಾವು ಸಂಪೂರ್ಣ ಬದ್ಧರಾಗಿ್ದೀವೆ. ಸಾಂಕ್ರಾಮಿಕದ ಎರಡನೇ ಅಲೆಯು ಜೀವನ ಮತ್ತು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬೆಂಬಲಿಸಲು ನಾವು ಎಲ್ಲವನ್ನು ಮಾಡು ತಿದ್ದೇವೆ . ನಾವು ಎರಡು ವೇದಾಂತ ಕೇರ್ಸ್ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿರುವ ದೇಶದ ಎರಡು ರಾಜ್ಯಗಳಲ್ಲಿ ಕರ್ನಾಟಕವು ಒಂದು ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಮೂಲಕ ಇಲ್ಲಿನ ಸಮುದಾಯಗಳಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಹುಬ್ಬಳ್ಳಿಯಲ್ಲಿ ಎರಡನೇ ಆಸ್ಪತ್ರೆಯನ್ನು ಸ್ಥಾಪಿಸಲು ನಮಗೆ ಬೆಂಬಲ ನೀಡಿದ ಇಡೀ ಕೇಂದ್ರ ಆಡಳಿತಕ್ಕೆ ಮಾನ್ಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಜಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಸವಾಲನ್ನು ನಿವಾರಿಸುವಲ್ಲಿ ವೇದಾಂತ ರಾಷ್ಟ್ರದೊಂದಿಗೆ ಬಲವಾಗಿ ನಿಂತಿದೆ.’’
ಕೃಷ್ಣ ರೆಡ್ಡಿ, ನಿರ್ದೇಶಕರು, ವೇದಾಂತದ ಕಬ್ಬಿಣದ ಅದಿರು ಕರ್ನಾಟಕ ಅವರು ಹೇಳಿದರು, “ಕರ್ನಾಟಕದ ಕೋವಿಡ್ ಫೀಲ್ಡ್ ಆಸ್ಪತ್ರೆಗಳು ಸಮುದಾಯಗಳ ಬಗ್ಗೆ ಕಾಳಜಿ ವಹಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ವೇದಾಂತವು ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬದ್ಧವಾಗಿದೆ ಮತ್ತು ಕೋವಿಡ್ -19 ವಿರುದ್ಧ ದೇಶದ ಹೋರಾಟವನ್ನು ಬಲಪಡಿಸಲು ನಾವು ಸರ್ಕಾರ ಮತ್ತು ಸ್ಥಳೀಯ ಆಡಳಿತದೊಂದಿಗೆ ಪಾಲುದಾರಿಕೆ ಹೊಂದಿದೆ’’
,